Proposal Video : ಪ್ರೀತಿಸಿದ ಹುಡುಗಿಯನ್ನ ಮದುವೆ ಮಾಡಿಕೊಳ್ಳಲು ಅವಳ ಮುಂದೆ ಪ್ರಪೋಸಲ್ ಇಡುವುದು ಅದನ್ನ ಅವಳು ಒಪ್ಪಿಕೊಳ್ಳುವುದು ಇದು ಇಬ್ಬರಿಗೂ ಜೀವನದ ಅತ್ಯಂತ ಸುಂದರವಾದ ಕ್ಷಣ. ಈ ಮದುವೆ ಪ್ರಪೋಸಲ್ ಗೆ ಸಂಭಂದಿಸಿದಂತೆ ಅನೇಕ ವಿಡಿಯೋ, ಫೋಟೋ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇಲ್ಲಿ ಕೂಡ ಅಂತಹ ವಿಡಿಯೋ ಒಂದು ವೈರಲ್ ಆಗಿದೆ. ಆದ್ರೆ, ಈ ವಿಡಿಯೋದಲ್ಲಿರುವ ಘಟನೆ ತುಂಬಾ ಅಪರೂಪವಾಗಿದೆ.


COMMERCIAL BREAK
SCROLL TO CONTINUE READING

ಹೌದು, ಇಲ್ಲೊಬ್ಬ ಹುಡುಗ ತಾನು ಪ್ರೀತಿಸಿದ ಹುಡುಗಿಯ ಜೊತೆ ಸಮುದ್ರದ ಮದ್ಯ ಬೋಟ್‌ನಲ್ಲಿ ಹೋಗಿದ್ದಾನೆ. ಇಬ್ಬರು ಸೇರಿ ಟೈಟಾನಿಕ್ ಸಿನಿಮಾದ ಒಂದು ಪೋಸ್ ಕೂಡ ನೀಡಿದ್ದಾರೆ. ಅಷ್ಟರಲ್ಲೇ ಹುಡುಗ ತನ್ನ ಹುಡುಗಿಗೆ ಮದುವೆ ಪ್ರಪೋಸಲ್ ಇಡಲು ತನ್ನ ಜೇಬಿನಿಂದ ಉಂಗುರುದ ಡಬ್ಬಿಯನ್ನು ಹೊರತೆಗೆಯಲು ಪ್ರಯತ್ನಿಸುತ್ತಾನೆ. ಅದು ಜೇಬಿನಲ್ಲಿ ಎಲ್ಲೋ ಸಿಗಾಕಿಕೊಂಡಿರುತ್ತದೆ, ಆಗೋ ಹೀಗೋ ಮಾಡಿ ಅದನ್ನ ಹೊರ ತೆಗೆದು ಅದನ್ನ ಅವಳ ಮುಂದೆ ಇಡಿದು ನನ್ನ ಮದುವೆ ಆಗ್ತೀಯಾ ಅಂತ ಕೇಳುವಷ್ಟರಲ್ಲಿ ಉಂಗುರ ಕೈಯಿಂದ ಜಾರಿ ಸಮುದ್ರದಲ್ಲಿ ಬೀಳುತ್ತದೆ. ತಕ್ಷಣ ಹುಡುಗ ನೀರಿಗೆ ಜಿಗಿದು ನೀರಲ್ಲೇ ನಿಂತು ಹುಡುಗಿಗೆ ಉಂಗುರ ತೋರಿಸಿ ಪ್ರಪೋಸ್ ಮಾಡುತ್ತಾನೆ. 


 


ಇದನ್ನೂ ಓದಿ : ಈ ಬಾರಿ ಗಣರಾಜ್ಯೋತ್ಸವಕ್ಕೆ ಈಜಿಪ್ಟ್ ಪ್ರಧಾನಿ ಮುಖ್ಯ ಅತಿಥಿ


ಸಧ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಘಟನೆ ಅಮೇರಿಕಾದ ಫ್ಲೋರಿಡಾದಲ್ಲಿ ನಡೆದಿದೆ. ಈ ವೀಡಿಯೊವನ್ನು ಸ್ಕಾಟ್ ಕ್ಲೈನ್ ​​ಎಂಬುವವರು ತಮ್ಮ ಫೇಸ್‌ಬುಕ್‌ ಪೇಜ್ ನಲ್ಲಿ ಹಂಚಿ ಕೊಂಡಿದ್ದಾರೆ.


ಇದನ್ನೂ ಓದಿ : ಚೀನಾದ ನಗರಗಳಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವುದೇಕೆ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.