ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯವಾಗಲು, ಜನರು ಹೇಯ ಕೃತ್ಯಗಳನ್ನು ಮಾಡಲು ಹಿಂಜರಿಯುತ್ತಿಲ್ಲ. ದೆಹಲಿ ಮೆಟ್ರೋ ನಂತರ, ಇದೀಗ ನೋಯ್ಡಾದ ಖ್ಯಾತ ವೇದ್ ಒನ್ ಪಾರ್ಕ್‌ನಲ್ಲಿ ಯುವಜೋಡಿ  ಸಾರ್ವಜನಿಕವಾಗಿ ಇಂತಹದ್ದೊಂದು ಕೆಲಸ ಮಾಡಿದ್ದು, ಸಾರ್ವಜನಿಕರ ಪಿತ್ತ ನೆತ್ತಿಗರಿದೆ. ಜನರು ನೋಯ್ಡಾ ಪೊಲೀಸರನ್ನು ಟ್ಯಾಗ್ ಮಾಡಿ ಈ ದಂಪತಿ ಜೋಡಿಯನ್ನು ಬಂಧಿಸುವಂತೆ ಒತ್ತಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರ ಕೋಪಕ್ಕೆ ಕಾರಣವಾದ ಈ ಜೋಡಿ ಏನು ಮಾಡಿದೆ ಎಂಬುದನ್ನು ನೋಡಿ ನೀವು ಆಶ್ಚರ್ಯಪಡುವಿರಿ. (Viral News In Kannada)


COMMERCIAL BREAK
SCROLL TO CONTINUE READING

ಇತ್ತೀಚೆಗೆ, ದೆಹಲಿ ಮೆಟ್ರೋದ ದಂಪತಿಗಳ ವೀಡಿಯೊ ವೈರಲ್ ಆಗಿತ್ತು, ಇದರಲ್ಲಿ ಇಬ್ಬರೂ ಪರಸ್ಪರ ಬಾಯಿ ಮುಕ್ಕಳಿಸುತ್ತಿರುವುದು ಕಂಡುಬಂದಿತ್ತು. ಈ ವೀಡಿಯೋಗೆ ಸಂಬಂಧಿಸಿದಂತೆ ಅಂತರ್ಜಾಲದಲ್ಲಿ ಭಾರೀ ಕೋಲಾಹಲ ಸೃಷ್ಟಿಯಾಗಿತ್ತು. ಇದೀಗ ಈ ಜೋಡಿ ನೋಯ್ಡಾ ಸೆಕ್ಟರ್ 78ರಲ್ಲಿರುವ 'ವೇದ್ ಒನ್' ಪಾರ್ಕ್‌ನಲ್ಲಿ ಇಂತಹದ್ದೇ ಹೇಯ ಕೃತ್ಯ ಎಸಗಿದ್ದಾರೆ. ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ವೇದ್ ಫಾರೆಸ್ಟ್ ಪಾರ್ಕ್‌ನಲ್ಲಿ ದಂಪತಿಗಳು ವಿಚಿತ್ರ ರೀತಿಯಲ್ಲಿ ಪ್ರೇಮ ವ್ಯಕ್ತಪಡಿಸುತ್ತಿರುವುದನ್ನು ಕಾಣಬಹುದು. ಹುಡುಗನು ಮೊದಲು ಹುಡುಗಿಗೆ ಉಂಗುರವನ್ನು ಧರಿಸುತ್ತಾನೆ. ಇದಾದ ನಂತರ ಇಬ್ಬರೂ ಪರಸ್ಪರ ಬಾಯಲ್ಲಿ ಬಾಯಿ ಮುಕ್ಕಳಿಸತೊಡಗುತ್ತಾರೆ. ದಂಪತಿಯ ಈ ಕೃತ್ಯ ಕಂಡು ಕೋಪಗೊಂಡ ಜನರು ಇದೀಗ ನೋಯ್ಡಾ ಪೊಲೀಸರಿಂದ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ.


ಇದನ್ನೂ ಓದಿ-ಸ್ಪೀಡ್ ಬ್ರೆಕರ್ ಮೇಲೆ ಇದ್ದಕ್ಕಿದ್ದಂತೆ ಗಾಳಿಯಲ್ಲಿ ಹಾರಿದ ಇ-ರಿಕ್ಷಾ... ವಿಡಿಯೋ ನೋಡಿ!


ದಂಪತಿ ವೀಡಿಯೊವನ್ನು ಇಲ್ಲಿ ವೀಕ್ಷಿಸಿ


Viral Video: ಯಾವುದೇ ಸುರಕ್ಷತೆ ಇಲ್ಲದೆ ಟ್ರಾನ್ಸ್ಫಾರ್ಮರ್ ಗೆ ತಂತಿ ಜೋಡಿಸಿದ ಹುಡುಗ, ನೋಡಿ ದಂಗಾದ ನೆಟ್ಟಿಗರು!


ಅರೆಸ್ಟ್ ಮಾಡಿ ಎಂದ ಜನರು
ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲತೆಯನ್ನು ಹರಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಇದೇ ವೇಳೆ, ಮತ್ತೊಬ್ಬ ಬಳಕೆದಾರರು ಇವರನ್ನು ಬಂಧಿಸದ ಹೊರತು ಈ ರೀತಿಯ ಹೀನ ಕೃತ್ಯ ಎಸಗುವುದನ್ನು ಇವರು ಮುಂದುವರಿಸುತ್ತಾರೆ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ಉಂಗುರವನ್ನು ಧರಿಸಿದ ನಂತರ ಬಾಯಿಯನ್ನು ತೊಳೆಯುವ ಪದ್ಧತಿಯನ್ನು ಮೊದಲ ಬಾರಿಗೆ ನೋಡಿದೆ ಎಂದು ಬರೆದುಕೊಂಡಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.