Noida Viral Video: ನೋಯ್ಡಾದ ಖಾಸಗಿ ಶಾಲೆಯೊಂದರ ತರಗತಿಯಲ್ಲೇ ವಿದ್ಯಾರ್ಥಿಗಳು ಪರಸ್ಪರ ಕಿಸ್ ಮಾಡಿರುವ ವೀಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್ ಆಗಿದೆ. ಹೌದು, ಕ್ಲಾಸಿನ ಲಾಸ್ಟ್‌ ಬೆಂಚ್‌ನಲ್ಲಿ ಕುಳಿತು ಹುಡುಗ ಮತ್ತು ಹುಡುಗಿ ಲಿಪ್‌ಲಾಕ್‌ ಮಾಡಿರುವ ವಿಡಿಯೋ ಸಖತ್‌ ಸೌಂಡ್‌ ಮಾಡುತ್ತಿದೆ. ಜ್ಞಾನ ದೇಗುಲದಲ್ಲಿ ನಡೆದಿರುವ ಈ ಘಟನೆಗೆ ವ್ಯಾಪಕ ಆಕ್ರೋಶ ಸಹ ವ್ಯಕ್ತವಾಗಿದೆ. 


COMMERCIAL BREAK
SCROLL TO CONTINUE READING

ವೈರಲ್ ಆಗಿರುವ ಈ ವಿಡಿಯೋದಲ್ಲಿ ಶಾಲೆಯ ಸಮವಸ್ತ್ರ ಧರಿಸಿರುವ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ತರತಿಯ ಲಾಸ್ಟ್‌ ಬೆಂಚ್‌ನಲ್ಲಿ ಕುಳಿತು ಪರಸ್ಪರ ಕಿಸ್ ಮಾಡಿದ್ದಾರೆ. ಅವರ ಪಕ್ಕದಲ್ಲೇ ಇತರೆ ವಿದ್ಯಾರ್ಥಿಗಳು ಇದ್ದರೂ ಅದನ್ನು ಲೆಕ್ಕಿಸದೇ ತಮ್ಮಷ್ಟಕ್ಕೆ ತಾವೇ ಕಿಸ್ಸಿಂಗ್‌ನಲ್ಲಿ ತೊಡಗಿಕೊಂಡಿದ್ದಾರೆ. ವಿದ್ಯಾರ್ಥಿಗಳ ಈ ನಡೆಗೆ ನೆಟಿಜನ್ಸ್‌ ಕಿಡಿಕಾರಿದ್ದಾರೆ. 


ಇದನ್ನೂ ಓದಿ: ಚಿನ್ನ, ವಜ್ರಕ್ಕಿಂತಲೂ ದುಬಾರಿ ವಸ್ತು ವಶಕ್ಕೆ; ಕೇವಲ 50ಗ್ರಾಂಗೆ 850 ಕೋಟಿ ರೂ.!


ಅಂದಹಾಗೆ ಈ ವಿಡಿಯೋದಲ್ಲಿ ಹುಡುಗಿಯೇ ಹುಡುಗನ ಹೆಗಲ ಮೇಲೆ ಕೈಹಾಕಿ ಆತನನನ್ನು ಎಳೆದುಕೊಂಡು ಲಿಪ್‌ಲಾಕ್‌ ಮಾಡಿದದ್ದಾಳೆ. ಆ ಕಡೆ ಈ ಕಡೆ ನೋಡುತ್ತಾ ಹುಡುಗನಿಗೆ ಕಿಸ್‌ ಮಾಡಿದ್ದಾಳೆ. ವಿದ್ಯಾರ್ಥಿನಿ ಕಿಸ್ ಮಾಡುತ್ತಿದ್ದ ವೇಳೆ ವಿದ್ಯಾರ್ಥಿ ಸಾಕು ನಿಲ್ಲಿಸು ಅಂತಾ ಕೈ ಅಡ್ಡ ಇಟ್ಟಿದ್ದಾನೆ. ಆದರೆ ವಿದ್ಯಾರ್ಥಿನಿಯೇ ಬಲವಂತವಾಗಿ ಆತನಿಗೆ ಕಿಸ್‌ ಮಾಡಿದ್ದಾಳೆ. ಈ ದೃಶ್ಯವನ್ನು ಸಹಪಾಠಿಗಳೇ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.


ಮನೋಜ್ ಶರ್ಮಾ ಎಂಬುವವರು ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ʼಶಾಲಾ ತರಗತಿಯಲ್ಲೇ ಅಶ್ಲೀಲತೆ ಹೇಗಿದೆ ನೋಡಿ... ನೋಯ್ಡಾದ ಕ್ಲಾಸ್‌ರೂಮ್‌ನಲ್ಲೇ ರೋಮ್ಯಾನ್ಸ್‌ ನಡೆಯುತ್ತಿದೆ. ಈ ರೀತಿ ಮಾಡಿದ ವಿದ್ಯಾರ್ಥಿಗಳಿಗೆ ಯಾವ ರೀತಿಯ ಶಿಕ್ಷೆ ವಿಧಿಸಬೇಕು. ಇದಕ್ಕೆ ಅನುವು ಮಾಡಿಕೊಟ್ಟ ಶಾಲಾ ಆಡಳಿತ ಮಂಡಳಿ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕು? ಅಂತಾ ಪ್ರಶ್ನಿಸಿದ್ದಾರೆ.  


World Lion Day History: ವಿಶ್ವ ಸಿಂಹ ದಿನದ ಇತಿಹಾಸದ ಬಗ್ಗೆ ಇಲ್ಲಿದೆ ಅಪರೂಪದ ಮಾಹಿತಿ..! ವನರಾಜನ ಮಹತ್ವ ಸಾರುವ ಈ ದಿನ ನಮಗೆಷ್ಟು ಮುಖ್ಯ..!  


ಇದು ನೋಯ್ಡಾದ ಯಾವ ಶಾಲೆಯಲ್ಲಿ ನಡೆದಿದೆ ಅನ್ನೋ ಮಾಹಿತಿ ತಿಳಿದುಬಂದಿಲ್ಲ. ಆದರೆ ಶೇರ್‌ ಆದ ಕೆಲವೇ ಗಂಟೆಗಳಲ್ಲಿಯೇ ಈ ವಿಡಯೋ ಸಖತ್‌ ವೈರಲ್‌ ಆಗಿದೆ. ಲಕ್ಷಾಂತರ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆ ಹಾಗೂ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದ ಅನೇಕರು ಆಗ್ರಹಿಸಿದ್ದಾರೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.