viral video: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕುಡುಕನೊಬ್ಬ ಫುಟ್ ಪಾತ್ ಮೇಲೆ ಕುಳಿತಿದ್ದ ಹಾವನ್ನು ಎತ್ತಿಕೊಂಡು ಮಾತನಾಡುತ್ತಿರುವುದು ಕಂಡು ಬಂದಿದೆ. ಅಚ್ಚರಿಯ ಸಂಗತಿಯೆಂದರೆ ಅಪಾಯಕಾರಿ ಹಾವು ಕೂಡ ಆ ಮನುಷ್ಯನ ಕೃತ್ಯಗಳನ್ನು ಮೌನವಾಗಿ ಗಮನಿಸುತ್ತಲೇ ಇದ್ದು ಆತನಿಗೆ ಯಾವುದೇ ಹಾನಿ ಮಾಡಲಿಲ್ಲ.


COMMERCIAL BREAK
SCROLL TO CONTINUE READING

ಹಾವು ಎಂಬ ಹೆಸರು ಕೇಳುತ್ತಿದ್ದ ಹಾಗೆಯೇ ಎದೆಯಲ್ಲಿ ಭಯ ಶುರುವಾಗುತ್ತದೆ, ಕೈ ಕಾಲು ನಡುಗಲು ಆರಂಭಿಸುತ್ತದೆ. ಹಾವನ್ನು ನೋಡಿದರೆ ಕಾಲ್ಕಿತ್ತುವ ಜನರೇ ಹೆಚ್ಚು ಅಂತಹದ್ದರಲ್ಲಿ ಇಲ್ಲೊಬ್ಬ ವ್ಯಕ್ತಿ ದಾರಿಯ ಬದಿಯಲ್ಲಿ ಹೋಗುತ್ತದ್ದ ಹಾವನ್ನು ಕೈಯಲ್ಲೆತ್ತಿಕೊಂಡು ಅದರ ಜೊತೆ ಸಂಭಾಷಣೆ ನಡೆಸಲು ಪ್ರಾರಂಭಿಸಿದ್ದಾನೆ. ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಇದನ್ನೂ ಓದಿ: Viral video: ದಾರಿ ಮಧ್ಯೆ ಕಂಡುಬಂತು ಅಪರೂಪದ ಚಿನ್ನದ ಹಾವು! ದುಬೈನಿಂದ ತೆವೆಳುತ್ತಾ ಬಂತು ಎಂದ ನೆಟ್ಟಿಗರು


ಈ ನಡುವೆ ಮಳೆಹಾಗದ ಕಾರಣ ಹಾವುಗಳು ಎಲ್ಲಂದರಲ್ಲಿ ಕಂಡು ಬರುತ್ತಿದೆ, ಅದರಲ್ಲಂತೂ ಈ ನಡುವೆ ಕುಡುಕರು ಈ ಹಾವುಗಳನ್ನು ಕೈಲೆತ್ತಿಕೊಂಡು ಸಾಹಸಕ್ಕೆ ಕೈ ಹಾಕಿರುವ ದೃಶ್ಯಗಳಂತೂ ಆಗಾಗ ಸಾಮಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಲೆ ಇದೆ. @Woke_Nation_X ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೊ ಕೂಡ ಇದೇ ಗುಂಪಿಗೆ ಸೇರಿದ್ದು, ಒಬ್ಬ ಕುಡುಕ ತನ್ನ ಕೈಯಲ್ಲಿ ಹಾವನ್ನು ಎತ್ತಿಕೊಂಡು ಅದರ ಜೊತೆ ಮಾತನಾಡಲು ಆರಂಭಿಸಿದ್ದಾನೆ. ಅಪಾಯಕಾರಿಯಾಗಿ ಕಾಣುವ ಈ ಹಾವು ಕೂಡ ಮೌನವಾಗಿ  ಆತನ ನೋವಿನ ಕಥೆಯನ್ನು ಕೇಳಲು ಆರಂಭಿಸಿದೆ. ಮಾತನಾಡಿ ಸುಸ್ತಾದ ಈತ ಸ್ವಲ್ಪ ಸಮಯದ ನಂತರ ಹಾವನ್ನು ಬಿಟ್ಟು ಕಳುಹಿಸಿದ್ದಾನೆ. 


ಈ ವೀಡಿಯೊವನ್ನು ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ @Woke_Nation_ ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇನ್ನೂ ಈ ವಿಡಿಯೋವನ್ನು 9 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ಈತನ ಕುಡಿದ ಅಮಲಿನ ಸಾಹಸ ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.


ಇದನ್ನೂ ಓದಿ: ಕಾಮನ ಬಿಲ್ಲನ್ನು ಹೋಲುವಂತಿದೆ ಈ ಹಾವು! ಸ್ವರ್ಗದಿಂದ ಧರೆಗಿಳಿದಂತಿದೆ ಧೈತ್ಯ ಹೆಬ್ಬಾವು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.