Viral video of hanuman: ನಮ್ಮ ಸುತ್ತಲೂ ದಿನಕ್ಕೊಂದು ಪವಾಡ ನಡೆಯುತ್ತಿರುತ್ತದೆ. ಭಾರದಲ್ಲಿ ಅಂತೂ ದೇವರ ಹಲವಾರು ಪವಾಡಗಳು ದಿನೇ ದಿನೇ ಹೊರಬರುತ್ತಲೇ ಇರುತ್ತದೆ. ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ ಆಂಜನೇಯ ಸ್ವಾಮಿ ದರ್ಶನ ನೀಡಿರುವ ದೃಶ್ಯ ವೈರಲ್‌ ಆಗುತ್ತಿದೆ.


COMMERCIAL BREAK
SCROLL TO CONTINUE READING

ಹನುಮಂತ...ರಾಮ ಭಕ್ತ...ಭಕ್ತರು ಕರೆದ ಒಡನೆ ಬಂದು ಕಷ್ಟಗಳನ್ನು ಮರೆ ಮಾಡುವ ಶಕ್ತಿ ಉಳ್ಳವು. ಸಾಕಷ್ಟು ಜನ ಹನುಂತನಿಗೆ ಶನಿವಾರ ಬಂತೆಂದರೆ ವಿಶೇಷ ಪೂಜೆ ಸಲ್ಲಿಸುತ್ತಾರೆ, ಆಪಾರ ಭಕ್ತರು ಹನುಮಂತನ್ನು ಹೃದಯದಲ್ಲಿಟ್ಟು ಪೂಜಿಸುತ್ತಾರೆ. ಹೀಗಿರುವಾಗ ಹನುಮಂತನೇ ಭಕ್ತಾದಿಗಳ ಎದುರಿಗೆ ಬಂದು ದರ್ಶನ ಕೊಟ್ಟರೆ ಹೇಗಿರುತ್ತೆ ಊಹಿಸಿ ನೋಡಿ.


ವೈರಲ್‌ ಆಗುತ್ತಿರುವ ಈ ವಿಡಿಯೋದಲ್ಲಿ ಹನುಮಂತ ಆಕಾಶದಲ್ಲಿ ಹಾರಿಬಂದು ತನ್ನ ಭಕ್ತರಿಗೆ ದರ್ಶನ ನೀಡಿದ್ದಾನೆ ಎಂದು ತೋರಿಸಲಾಗಿದೆ. ಆಕಾಶದಲ್ಲಿ ಕಾಣುತ್ತಿರು ಬಿಂಬ ಹನುಮಂತನಂತೆ ಕಂಡರೂ ಸಹ ಪರಿಪೂರ್ಣವಾಗಿ ಅದು ಏನೆಂದು ಕಂಡು ಹಿಡಿಯಲು ಆಗಲಿಲ್ಲ. 


ವಿಡಯೋ ನೋಡಿ ಕೆಲವರು ಇದು ಹನುಮಂತ ಎಂದರೆ ಇನ್ನೂ ಕೆಲವರು ಇದನ್ನು ಏಲಿಯನ್‌ನ ದೃಶ್ಯ ಎನ್ನುತ್ತಿದ್ದಾರೆ. ಇನ್ನೂ ಕೆಲವರಂತೂ ಇದು ಎಡಿಟ್‌ ಮಾಡಲಾರುವ ವಿಡಿಯೋ ಎನ್ನುತ್ತಿದ್ದಾರೆ. ಯಾರು ಎಷ್ಟೇ ಚರ್ಚೆ ಮಾಡಿದರೂ ಸಹ ಈ ವಿಡಯೋದ ಹಿಂದಿನ ಅಸಲಿಯತ್ತು ಏನು ಎಂಬುದನ್ನು ಯಾರಿಂದಲೂ ಸಹ ಪತ್ತೆ ಹಚ್ಚಲು ಸಾದ್ಯವಾಗಲಿಲ್ಲ.


ಕನ ನಿಬೀಡ ಪ್ರದೇಶದ ವಿಶಾಲವಾದ ಆಕಾಶದಲ್ಲಿ ಪಕ್ಷಿಯಂತೆ ಒಂದು ಬಿಂಬ ಹಾರುತ್ತಾ ಬರುತ್ತದೆ ದೂರದಿಂದ ನೋಡುವುದಕ್ಕೆ ಈ ಬಿಂಬ ಸಾಕ್ಷಾತ್‌ ಹನುಂತನಂತೆ ಕಾಣುತ್ತಿದೆ. ಹಾರುತ್ತಾ ಬರುವ ಈ ಬಿಂಬ ಒಂದೆ ಭಾರಿಗೆ ನಿಂತು ಕೆಳಗೆ ನಿಂತಿರುವ ಜನರನ್ನು ನೋಡುತ್ತದೆ. ನಂತರ ಕೆಲವು ಕ್ಷಣಗಳ ಬಳಿಕ ಮುಂದೆ ಹಾರಿ ಹೋಗುತ್ತದೆ. ಮತ್ತೆ ಹಿಂತಿರುಗಿ ಬರುವ ಈ ಬಿಂಬ ಜೋರಾಗಿ ಹಾರಿ ಹೋಗಿ ಮರೆಯಾಗುತ್ತದೆ. ಸ್ಥಳದಲ್ಲಿ ನೆರೆದಿದ್ದ ಜನರೆಲ್ಲಾ ಈ ದೃಶ್ಯ ನೋಡಿ ಬೆರಗಾಗುತ್ತಾರೆ.


ಈ ದೃಶ್ಯ ನೋಡಿದ ಜನ ಅಷ್ಟೆ ಅಲ್ಲ, ಈ ವೈರಲ್‌ ಆಗುತ್ತಿರುವ ವಿಡಿಯೋ ನೋಡಿದ ಜನ ಇದೀಗ ಶಾಕ್‌ ಆಗಿದ್ದಾರೆ. ಈ ವಿಡಿಯೋದಲ್ಲಿನ ಚಿತ್ರ ಸಾಕ್ಷಾತ್‌ ಹನುಮಂತನಾ ಅಥವಾ ಏಲಿಯನಾ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ. ಈ ವಿಡಿಯೋ ಎಷ್ಟೆ ಹಳೆಯದ್ದಾದರೂ ಸಹ ಇನ್ನೂ ಸಹ ಈ ವಿಡಿಯೋ ನೋಡಿದ ಜನ ಅಚ್ಚರಿ ವ್ಯಕ್ತ ಪಡಿಸುತ್ತಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.