Monkey Viral Video : ಸಾಮಾಜಿಕ ಮಾಧ್ಯಮ ಪ್ರಪಂಚವು ಅದ್ಭುತ ಸಂಗತಿಗಳಿಂದ ತುಂಬಿದೆ. ಇಲ್ಲಿ ನಾವು ಊಹಿಸಲು ಸಾಧ್ಯವಾಗದಂತಹ ದೃಶ್ಯಗಳನ್ನು ನೋಡುತ್ತೇವೆ. ಇಂಟರ್‌ನೆಟ್‌ನಲ್ಲಿ ನೋಡುವ ವೀಡಿಯೋಗಳಲ್ಲಿ ಕೆಲವೊಮ್ಮೆ ನಮ್ಮನ್ನು ನಗಿಸುವ, ಕೆಲವೊಮ್ಮೆ ಯೋಚಿಸುವಂತೆ ಮಾಡುವ, ಕೆಲವೊಮ್ಮೆ ಆಶ್ಚರ್ಯಪಡುವ, ಕೆಲವೊಮ್ಮೆ ಆಘಾತವನ್ನುಂಟುಮಾಡುವ ಮತ್ತು ಕೆಲವೊಮ್ಮೆ ದುಃಖವನ್ನು ತರಿಸುವ ಅನೇಕ ವಿಡಿಯೋಗಳು ಲಭ್ಯವಿರುತ್ತವೆ.  


COMMERCIAL BREAK
SCROLL TO CONTINUE READING

ನೆಟಿಜನ್‌ಗಳು ಮಂಗಗಳ  ಚೇಷ್ಟೆಗಳನ್ನು ಇಷ್ಟಪಡುತ್ತಾರೆ. ಕೋತಿಗಳ ಅನೇಕ ನಾಟಿ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಆಗಿರುತ್ತವೆ. ಕೋತಿಗಳು ಮಾಡುವ ಹಲವು ರೀತಿಯ ಚೇಷ್ಟೆಗಳನ್ನು ನಾವು ಹಲವು ವಿಡಿಯೋಗಳಲ್ಲಿ ನೋಡಿದ್ದೇವೆ. ಆದರೆ ಮಂಗಗಳು ವಾಸ್ತವವಾಗಿ ತುಂಬಾ ಜವಾಬ್ದಾರಿಯುತ ಪ್ರಾಣಿಗಳು ಎಂದು ಅನೇಕ ಜನರಿಗೆ ತಿಳಿದಿಲ್ಲದಿರಬಹುದು. 


ಇತ್ತೀಚೆಗಷ್ಟೇ ಇಂಟರ್‌ನೆಟ್‌ನಲ್ಲಿ ಶೇರ್ ಆಗಿರುವ ವಿಡಿಯೋದಲ್ಲಿ ಮಂಗನ ಕೃತ್ಯ ನೋಡಿ ನೆಟ್ಟಿಗರು ಬೆರಗಾಗಿದ್ದಾರೆ. ಮಂಗಗಳು ನಮಗೆ ತೊಂದರೆ ಕೊಡಲು ಮತ್ತು ನಮ್ಮಿಂದ ವಸ್ತುಗಳನ್ನು ತೆಗೆದುಕೊಂಡು ಹೋಗಲು ಬರುತ್ತವೆ ಎಂದು ನಾವು ಭಾವಿಸುತ್ತೇವೆ. ಆದರೆ ಸರಿಯಾಗಿ ತರಬೇತಿ ನೀಡಿದರೆ ಅದು ಮನುಷ್ಯರನ್ನು ಹಿಂದಿಕ್ಕುವಂತೆ ಹಲವು ಕೆಲಸಗಳನ್ನು ಮಾಡುತ್ತದೆ ಎಂಬುದಕ್ಕೆ ಈ ವೀಡಿಯೊ ಉದಾಹರಣೆಯಾಗಿದೆ. ಸರಿಯಾದ ಮಾರ್ಗದರ್ಶನ ನೀಡಿದರೆ ಅವು ಮನುಷ್ಯರಿಗೆ ಅನೇಕ ರೀತಿಯಲ್ಲಿ ಸಹಾಯಕವಾಗಿವೆ ಎಂಬುದನ್ನು ಇದರಿಂದ ನಾವು ಅರ್ಥಮಾಡಿಕೊಳ್ಳಬಹುದು.



ಇದನ್ನೂ ಓದಿ-'ಜೈ ಭೀಮ್' ಪ್ರಕರಣ: ನಟ ಸೂರ್ಯ ಉತ್ತರಿಸುವಂತೆ ಮದ್ರಾಸ್ ಹೈಕೋರ್ಟ್ ಆದೇಶ


ವೈರಲ್ ಆಗಿರುವ ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಮಗುವಿಗೆ ಸ್ನಾನ ಮಾಡಿಸಿ ಮಲಗಿಸುತ್ತಿರುವ ದೃಶ್ಯವನ್ನು ಕಾಣಬಹುದು. ಅದರಲ್ಲಿ ಕೋತಿಯು ಅವಳಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತದೆ. ಮಹಿಳೆ ಮಗುವಿಗೆ ಸ್ನಾನ ಮಾಡುವಾಗ, ಅವಳು ಶಾಂಪೂ ತರಲು ಕೋತಿಯನ್ನು ಕೇಳುತ್ತಾಳೆ. ಶಾಂಪೂ ತಂದು ಕೊಟ್ಟ ಮಂಗ ನಂತರ, ನಿಧಾನವಾಗಿ ಮಗುವಿನ ಮೇಲೆ ನೀರನ್ನು ಸುರಿಯುತ್ತದೆ. 


ಕೊನೆಗೆ ಮಗುವನ್ನು ಮಲಗಿಸಲು ತೊಟ್ಟಿಲನ್ನು ತೂಗುತ್ತದೆ ನಂತರ ಮಹಿಳೆ ಕೋತಿಗೆ ತಿನ್ನಲು ಚಿಪ್ಸ್ ಪ್ಯಾಕೆಟ್ ನೀಡುತ್ತಾಳೆ. ತಿಂದ ನಂತರ ಅದು ತುಂಬಾ ಜವಾಬ್ದಾರಿಯಿಂದ ಪ್ಯಾಕೆಟ್ ಅನ್ನು ಕಸದ ಬುಟ್ಟಿಗೆ ಎಸೆಯುತ್ತದೆ. 


ಈ ವಿಡಿಯೋವನ್ನು ಟೀಚರ್ ಮಲೇಶಿಯಾ ಎಂಬ ಪೇಜ್ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ. ಇದು ಸಾಕಷ್ಟು ವೀಕ್ಷಣೆಗಳು ಪಡೆಯುತ್ತಿದೆ. ಈ ಬಗ್ಗೆ ನೆಟಿಜನ್‌ಗಳು ನಾನಾ ಕಾಮೆಂಟ್‌ಗಳನ್ನು ನೀಡುತ್ತಿದ್ದಾರೆ. ಕೆಲವರು ಕೋತಿಯನ್ನು ಹೊಗಳಿದರೆ, ಇನ್ನು ಕೆಲವರು ಇಂತಹ ಮುಗ್ಧ ಪ್ರಾಣಿಗಳನ್ನು ಮನುಷ್ಯರು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವುದು ತಪ್ಪು ಎಂದು ಟೀಕಿಸಿದ್ದಾರೆ.


ಇದನ್ನೂ ಓದಿ-ನೀವು ಫೋನ್ ಕವರ್‌ನಲ್ಲಿ ನೋಟ್ ಇಡ್ತೀರಾ? ಹಾಗಿದ್ರೆ ಈ ಸುದ್ದಿ ತಪ್ಪದೇ ಓದಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.