Couple Kissing Viral Video: ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ಕೆಲ ವಿಡಿಯೋಗಳನ್ನು ನೀವು ನೋಡಿದರೆ, ನೀವೂ ಕೂಡ ಹೊಟ್ಟೆ ಹಿಡಿದು ನಗುವಿರಿ. ಅಂತಹುದೇ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಪತ್ನಿಯೊಬ್ಬಳು ತನ್ನ ಪತಿಯೊಂದಿಗೆ ಫ್ರಾಂಕ್ ಮಾಡಿದ್ದು, ಅದು ಪತಿಯ ಊಹೆಗೂ ಮೀರಿದ ಫ್ರಾಂಕ್ ಆಗಿದೆ. ವಾಸ್ತವದಲ್ಲಿ, ಈ ವೀಡಿಯೊದಲ್ಲಿ ಪತ್ನಿ ಪತಿಯ ಪ್ರತಿಕೃತಿಗೆ ಕಿಸ್ಸ್ ಮಾಡುತ್ತಿರುವುದನ್ನು ನೀವು ನೋಡಬಹುದು.  ಮೊದಲ ನೋಟದಲ್ಲಿ ಆಕೆ  ತನ್ನ ಬಾಯ್ ಫ್ರೆಂಡ್ ಗೆ ಚುಂಬಿಸುತ್ತಿದ್ದಾಳೆ ಎಂಬಂತೆ ಅದು ಗೋಚರಿಸುತ್ತದೆ.  ಈ ದೃಶ್ಯ ನೋಡಿ ಕೋಪಗೊಂಡ ಪತಿ ಓಡುತ್ತಾ ಬಂದು ಪ್ರತಿಕೃತಿಗೆ ಬಲವಾಗಿ ಕಪಾಳಮೋಕ್ಷ ಮಾಡುತ್ತಾನೆ. ಆದರೆ, ನಂತರ ಅದೊಂದು ಫ್ರಾಂಕ್ ಎಂದು ಪತಿಗೆ ಸತ್ಯ ಗೊತ್ತಾದಾಗ ಆತ ನಗಲಾರಂಭಿಸುತ್ತಾನೆ. (Viral News In Kannada)


COMMERCIAL BREAK
SCROLL TO CONTINUE READING

ಇದನ್ನೂ ಓದಿ-OMG! ಆಗಸದಲ್ಲಿಯೇ ಫುಟ್ಬಾಲ್ ಗ್ರೌಂಡ್ ತಯಾರಿಸಿದೆ ಈ ದೇಶ, ನಂಬಿಕೆ ಇಲ್ಲಾ ಅಂದ್ರೆ ಒಮ್ಮೆ ವಿಡಿಯೋ ನೋಡಿ


ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಹಿಳೆಯೋರ್ವಳು ಕಿಸ್ ಮಾಡುತ್ತಿರುವುದನ್ನು ನೀವು ನೋಡಬಹುದು.  ಅಷ್ಟರಲ್ಲಿ ಆಕೆಯ ಪತಿ ಅಲ್ಲಿಗೆ ಬಂದು ಪತ್ನಿ ಚುಂಬಿಸುತ್ತಿರುವ ವ್ಯಕ್ತಿಗೆ ಬಲವಾಗಿ ಕಪಾಳಮೋಕ್ಷ ಮಾಡುತ್ತಾನೆ. ಆದರೆ, ಅಲ್ಲಿ ಪ್ರತಿಕೃತಿಯನ್ನು ಬಿಟ್ಟು ಬೇರೆ ಯಾರೂ ಇಲ್ಲ ಮತ್ತು ತನ್ನ ಪತ್ನಿ ತನ್ನೊಂದಿಗೆ ಫ್ರಾಂಕ್ ಮಾಡಿದ್ದಾಳೆ ಎಂಬುದು ತಿಳಿದಾಗ. ಆತನಿಂದಲೂ ನಗು ತಡೆದುಕೊಳ್ಳಲಾಗುವುದಿಲ್ಲ.  ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ X ನಲ್ಲಿ @HumansNoContext ಹ್ಯಾಂಡಲ್‌ನೊಂದಿಗೆ ಹಂಚಿಕೊಳ್ಳಲಾಗಿದೆ. ಇದುವರೆಗೆ 20 ಮಿಲಿಯನ್‌ಗಿಂತಲೂ ಹೆಚ್ಚು ಜನರು ವೀಡಿಯೊವನ್ನು ವೀಕ್ಷಿಸಿದ್ದಾರೆ.


ಇದನ್ನೂ ಓದಿ-Viral Video: ನಡು ರಸ್ತೆಯಲ್ಲಿಯೇ ರೊಚ್ಚಿಗೆದ್ದು ಸ್ಕೂಟರ್ ಸವಾರನನ್ನು ಗಾಳಿಗೆ ತೂರಿದ ಎಮ್ಮೆ... ವಿಡಿಯೋ ನೋಡಿ!


ವೈರಲ್ ಆಗಿರುವ ವಿಡಿಯೋಗೆ ಜನರ ಪ್ರತಿಕ್ರಿಯೆ ಹೇಗಿದೆ?
ವೈರಲ್ ಆಗುತ್ತಿರುವ ವಿಡಿಯೋಗೆ ಜನರು ತಮ್ಮ ತೀವ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರ,  'ಅನುಮಾನಿಸುವುದು ತುಂಬಾ ಕೆಟ್ಟ ಸಂಗತಿ' ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ, 'ಪತ್ನಿ ಇಂತಹ ಫ್ರಾಂಕ್ ಮಾಡಬಹುದು ಎಂದು ಆತ ಭಾವಿಸಿರಲಿಲ್ಲವೇನೋ' ಎಂದು ಬರೆದಿದ್ದಾರೆ. ಏತನ್ಮಧ್ಯೆ, ಮೂರನೇ ಬಳಕೆದಾರರು "ಇದುವರೆಗಿನ ಅತಿ ಹೆಚ್ಚು ತಮಾಷೆಯ ವೀಡಿಯೊ."  ಎಂದಿದ್ದಾರೆ. ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಏನು ಹೇಳಲು ಮರೆಯಬೇಡಿ. 


ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ