Viral Wedding Card: ಮದುವೆಯ ಮಮತೆಯ ಈ ಕರೆಯೋಲೆಯಲ್ಲಿನ ಕ್ರಿಯೇಟಿವಿಟಿ ಕಂಡು ದಂಗಾದ ಅತಿಥಿಗಳು
Trending Wedding Card - ತಮಿಳುನಾಡು ಮೂಲದ ಫಾರ್ಮಸಿ ಶಿಕ್ಷಕಯೊಬ್ಬರು ಬರುವ ತಿಂಗಳ 5 ರಂದು ಹಸೆಮಣೆ ಏರಲಿದ್ದಾರೆ. ಇದಕ್ಕಾಗಿ ಸ್ವತಃ ಶಿಕ್ಷಕರೇ ಮನೆ ಮನೆಗೆ ತೆರಳಿ ಜನರಿಗೆ ಮದುವೆ ಮಮತೆಯ ಕರೆಯೋಲೆಯನ್ನು ನೀಡುತ್ತಿದ್ದಾರೆ.
Viral News - ಮದುವೆ ಅನ್ನುವುದು ಪ್ರತಿಯೊಬ್ಬರ ಜೀವನದ ಒಂದು ಮಹತ್ವದ ಘಟ್ಟ. ಇದೇ ಕಾರಣದಿಂದ ಅದನ್ನು ಆದಷ್ಟು ಅವಿಸ್ಮರಣೀಯ ಹಾಗೂ ವಿಶೇಷವಾಗಿಸಲು ಜನರು ವಿಭಿನ್ನ ಮಾರ್ಗಗಳನ್ನು ಅನುಸರಿಸುತ್ತಾರೆ. ಇದಕ್ಕಾಗಿ ಮೆಹಂದಿ ಕಾರ್ಯಕ್ರಮದಿಂದ ಹಿಡಿದು ಸಂಗೀತ ಕಾರ್ಯಕ್ರಮದವರೆಗೆ ಎಲ್ಲವನ್ನು ಮೊದಲೇ ನಿರ್ಧರಿಸುತ್ತಾರೆ. ಇವೆಲ್ಲವುಗಳ ಹೊರತಾಗಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಗಮನ ಸೆಳೆಯುತ್ತಿರುವ ಮತ್ತೊಂದು ಸಂಗತಿ ಎಂದರೆ. ಇನ್ನೋವೇಟಿವ್ ವೆಡ್ಡಿಂಗ್ ಕಾರ್ಡ್ ಗಳು. ಇದಕ್ಕಾಗಿ ಕೆಲವರು ಇ-ಕಾರ್ಡ್ ಗಳತ್ತ ಮುಖ ಮಾಡಿದರೆ, ಕೆಲವರು ಸ್ಕೇಲ್ ಮೇಲೆ ತಮ್ಮ ಕರೆಯೋಲೆಯನ್ನು ಮುದ್ರಿಸುತ್ತಿದ್ದಾರೆ. ಅಂತಹುದೇ ಒಂದು ವಿಭಿನ್ನ ಕರೆಯೋಲೆ ಜನರ ಮಧ್ಯೆ ಚರ್ಚೆಯ ವಿಷಯವಾಗಿ ಹೊರಹೊಮ್ಮಿದೆ. ನೀವು ಈ ಕಾರ್ಡ್ ನೋಡಿ ದಂಗಾಗುವುದು ಮಾತ್ರ ಗ್ಯಾರಂಟಿ.
ತಮಿಳುನಾಡು ಮೂಲದ ಫಾರ್ಮಸಿ ಶಿಕ್ಷಕಯೊಬ್ಬರು ಬರುವ ತಿಂಗಳ 5 ರಂದು ಹಸೆಮಣೆ ಏರಲಿದ್ದಾರೆ. ಇದಕ್ಕಾಗಿ ಸ್ವತಃ ಶಿಕ್ಷಕರೇ ಮನೆ ಮನೆಗೆ ತೆರಳಿ ಜನರಿಗೆ ಮದುವೆ ಮಮತೆಯ ಕರೆಯೋಲೆಯನ್ನು ನೀಡುತ್ತಿದ್ದಾರೆ. ಆದರೆ, ಈ ಕಾರ್ಡ್ ನೋಡಿದ ನಂತರ ಎಲ್ಲರೂ ಅವರಿಗೆ ಒಂದೇ ಪ್ರಶ್ನೆ ಕೇಳುತ್ತಿದ್ದಾರೆ, ‘ನಮಗೆ ಯಾಕೆ ಈ ಔಷಧಿ ಕೊಡುತ್ತಿರುವಿರಿ? ಇದೆಂಥಾ ಔಷಧ? ಎಂದು ಮದುವೆ ಕಾರ್ಡ್ ನೋಡಿದ ಮೇಲೆ ಎಲ್ಲರು ಅವರಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಈ ಪ್ರಶ್ನೆಗಳಿಗೆ ಕಾರಣ ತಿಳಿದುಕೊಳ್ಳುವ ಮೊದಲು ಆ ಕಾರ್ಡ್ ಅನ್ನು ಮೊದಲು ವೀಕ್ಷಿಸಿ.
Viral Video : ಕೊಳಕ ಮಂಡಲವನ್ನು ನುಂಗಿದ ನಾಗರ ಹಾವು.. ಸ್ವಲ್ಪ ಹೊತ್ತಿನ ಬಳಿಕ ಹೊರಬಂತು ಜೀವಂತ ಸರ್ಪ
ವಿಶಿಷ್ಟ ಮದುವೆಯ ಕರೆಯೋಲೆಯನ್ನು ಮುದ್ರಿಸಿದ ಶಿಕ್ಷಕ
ನಿಜಕ್ಕೂ ಕಾರ್ಡ್ ನೋಡಲು ತುಂಬಾ ವಿಭಿನ್ನವಾಗಿದೆಯಲ್ಲವೇ? ತಮಿಳುನಾಡಿನಲ್ಲಿ ನೆಲೆಸಿರುವ ಈ ಶಿಕ್ಷಕರು ತಮ್ಮ ಮದುವೆ ಕಾರ್ಡ್ ಅನ್ನು ಟ್ಯಾಬ್ಲೆಟ್ ಶೀಟ್ ರೂಪದಲ್ಲಿ ಮುದ್ರಿಸಿದ್ದಾರೆ. ಇನ್ನೊಂದೆಡೆ ಅವರ ಈ ವಿಶಿಷ್ಟ ಶೈಲಿಯ ಕಾರ್ಡ್‌ನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ಚಿತ್ರದಲ್ಲಿ ಶಿಕ್ಷಕರು ತಮ್ಮ ಮತ್ತು ಅವರ ಸಂಗಾತಿಯ ಹೆಸರು, ಮದುವೆಯ ದಿನಾಂಕ, ಔತಣಕೂಟದ ಸಮಯ ಮತ್ತು ಅವರ ಮದುವೆಯ ದಿನ ಮತ್ತು ಇತರ ಅನೇಕ ಮಹತ್ವದ ಸಂದರ್ಭಗಳನ್ನು ಕಾರ್ಡ್‌ನ ಮೇಲ್ಭಾಗದಲ್ಲಿ ನಮೂದಿಸಿರುವುದನ್ನು ನೀವು ನೋಡಬಹುದು.
ಇದನ್ನೂ ಓದಿ-Video: ಮೃಗಗಳಂತೆ ವರ್ತಿಸಿದ ಮನುಷ್ಯ, ಬಾಲ-ಕಾಲ ಹಿಡಿದೆಳೆದು ಚಿರತೆಯ ಪ್ರಾಣವನ್ನೇ ಹೀರಿದ ಕ್ರೂರಿ
ಈ ವಿಶಿಷ್ಟ ಮದುವೆಯ ಕಾರ್ಡ್ ಸಾಮಾಜಿಕ ಮಾಧ್ಯಮದಲ್ಲಿ ಇದೀಗ ತುಂಬಾ ವೈರಲ್ ಆಗುತ್ತಿದೆ. ಈ ಬಗ್ಗೆ ಜನರು ಕೂಡ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಇದನ್ನು ನೋಡಿ ಯಾರು ಬೇಕಾದರೂ ಮೋಸ ಹೋಗಬಹುದು ಎಂದು ಬರೆದುಕೊಂಡಿದ್ದಾರೆ, ಮತ್ತೊಬ್ಬ ಬಳಕೆದಾರರು ತಮಾಷೆಯ ಧಾಟಿಯಲ್ಲಿ, 'ಶಿಕ್ಷಕರು ಮದುವೆಯ ಅರ್ಧದಷ್ಟು ವೆಚ್ಚವನ್ನು ಉಳಿಸಲು ಬಯಸುತ್ತಿದ್ದಾರೆ, ಹೀಗಾಗಿ ಅವರು ಯಾರಿಗೂ ಅರ್ಥವಾಗದ ರೀತಿಯಲ್ಲಿ ಕಾರ್ಡ್ ಅನ್ನು ಮುದ್ರಿಸಿದ್ದಾರೆ' ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಇದಕ್ಕೂ ಮುಂದುವರೆದು ಬರೆದುಕೊಂಡಿರುವ ಅವರು 'ಈಗ ಕೆಲವೇ ಜನರು ಮದುವೆಯನ್ನು ತಲುಪಲು ಸಾಧ್ಯವಾಗಲಿದ್ದು, ಆಹಾರ ಮತ್ತು ಪಾನೀಯ ವೆಚ್ಚ ಉಳಿತಾಯವಾಗಲಿದೆ' ಎಂದಿದ್ದಾರೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.