ವಿಶಾಲ ಗಾತ್ರದ ಹಾವು ಹಿಡಿದ ಈ ಪೋರನ ಧೈರ್ಯ ಮೆಚ್ಚಲೇಬೇಕು... ಎದೆ ಝಲ್ ಎನ್ನಿಸುವಂತಿದೆ ಈ ವಿಡಿಯೋ!
Viral Video: ಪುಟಾಣಿ ಪೋರನೊಬ್ಬ ಜನರನ್ನು ರಕ್ಷಿಸಲು ದೈತ್ಯ ಗಾತ್ರದ ಹಾವನ್ನು ಹಿಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಆತನ ಈ ಸಾಹಸ ಎದೆ ಒಂದು ಕ್ಷಣ ಝಲ್ ಎನ್ನಿಸುವಂತಿದೆ. ಜನ ಈ ಬಾಲಕದ ಧೈರ್ಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ (Viral News In Kannada).
ಬೆಂಗಳೂರು: ಅಪಾಯಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿದೆ. ಇತ್ತೀಚೆಗಷ್ಟೇ ಈ ವಿಡಿಯೋ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪ್ರಕಟಗೊಂಡಿದ್ದು, ವಿಡಿಯೋದಲ್ಲಿ ವ್ಯಕ್ತಿಯೊಬ್ಬ ದೈತ್ಯ ಹಾವನ್ನು ಹಿಡಿಯುತ್ತಿರುವುದನ್ನು ನೀವು ನೋಡಬಹುದು. ಅಷ್ಟೊತ್ತಿಗೆ ಪುಟಾಣಿ ಪೊರನೊಬ್ಬ ಈ ಸೀನ್ ಗೆ ಎಂಟ್ರಿ ನೀಡುತ್ತಾನೆ ಮತ್ತು ಹಾವನ್ನು ಹಿಡಿಯಲು ಪ್ರಾರಂಭಿಸುತ್ತಾನೆ. ಅದನ್ನು ನೋಡಿ ಅಲ್ಲಿ ನಿಂತಿರುವವರ ಕಾಲು ಕೆಳಗಿನ ನೆಲವೆ ಕುಸಿಯುತ್ತಿದೆ . ಆದರೆ ಕೆಲವೇ ಸಮಯದಲ್ಲಿ ಅಲ್ಲಿದ್ದ ಜನರು ದೈತ್ಯ ಹಾವನ್ನು ಚೀಲಕ್ಕೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ವೈರಲ್ ಆಗಿರುವ ವಿಡಿಯೋ ಕರ್ನಾಟಕದ ಶಾಲಿಗ್ರಾಮದ್ದು ಎನ್ನಲಾಗಿದೆ. ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ವೀಡಿಯೊವನ್ನು DpHegde ಎಂಬ ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ. ಇದರಲ್ಲಿ ವಯಸ್ಸಾದ ವ್ಯಕ್ತಿಯೊಬ್ಬರು ದೊಡ್ಡ ಹೆಬ್ಬಾವನ್ನು ಬಾಲದಿಂದ ಹಿಡಿದಿರುವುದು ಕಂಡುಬರುತ್ತದೆ, ಹುಡುಗನು ಬರೀ ಕೈಗಳಿಂದ ಬಂದು ಹಾವಿನ ಕುತ್ತಿಗೆಯನ್ನು ಹಿಡಿಯುತ್ತಾನೆ. ಬಾಲಕನ ಇದೆ ಧೈರ್ಯಕ್ಕೆ ನೆಟ್ಟಿಗರು ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ-ನಡು ರಸ್ತೆಯಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುವ ಲಲನೆಯರು, ತುಂಟ ನಾಯಿ ಮಾಡಿದ್ದೇನು ನೀವೇ ನೋಡಿ!
ವೀಡಿಯೊದಲ್ಲಿ, ಅಪ್ರಾಪ್ತ ವಯಸ್ಸಿನ ಪೋರ ದೊಡ್ಡ ಹೆಬ್ಬಾವನ್ನು ಅದರ ಬಾಲದ ಭಾಗದಿಂದ ಹಿಡಿಯಲು ಹೋಗುತ್ತಾನೆ. ಆರಂಭದಲ್ಲಿ ಹುಡುಗ ಹಿಂಜರಿಯುತ್ತಾ ಹಾವಿನ ಕುತ್ತಿಗೆಯನ್ನು ಹಿಡಿಯಲು ಪ್ರಯತ್ನಿಸುತ್ತಾನೆ. ಆದರೆ ಕೆಲವೊಮ್ಮೆ ಕುತ್ತಿಗೆ ಹಿಡಿಯಲು ಆತ ವಿಫಲನಾಗುತ್ತಾನೆ. ಕೊನೆಗೆ ಆತ ಅದರ ಕುತ್ತಿಗೆ ಹಿಡಿಯುವಲ್ಲಿ ಯಶಸ್ವಿಯಾಗುತ್ತಾನೆ. ಬಾಲಕನ ಕೈಯಲ್ಲಿರುವ ಹೆಬ್ಬಾವು ಆತನ ಕೈಗಳಿಗೆ ಗಟ್ಟಿಯಾಗಿ ಸುತ್ತಿಕೊಳ್ಳಲು ಆರಂಭಿಸುತ್ತದೆ. ಆದರೂ ಬಾಲಕ ಮಾತ್ರ ಹಾವಿನ ಬಾಯಿಯನ್ನು ಬಿಡುವುದೇ ಇಲ್ಲ. ಬಾಲಕ ತೋರಿದ ಈ ಧೈರ್ಯ ಕಂಡು ನೆರೆದ ಜನರಲ್ಲಿನ ಮತ್ತೆ ಕೆಲವರಿಗೆ ಧೈರ್ಯ ಬರುತ್ತದೆ ಮತ್ತು ಎಲ್ಲರೂ ಸೇರಿ ಆ ಹಾವನ್ನು ಗೋಣಿಚೀಲದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗುತ್ತಾರೆ.
ಜನರು ವೀಡಿಯೊವನ್ನು ಇಷ್ಟಪಡುತ್ತಿದ್ದಾರೆ
ಈ ವೀಡಿಯೊವನ್ನು ಇದುವರೆಗೆ 168.2 K ಸಾಮಾಜಿಕ ಮಾಧ್ಯಮ ಬಳಕೆದಾರರು ವೀಕ್ಷಿಸಿದ್ದಾರೆ. ಅಲ್ಲದೇ ಇದುವರೆಗೆ 1300ಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ಲೈಕ್ ಮಾಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ವಿಡಿಯೋಗೇ ಪ್ರತಿಕ್ರಿಯೆಗಳನ್ನು ಕೂಡ ನೀಡುತ್ತಿದ್ದಾರೆ.
ಇಲ್ಲಿದೆ ವೈರಲ್ ವಿಡಿಯೋ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ