Why is Diwali celebrated 21 days after Dussehra: ದಸರಾ ನವರಾತ್ರಿ ಸಂಭ್ರಮ ಮುಗಿಯಿತು. ಇನ್ನೇನು ದೀಪಾವಳಿ ಹಬ್ಬ ಶುರುವಾಗಲಿದೆ. ದೀಪಾವಳಿ ಬಂತೆಂದರೆ ಎಲ್ಲೆಡೆ ದೀಪಗಳ ಬೆಳಕಿನ ಜೊತೆ ಪಟಾಕಿ ಸದ್ದು ಕೇಳಿಸೋದು ಖಂಡಿತ. ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರೂ ಕೂಡ ಇಷ್ಟಪಟ್ಟು ಸಂಭ್ರಮಿಸುವ ಹಬ್ಬವೇ ದೀಪಾವಳಿ. ಅಂದಹಾಗೆ ಈ ದೀಪಾವಳಿ ಮತ್ತು ರಾಮಾಯಣಕ್ಕೂ ಒಂದು ವಿಶೇಷ ನಂಟು ಇದೆ ಎಂಬುದು ನಿಮಗೆ ತಿಳಿದಿದೆಯೇ?


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮಜ್ಜಿಗೆಗೆ ಈ ಪುಡಿ ಬೆರೆಸಿ ಕುಡಿಯಿರಿ ಸಾಕು: ಕರಗಿಸಲೂ ಕಠಿಣವೆನಿಸುವ ಸೊಂಟದ ಸುತ್ತ ತುಂಬಿದ ಹಠಮಾರಿ ಬೊಜ್ಜು ಬೆಣ್ಣೆ ಕರಗಿದಂತೆ ಸುಲಭವಾಗಿ ಕರಗುತ್ತೆ!


ಬಾಲ್ಯದಿಂದಲೂ ಶ್ರೀರಾಮ, ಶ್ರೀರಾಮಾಯಣದ ಕಥೆಗಳನ್ನು ಕೇಳುತ್ತಾ ಬೆಳೆದವರು ನಾವೆಲ್ಲರೂ... ಇದೀಗ ಶ್ರೀರಾಮನಿಗೆ ಸಂಬಂಧಿಸಿದ ವಿಚಾರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಶ್ರೀರಾಮನು ಲಂಕಾದಿಂದ ಅಯೋಧ್ಯೆಗೆ ಪ್ರಯಾಣಿಸಲು 21 ದಿನ ತೆಗೆದುಕೊಂಡಿದ್ದಾರೆ ಎಂದು ಗೂಗಲ್ ಮ್ಯಾಪ್‌ ಹೇಳುವ ಒಂದು ಟ್ವೀಟ್ ವೈರಲ್ ಆಗುತ್ತಿದೆ. ಈ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ಇದು ನಿಜವೇ ಎಂದು ಪ್ರಶ್ನಿಸುತ್ತಿದ್ದಾರೆ.


ರಾಮಾಯಣವು ಅತ್ಯಂತ ಪ್ರಮುಖವಾದ ಹಿಂದೂ ಗ್ರಂಥ. ಹಿಂದೂಗಳಿಗೆ ಮಹಾಭಾರತದಂತೆ ರಾಮಾಯಣವೂ ಸಹ ಪವಿತ್ರ ಗ್ರಂಥವಾಗಿದೆ. ಇನ್ನು ಈ ಎರಡು ಗ್ರಂಥಗಳಿಗೆ ಹಿಂದೂಗಳ ಮನಸಲ್ಲಿ ವಿಶೇಷ ಸ್ಥಾನಮಾನವಿದೆ. ಮಾನವನಾಗಿ ಹುಟ್ಟಿದ ಶ್ರೀರಾಮನು ನಡೆ-ನುಡಿಯಿಂದ ದೇವರೆಂದು ಪೂಜಿಸಲ್ಪಡುತ್ತಾರೆ. ಇದೀಗ ದಸರಾ ಮುಗಿದು ದೀಪಾವಳಿ ಬರುತ್ತಿರುವ ಹಿನ್ನೆಲೆಯಲ್ಲಿ ಶ್ರೀಲಂಕಾದಿಂದ ಅಯೋಧ್ಯೆ ತಲುಪಲು ಶ್ರೀರಾಮ 21 ದಿನಗಳ ಕಾಲ ಪ್ರಯಾಣ ಬೆಳೆಸಿದ್ದಾರೆ ಎಂಬ ಟ್ವೀಟ್ ವೈರಲ್ ಆಗಿದೆ.


ಶ್ರೀಲಂಕಾದಿಂದ ಅಯೋಧ್ಯೆಗೆ ಪ್ರಯಾಣಿಸಲು 21 ದಿನಗಳು ಮತ್ತು 10 ಗಂಟೆಗಳು ತೆಗೆದುಕೊಳ್ಳುತ್ತದೆ ಎಂದು ಗೂಗಲ್ ನಕ್ಷೆ ಹೇಳುತ್ತದೆ. ಮುಕುಲ್ ದೇಖಾನೆ ತಮ್ಮ ಖಾತೆಯಲ್ಲಿ ಗೂಗಲ್ ಮ್ಯಾಪ್ ಸ್ಕ್ರೀನ್‌ ಶಾಟ್‌ನ್ನು ಹಂಚಿಕೊಂಡಿದ್ದಾರೆ. ಈ ಫೋಟೋದೊಂದಿಗೆ ದಸರಾ ನಂತರ 21 ದಿನಗಳ ನಂತರ ದೀಪಾವಳಿಯನ್ನು ಏಕೆ ಆಚರಿಸಲಾಗುತ್ತದೆ? ಶ್ರೀರಾಮಚಂದ್ರನು ಶ್ರೀಲಂಕಾದಿಂದ ಅಯೋಧ್ಯೆಗೆ ಆಗಮಿಸಲು ಕಾಲ್ನಡಿಗೆಯಲ್ಲಿ 21 ದಿನಗಳನ್ನು ತೆಗೆದುಕೊಂಡಿದ್ದರೇ? ಇದು ನಿಜವೇ? ಗೂಗಲ್ ಮ್ಯಾಪ್‌ನಲ್ಲಿ ಹುಡುಕಿದಾಗ ಫಲಿತಾಂಶ ಕಂಡು ಆಶ್ಚರ್ಯವಾಯಿತು. ಲಂಕಾದಿಂದ ಅಯೋಧ್ಯೆಗೆ ಮರಳಲು 21 ದಿನಗಳು ಬೇಕಾಯಿತು ಎಂದು ತಿಳಿದು ಆಘಾತವಾಯಿತು ಎಂದು ಹೇಳಿದ್ದಾರೆ.


ವಾಲ್ಮೀಕಿ ರಾಮಾಯಣದಲ್ಲಿನ ಉಲ್ಲೇಖ ಹೀಗೆ...
ಶ್ರೀರಾಮನು ಸೀತೆಯೊಡನೆ ಶ್ರೀಲಂಕಾದಿಂದ ಅಯೋಧ್ಯೆಯನ್ನು ತಲುಪಲು 21 ದಿನಗಳು (504 ಗಂಟೆಗಳು) ತೆಗೆದುಕೊಂಡಿದ್ದಾರೆ ಎಂದು ಮಹರ್ಷಿ ವಾಲ್ಮೀಕಿ ರಾಮಾಯಣದಲ್ಲಿ ಹೇಳಲಾಗಿದೆ. 504 ಗಂಟೆಗಳನ್ನು 24 ಗಂಟೆಗಳಾಗಿ ವಿಂಗಡಿಸಿದರೆ 21 ದಿನ ಎಂಬ ಉತ್ತರ ಬರುತ್ತದೆ. ಶ್ರೀಲಂಕಾದಿಂದ ಅಯೋಧ್ಯೆಗೆ 3145 ಕಿಲೋ ಮೀಟರ್ ನಡಿಗೆಯ ದೂರವು 504 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.


ಇದನ್ನೂ ಓದಿ: ವಿರಾಟ್‌ ಜೊತೆ ಮದುವೆಗೂ ಮೊದಲೇ ನಾನು ತಾಯಿಯಾದೆ; ಈತನೇ ನನ್ನ ಮೊದಲ ಮಗ: ಪಬ್ಲಿಕ್‌ನಲ್ಲಿ ಶಾಕಿಂಗ್‌ ಸತ್ಯ ಬಹಿರಂಗಪಡಿಸಿದ ಅನುಷ್ಕಾ ಶರ್ಮಾ


ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ನೆಟ್ಟಿಗರೊಬ್ಬರು, 'ದಸರಾ ಮತ್ತು ದೀಪಾವಳಿ ನಡುವಿನ 21 ದಿನಗಳ ಅಂತರದಂತೆಯೇ ಇದೆ. ಇದು ದೀಪಾವಳಿ ಮತ್ತು ದಸರಾ ಮಹತ್ವವನ್ನು ಎತ್ತಿ ತೋರಿಸುತ್ತದೆ' ಎಂದು ಪ್ರತಿಕ್ರಿಯಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ