Tiger Viral Video: ಉತ್ತರಪ್ರದೇಶದ ಗೋರಖ್‌ಪುರ ಮೃಗಾಲಯಕ್ಕೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಹುಲಿಯೊಂದಿಗೆ ಮಾತನಾಡಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಗೋರಖ್‌ಪುರದ ಮೃಗಾಲಯಕ್ಕೆ ಭೇಟಿ ನೀಡಿದ್ದ ವೇಳೆ ಸಿಎಂ ಯೋಗಿ ಅವರು, ಬೇಸಿಗೆಯಲ್ಲಿ ವನ್ಯಜೀವಿಗಳಿಗಾಗಿ ಮಾಡಿರುವ ವಿವಿಧ ವ್ಯವಸ್ಥೆಗಳನ್ನು ವೀಕ್ಷಿಸಿದರು. ಈ ವೇಳೆ ಮೃಗಾಲಯದಲ್ಲಿ ತಿರುಗಾಡುತ್ತಿದ್ದಾಗ ಹುಲಿಯೊಂದಿಗೆ ಅವರು ಮಾತುಕತೆ ನಡೆಸಿದ್ದಾರೆ.


Remal Cyclone : ಬಂಗಾಳ ಸೇರಿದಂತೆ ಈಶಾನ್ಯ ಭಾರತದಲ್ಲಿ ರೆಮಲ್ ಚಂಡಮಾರುತ ಅನಾಹುತ, ಆತಂಕದಲ್ಲಿ ಅಮಿತ್ ಶಾ!


ಬೋನಿನೊಳಗೆ ಇದ್ದ ಹುಲಿಯನ್ನು ಕಂಡು ಯೋಗಿ ಅವರು ʼಹಲೋ ಹುಲಿʼ... ಎಂದು ಹೇಳಿದ್ದಾರೆ. ಈ ವೇಳೆ ಗುರ್.. ಗುರ್‌... ಎಂದು ಹುಲಿ ಘರ್ಜಿಸಿದೆ. ತಮ್ಮನ್ನು ನೋಡಿ ಸಿಡುಕುತ್ತಿದ್ದ ಹುಲಿರಾಯನಿಗೆ ಯೋಗಿ ಸಮಾಧಾನ ಮಾಡಿದ್ದಾರೆ. 


ಯೋಗಿಯವರ ಮಾತು ಕೇಳುತ್ತಿದ್ದ ಹುಲಿ ಜೋರಾಗಿ ಘರ್ಜಿಸಿ ಬೋನ್ ಮೇಲೆ ಹಾರಿದೆ. ತಕ್ಷಣ ಪಕ್ಕದಲ್ಲಿದ್ದ ಝೂ ಸಿಬ್ಬಂದಿ ಹುಲಿಯನ್ನು ಶಾಂತಾವಾಗುವಂತೆ ಸೂಚಿಸಿದ್ದಾರೆ. ಹುಲಿ ಶಾಂತವಾದ ಬಳಿಕ ಯೋಗಿ ಉಳಿದ ಪ್ರಾಣಿಗಳನ್ನು ನೋಡಲು ಮುಂದಾಗಿದರು.


ಇದನ್ನೂ ಓದಿ: ಇಂಡಿಯಾ ಒಕ್ಕೂಟ ಅಧಿಕಾರಕ್ಕೇರಿದ್ರೆ ರಾಹುಲ್‌ ಗಾಂಧಿ ಪ್ರಧಾನಿ


ಸದ್ಯ ಹುಲಿ ಹಾಗೂ ಸಿಎಂ ಯೋಗಿ ನಡುವಿನ ಮಾತುಕತೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್‌ ಸಹ ಮಾಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ