ಪ್ರತಾಪಗಢ: ಜಸ್ಟ್ ಕೈಯಿಂದ ತಳ್ಳಿದ್ದರಿಂದ ನಿರ್ಮಾಣ ಹಂತದಲ್ಲಿರುವ ಸರ್ಕಾರಿ ಕಾಲೇಜು ಕಟ್ಟಡದ ಗೋಡೆಯೊಂದು ಕುಸಿದುಬಿದ್ದಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಎಂಜಿನಿಯರಿಂಗ್‌ ಕಾಲೇಜಿನ ಅತ್ಯಂತ ಕಳಪೆ ಕಾಮಗಾರಿ ಮೂಲಕ ಇದೀಗ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ವ್ಯಾಪಕ ಟೀಕೆಗೆ ಗುರಿಯಾಗಿದೆ.


COMMERCIAL BREAK
SCROLL TO CONTINUE READING

ಸಮಾಜವಾದಿ ಪಕ್ಷದ ಶಾಸಕ ಆರ್‌.ಕೆ.ವರ್ಮಾ ಅವರು ಇಟ್ಟಿಗೆ ಗೊಡೆಯನ್ನು ಜಸ್ಟ್ ತಳ್ಳುತ್ತಾರಷ್ಟೇ. ಅವರು ಗೋಡೆ ಮೇಲೆ ನಿಧಾನವಾಗಿ ಬಲ ಪ್ರಯೋಗಿಸಿದರೂ  ಸಹ ಗೋಡೆ ಕುಸಿದುಬಿದ್ದಿದ್ದು, ಕಾಮಗಾರಿಯ ಗುಣಮಟ್ಟದ ಬಗ್ಗೆ ಅನೇಕರು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: Gujarat Riots 2002 : ಗೋಧ್ರಾ ಹತ್ಯಾಕಾಂಡ ಪ್ರಕರಣ : ಪಿಎಂ ಮೋದಿಗೆ ಸುಪ್ರೀಂ ಕ್ಲೀನ್ ಚಿಟ್!


ಸಿಮೆಂಟ್‌ ಬಳಸದೆಯೇ ಇಟ್ಟಿಗೆಗಳನ್ನು ಜೋಡಿಸಲಾಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋ‍ಪಿಸಿದ್ದಾರೆ. ಎಸ್‍ಪಿ ಶಾಸಕ ಬರಿಗೈನಿಂದ ತಳ್ಳಿದಾಗ ಗೋಡೆ ಕುಸಿದು ಬೀಳುವ ವಿಡಿಯೋವನ್ನು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜಿಲ್ಲಾ ಕೇಂದ್ರದಿಂದ 5 ಕಿ.ಮೀ ದೂರದಲ್ಲಿರುವ ಶಿವಸತ್ ಗ್ರಾಮದಲ್ಲಿ ಎಂಜಿನಿಯರಿಂಗ್ ಕಾಲೇಜು ನಿರ್ಮಾಣವಾಗುತ್ತಿದೆ.


ವಿಡಿಯೋದಲ್ಲಿ ಏನಿದೆ..?


ಎಚ್‌-1ಬಿ ವೀಸಾ ಕಾರ್ಯ ಆಧುನೀಕರಿಸಲು ಯುಎಸ್‌ ತೀರ್ಮಾನ: ಭಾರತೀಯರಿಗೆ ಸಹಾಯಕ!


ಯೋಗಿ ಆದಿತ್ಯನಾಥ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ವಿಡಿಯೋ ಹಂಚಿಕೊಂಡು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ‘ಬಿಜೆಪಿ ಆಡಳಿತದಲ್ಲಿ ಭೀಕರ ಭ್ರಷ್ಟಾಚಾರದ ವಿಸ್ಮಯ ಅದ್ಭುತವಾಗಿದೆ. ಸಿಮೆಂಟ್ ಇಲ್ಲದೆ ಅವರು ಕೇವಲ ಇಟ್ಟಿಗೆಗಳ ಮೂಲಕ ಇಂಜಿನಿಯರ್‌ ಕಾಲೇಜು ಕಟ್ಟಲು ಹೊರಟಿದ್ದಾರೆ. ಕೇವಲ ಕೈಯಿಂದ ತಳ್ಳಿದ್ರೆ ಗೋಡೆ  ಉರುಳಿಬಿದ್ದಿದೆ. ಇದು ಏನು ಸೂಚಿಸುತ್ತದೆ’ ಎಂದು ಅವರು ಪ್ರಶ್ನಿಸಿದ್ದಾರೆ.


‘ಇಂತಹ ಕಳಪೆ ಕಾಮಗಾರಿಯಿಂದ ದೇಶದ ಯುವಕರ ಭವಿಷ್ಯ ಕಟ್ಟಲು ಸಾಧ್ಯವಿಲ್ಲ. ಇಲ್ಲಿ ಅವರ ಸಾವಿಗೆ ಸಿದ್ಧತೆ ನಡೆಸಲಾಗುತ್ತಿದೆ. ರಾಣಿಗಂಜ್‌ ಎಂಜಿನಿಯರಿಂಗ್ ಕಾಲೇಜಿನ ಕಳಪೆ ಕಾಮಗಾರಿಯಿಂದ ರಾಜ್ಯ ಸರ್ಕಾರದ ಭ್ರಷ್ಟಾಚಾರ ಜಗಜ್ಜಾಹೀರಾಗಿದೆ' ಎಂದು ಆರ್‌.ಕೆ.ವರ್ಮಾ ಆರೋಪಿಸಿದ್ದಾರೆ.


ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದ್ದು, ಗ್ರಾಮೀಣ ಇಂಜಿನಿಯರಿಂಗ್ ವಿಭಾಗದ ಸಹಾಯಕ ಎಂಜಿನಿಯರ್ ಆಗಮಿಸಿ ಪರೀಕ್ಷೆಗಾಗಿ ರಚನೆಯ ಮಾದರಿಗಳನ್ನು ಸಂಗ್ರಹಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಬೆಲ್‌ಖರನಾಥ ಧಾಮ್‌ನಲ್ಲಿ ಸಾಮೂಹಿಕ ವಿವಾಹ ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ ಶಿವಸತ್ ಗ್ರಾಮದ ಜನರು ಕಾಲೇಜು ನಿರ್ಮಾಣಕ್ಕೆ ಬಳಸಿದ ವಸ್ತುಗಳ ಬಗ್ಗೆ ದೂರು ನೀಡಿದಾಗ ಎಸ್‍ಪಿ ಶಾಸಕ ವರ್ಮಾ ಖುದ್ದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.