ತಿರುಪತಿ: ವ್ಯಕ್ತಿಯೊಬ್ಬನಿಗೆ ಟ್ರಾಫಿಕ್ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಿರುಪತಿ ಜಿಲ್ಲೆಯ ಎಐಆರ್ ಬೈಪಾಸ್ ರಸ್ತೆಯ ಅನ್ನಮಯ್ಯ ವೃತ್ತದಲ್ಲಿ ಈ ಘಟನೆ ನಡೆದಿದೆ. ಲಾರಿ ಚಾಲಕನಿಗೆ ಬೂಟು ಕಾಲಿಂದ ಒದ್ದು, ಮನಬಂದಂತೆ ಥಳಿಸಿದ ಕಾನ್ಸ್​ಟೇಬಲ್​ನನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಆಗಿದ್ದೇನು..?


ಭಾನುವಾರ ಕುಡಿದ ಮತ್ತಿನಲ್ಲಿ ಲಾರಿ ಚಾಲಕನೊಬ್ಬ RC ಪುರಂ ರಸ್ತೆಯ ಮೂಲಕ ಪ್ರಯಾಣಿಸುತ್ತಿದ್ದ ಆಂಧ್ರಪ್ರದೇಶ ಸಾರಿಗೆ ಸಂಸ್ಥೆಯ ಚಾಲಕನೊಂದಿಗೆ ಜಗಳವಾಡುತ್ತಿದ್ದ. ಕುಡಿದು ಗಲಾಟೆ ಮಾಡಿದ್ದಲ್ಲದೆ ಅಡ್ಡರಸ್ತೆಯಲ್ಲಿ ಲಾರಿ ನಿಲ್ಲಿಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದ ಎನ್ನಲಾಗಿದೆ. ಈ ವೇಳೆ ಮಧ‍್ಯಪ್ರವೇಶಿಸಿದ ಕರ್ತವ್ಯನಿರತ ಟ್ರಾಫಿಕ್ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಟಿ.ಜಗದೀಶ್ ಕಿಶೋರ್ ಕುಡುಕ ವ್ಯಕ್ತಿಗೆ ಟ್ರಾಫಿಕ್ ಕ್ಲಿಯರ್ ಮಾಡುವಂತೆ ಸೂಚಿಸಿದ್ದಾರೆ.


ವಧು ದಕ್ಷಿಣೆ ಕೊಟ್ಟು ಮೇಕೆಯನ್ನು ವರಿಸಿದ ಭೂಪ! ಕಾರಣವೇ ವಿಚಿತ್ರ


ಆದರೆ, ಕುಡಿದ ಮತ್ತಿನಲ್ಲಿದ್ದ ಲಾರಿ ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಟ್ರಾಫಿಕ್ ಪೇದೆಗೆ ಅವಾಜ್ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಇದರಿಂದ ಕೋಪಗೊಂಡ ಟ್ರಾಫಿಕ್ ಪೇದೆ ಲಾರಿ ಚಾಲಕನಿಗೆ ಮನಬದಂತೆ ಥಳಿಸಿ ಬೂಟು ಕಾಲಿಂದ ಜಾಡಿಸಿ ಒದ್ದಿದ್ದಾರೆ. ವ್ಯಕ್ತಿಯೊಬ್ಬನಿಗೆ ಟ್ರಾಫಿಕ್ ಪೊಲೀಸ್ ಒದೆಯುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಘಟನೆ ಬಳಿಕ ಪೊಲೀಸ್ ಕಾನ್‌ಸ್ಟೆಬಲ್‍ರನ್ನು ಅಮಾನತುಗೊಳಿಸಲಾಗಿದೆ.


'ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಲಾರಿ ನಿಲ್ಲಿಸಿ ಗಲಾಟೆ ಮಾಡಿದ್ದಾನೆ. ರಸ್ತೆ ಕ್ಲಿಯರ್ ಮಾಡುವಂತೆ ಸೂಚಿಸಿದರೂ ಟ್ರಾಫಿಕ್ ಕಾನ್‌ಸ್ಟೆಬಲ್ ಜೊತೆಗೆ ಜಗಳಕ್ಕಿಳಿದಿದ್ದಾನೆ. ಹೀಗಾಗಿ ಉದ್ದೇಶಪೂರ್ವವಾಗಿ ಲಾರಿ ಚಾಲಕನಿಗೆ ಟ್ರಾಫಿಕ್ ಪೇದೆ ಥಳಿಸಿಲ್ಲ'ವೆಂದು ಪೊಲೀಸ್ ಅಧಿಕಾರಿಗಳು ಘಟನೆಯನ್ನು ಸಮರ್ಥಿಸಿಕೊಂಡಿದ್ದಾರೆ.


ಇದನ್ನೂ ಓದಿ: ಈ ದೇಶದಲ್ಲಿ ಟಿವಿಗಿಂತ ದುಬಾರಿಯಾಗಿದೆ ಕಾಂಡೋಮ್‌!


'ವೈರಲ್ ಆಗಿರುವ ವಿಡಿಯೋ ಪ್ರಕಾರ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಟ್ರಾಫಿಕ್ ಪೇದೆ ಆತನಿಗೆ ಹಿಂಸಿಸಿದಂತೆ ತೋರುತ್ತಿದೆ. ನಾವು ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಸದ್ಯ ಟ್ರಾಫಿಕ್ ಪೇದೆಯನ್ನು ಅಮಾನತುಗೊಳಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.   


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.