ನವದೆಹಲಿ: ಭಾರತದಲ್ಲಿ ಪ್ರಸ್ತುತ ಚಳಿಗಾಲದ ಋತು ನಡೆಯುತ್ತಿದೆ. ಚಳಿಗಾಲದಲ್ಲಿ ಹೆಚ್ಚು ಸೇವಿಸುವ ವಸ್ತುವೆಂದರೆ ಅದು ಚಹಾ. ಸಾಮಾನ್ಯವಾಗಿ ಚಹಾ ಕುಡಿಯದವರೂ ಕೂಡ  ಚಳಿಗಾಲದಲ್ಲಿ ಚಹಾವನ್ನು ನಿರಾಕರಿಸುವುದಿಲ್ಲ. ಭಾರತದಲ್ಲಿ ಎಷ್ಟರ ಮಟ್ಟಿಗೆ ಚಹಾ ಸೇವಿಸಲಾಗುತ್ತದೆ ಎಂದರೆ, ಅದನ್ನು ಭಾರತದ ರಾಷ್ಟ್ರೀಯ ಪಾನೀಯವೆಂದು ಘೋಷಣೆಯಾದರೂ ಅತಿಶಯೋಕ್ತಿ ಅಲ್ಲ ಎನ್ನುವಂತಹ ಸ್ಥಿತಿ ಇದೆ. ನೀವು ರೈಲಿನಲ್ಲಿ ಪ್ರಯಾಣಿಸಿದರೆ, ಪ್ರತಿ 5 ನಿಮಿಷಗಳಿಗೊಮ್ಮೆ ನಿಮ್ಮ ಕೋಚ್ ಮೂಲಕ ಚಹಾ ಮಾರುವವರನ್ನು ನೀವು ಕಾಣಬಹುದು. 'ಚಾಯ್-ಚಾಯ್' ಶಬ್ದ ನಮ್ಮ ಕಿವಿಯಲ್ಲಿ ಪ್ರತಿಧ್ವನಿಸುತ್ತಲೇ ಇರುತ್ತದೆ. ಆದರೆ ರೈಲಿನಲ್ಲಿ ಟೀ ಹೇಗೆ ತಯಾರಿಸಲಾಗುತ್ತದೆ ಎಂಬುದರ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ವೈರಲ್ ಆಗತೊಡಗಿದೆ. ರೈಲಿನಲ್ಲಿ ಚಹಾ ಹೇಗೆ ತಯಾರಿಸುತ್ತಾರೆ ಎಂಬುದನ್ನು ನೋಡಿದರೆ, ಬಹುಶಃ ನೀವು ಮತ್ತೆ ನಿಮ್ಮ ಲೈಫಲ್ಲೆ ರೈಲಿನಲ್ಲಿ ಚಹಾ ಕುಡಿಯುವುದಿಲ್ಲ. (Viral News In Kannada)


COMMERCIAL BREAK
SCROLL TO CONTINUE READING

ರೈಲಿನಲ್ಲಿ ಟೀ ಹೇಗೆ ತಯಾರಿಸಲಾಗುತ್ತದೆ?
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ವಿಡಿಯೋ ರೈಲಿನಲ್ಲಿ ಚ್ತ್ರೀಕರಿಸಲಾಗಿದೆ. ಇದರಲ್ಲಿ ಯುವಕನೊಬ್ಬ ತನ್ನ ಫೋನ್‌ನಲ್ಲಿ ಇಬ್ಬರು ರೈಲು ಉದ್ಯೋಗಿಗಳ ವಿಡಿಯೋ ಮಾಡುತ್ತಿದ್ದಾನೆ. ರೈಲು ಸಿಬ್ಬಂದಿ ಊಟೋಪಚಾರದಿಂದ ಬಂದವರು. ಅವರು ಚಹಾ ತಯಾರಿಸುತ್ತಾ ಕುಳಿತಿದ್ದಾರೆ.  ಅವರ ಟೀ ಮಾಡುವ ಶೈಲಿಯೇ ಬೇರೆ. ಕೈ ಮತ್ತು ಬಾಯಿ ತೊಳೆಯಲು ರೈಲಿನಲ್ಲಿ ಅಳವಡಿಸಲಾಗಿರುವ ಟ್ಯಾಪ್ ಅನ್ನು ನೀವು ನೋಡಬಹುದು. ಆ ಟ್ಯಾಪ್ ನೀರಿನಿಂದ ಟೀ ತಯಾರಿಸಲಾಗುತ್ತಿದೆ. ಇದಲ್ಲದೆ, ಸ್ನಾನದ ನೀರನ್ನು ಸಾಮಾನ್ಯವಾಗಿ ಬಿಸಿಮಾಡಲು ಬಳಕೆಯಾಗುವ ಹೀಟರ್ ರಾಡ್ ಬಳಸಿ ಅವರು ಚಹಾವನ್ನು ಬಿಸಿ ಮಾಡುತ್ತಿದ್ದಾರೆ. ವಿಡಿಯೋ ಮಾಡುವ ವ್ಯಕ್ತಿ ಇಬ್ಬರನ್ನೂ 'ಏನು ಮಾಡುತ್ತಿರುವಿರಿ ಭಯ್ಯಾ' ಎಂದು ಪ್ರಶ್ನಿಸುತ್ತಾನೆ. ಈ ಹಂತದಲ್ಲಿ ವೀಡಿಯೊ ಕೊನೆಗೊಳ್ಳುತ್ತದೆ. ಈ ವೀಡಿಯೊವನ್ನು @rohit_mehani ಎಂಬ ಬಳಕೆದಾರರು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಇದುವರೆಗೆ ಸುಮಾರು ಐದು ಲಕ್ಷ ಬಾರಿ ವಿಡಿಯೋವನ್ನು ವೀಕ್ಷಿಸಲಾಗಿದೆ. 


ಇದನ್ನೂ ಓದಿ-Viral Video: ಹಾಡುಹಗಲೇ ಸ್ಟೇಟ್ ಬ್ಯಾಂಕ್ ಪ್ರವೇಶಿಸಿದ ಗೂಳಿ... ಮುಂದೆನಾಯ್ತು ತಿಳಿಯಲು ಈ ವಿಡಿಯೋ ನೋಡಿ!
 
ರೈಲ್ವೆ ಆಡಳಿತವನ್ನು ಪ್ರಶ್ನಿಸಿದ ಜನ
ವೈರಲ್ ಆಗುತ್ತಿರುವ ಈ ವೀಡಿಯೋ ನೋಡಿದ ಬಳಕೆದಾರರು ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ. 'ಭಾರತದಲ್ಲಿ ಸ್ವಚ್ಛತೆ ಕಾನೂನುಬಾಹಿರ ಎಂಬುದು ನಿಮಗೆ ತಿಳಿದಿದೆಯೇ’ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು 'ಇವರು ಖಂಡಿತ ಉತ್ತರ ಭಾರತದವರಾಗಿರಬೇಕು' ಎಂದಿದ್ದಾರೆ. ' ಇದೆ ರೈಲ್ವೇ ಟೀ ಬಿಸಿನೀರಿನಂತೆ ಇರುತ್ತದೆ’ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ತಮಾಷೆಯ ಧಾಟಿಯಲ್ಲಿ ಬರೆದುಕೊಂಡ ಮತ್ತೊರ್ವ ಬಳಕೆದಾರರು ‘ಇದನ್ನು ಕುಡಿದು ನಾನು ಬದುಕಿದ್ದೇನೆ ಎಂದರೆ ನಾನೇ ಖಂಡಿತವಾಗಿ ದೇವರು’  ಮತ್ತೊರ್ವ ಬುದ್ಧಿವಂತ ಬಳಕೆದಾರರು 'ನೀವು ಈ ಉದ್ಯೋಗಿಗಳನ್ನು ಪ್ರಶ್ನಿಸುವ ಬದಲು ರೈಲ್ವೆ ಸಚಿವರನ್ನು ಒಮ್ಮೆ ಪ್ರಶ್ನಿಸಿ' ಎಂದು ಬರೆದಿದ್ದಾರೆ.


ಇದನ್ನೂ ಓದಿ-Viral Video: ರೈಲು ಪ್ರಯಾಣದ ವೇಳೆ ಐಆರ್ಸಿಟಿಸಿ ಸ್ಟಾಲ್ ನಿಂದ ಆಹಾರ ಆರ್ಡರ್ ಮಾಡುವ ಮುನ್ನ ಈ ವಿಡಿಯೋ ಒಮ್ಮೆ ಖಂಡಿತ ನೋಡಿ!


ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ


 

 

 

 



 

 

 

 

 

 

 

 

 

 

 

A post shared by Rohit_mehani (@rohit_mehani)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ