Chickens Clucking: ಮುಂಜಾನೆ ಕೋಳಿಗಳು ಕೂಗುವುದು ಸಾಮಾನ್ಯ ವಿದ್ಯಮಾನ. ಕೋಳಿಗಳು ಕೂಗಿದಾಗಲೇ ನಾವೆಲ್ಲರೂ ಏಳುತ್ತಿದ್ದೆವು ಅಂತಾ ಹಿರಿಯರು ಹೇಳುವುದನ್ನು ನೀವು ಕೇಳಿರುತ್ತೀರಿ. ದಿನದ ಉಳಿದ ಸಮಯಕ್ಕೆ ಹೋಲಿಸಿದರೆ ಕೋಳಿಗಳು ಮುಂಜಾನೆಯೇ ಏಕೆ ಹೆಚ್ಚು ಕೂಗುತ್ತವೆ ಗೊತ್ತಾ..? ಇದರ ಹಿಂದೆ ಒಂದು ಕಾರಣವೂ ಇದೆ ಎಂಬುದನ್ನು ನೀವು ಎಂದಾದರೂ ಯೋಚಿಸಿದ್ದೀರಾ? ಈ ಪ್ರಶ್ನೆಗೆ ನಾವಿಂದು ನಿಮಗೆ ತಿಳಿಸಿಕೊಡಲಿದ್ದೇವೆ.  


COMMERCIAL BREAK
SCROLL TO CONTINUE READING

ಕೋಳಿಗಳು ತಮ್ಮಲ್ಲಿ ಜೈವಿಕ ಗಡಿಯಾರವನ್ನು ಹೊಂದಿರುತ್ತವೆ. ಇದನ್ನು ʼಸಿರ್ಕಾಡಿಯನ್ ರಿದಮ್ʼ ಅಂತಾ ಕರೆಯಲಾಗುತ್ತದೆ. ಈ ಗಡಿಯಾರವು ಅದರ ದೇಹವನ್ನು 24 ಗಂಟೆಗಳ ಚಕ್ರದ ಆಧಾರದ ಮೇಲೆ ಕೆಲಸ ಮಾಡಲು ಹೇಳುತ್ತದೆ. ʼಸಿರ್ಕಾಡಿಯನ್​ ರಿದಮ್ʼ​ ಅಂದರೆ ದಿನದ 24 ಗಂಟೆಗಳ ಚಕ್ರದಲ್ಲಿ ಜೀವಿಯು ಅನುಭವಿಸುವ ದೈಹಿಕ, ಮಾನಸಿಕ ಮತ್ತು ನಡವಳಿಕೆಯ ಬದಲಾವಣೆಯಾಗಿದೆ.


ಇದನ್ನೂ ಓದಿ: ಆಫೀಸ್ ಕೆಲಸದ ನಡುವೆಯೇ S*X ಮಾಡಿ..! ದೇಶದ ಅಧ್ಯಕ್ಷರೇ ಈ ಶಾಕಿಂಗ್‌ ಸಲಹೆ ನೀಡಲು ಕಾರಣವೇನು?


ಸೂರ್ಯೋದಯದ ವೇಳೆ ಬೆಳಕಿನ ಬದಲಾವಣೆಯಿಂದ ಜೈವಿಕ ಗಡಿಯಾರವು ಸಕ್ರಿಯವಾಗುತ್ತದೆ, ಇದು ಕೋಳಿಗೆ ಸಿಗ್ನಲ್​ ನೀಡುತ್ತದೆ. ಕೋಳಿಯ ಕಣ್ಣುಗಳು ಬೆಳಕಿಗೆ ಬಹಳ ಸೂಕ್ಷ್ಮವಾಗಿರುತ್ತವೆ. ಹೀಗಾಗಿ ಕೋಳಿಯ ಕಣ್ಣುಗಳು ಸೂರ್ಯೋದಯದ ವೇಳೆ ಬೆಳಕಿನ ಬದಲಾವಣೆಯನ್ನು ತಕ್ಷಣವೇ ಹಿಡಿದುಕೊಳ್ಳುತ್ತವೆ, ಮೆದುಳಿಗೆ ಸಂಕೇತವನ್ನು ಕಳುಹಿಸುತ್ತದೆ. ಇದರಿಂದ ಕೋಳಿಗಳು ಕೂಗುತ್ತವೆ ಮತ್ತು ಬೆಳಕಿಗೆ ಹೊಂದಿಕೊಳ್ಳುತ್ತವೆ.


ಇದಲ್ಲದೆ ಕೋಳಿಗಳ ಸಾಮಾಜಿಕ ನಡವಳಿಕೆ ಅಂದ್ರೆ ಕೂಗುವುದು ತಮ್ಮ ಗುಂಪಿನ ಇತರ ಸದಸ್ಯರಿಗೆ ದಿನ ಪ್ರಾರಂಭವಾಗಿದೆ ಮತ್ತು ಎಚ್ಚರಗೊಳ್ಳಬೇಕೆಂಬ ಸಂಕೇತವಾಗಿದೆ. ಕೋಳಿಗಳು ಕೂಗುವ ಮೂಲಕ ತಮ್ಮ ಪ್ರದೇಶದಲ್ಲಿ ಇತರ ಕೋಳಿಗಳನ್ನು ಎಚ್ಚರಿಸುತ್ತವೆ. ಇದಲ್ಲದೆ ಕೆಲವು ಸಂದರ್ಭಗಳಲ್ಲಿ ಕೋಳಿಗಳು ಹೆಣ್ಣನ್ನು ಆಕರ್ಷಿಸಲು ಸಹ ಕಿರುಚುತ್ತವಂತೆ.


ಇದನ್ನೂ ಓದಿ: 2024ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ವಿಶ್ವ ನಾಯಕರು..! ಪ್ರಧಾನಿ ಮೋದಿ ಸ್ಥಾನ ಎಷ್ಟು ಗೊತ್ತೆ..?


ಶತಮಾನಗಳಿಂದಲೂ ಕೋಳಿಗಳ ಕೂಗನ್ನು ಸಮಯದ ಸಂಕೇತವೆಂದೇ ಪರಿಗಣಿಸಲಾಗಿದೆ. ರೈತರಿಗಂತೂ ಕೋಳಿ ಕೂಗುವುದು ದಿನವನ್ನ ಪ್ರಾರಂಭಿಸುವ ಸಂಕೇತವಾಗಿದೆ. ಇಂದಿಗೂ ಕೆಲವೆಡೆ ಇದು ನಡೆದುಕೊಂಡು ಬರುತ್ತಲೇ ಇದೆ. ಕೋಳಿ ಕೂಗಿದರೆ ಮಾತ್ರ ಬೆಳಗಾಗುವುದು ಅಂತಾ ಭಾವಿಸಿರುವ ಜನರು ಸಹ ಇದ್ದಾರೆ. ಕೋಳಿಗಳು ನೈಸರ್ಗಿಕ ಪ್ರಪಂಚದ ಜೀವನ ಚಕ್ರದ ವಿಶೇಷ ಭಾಗವಾಗಿದೆ. ಇದು ಹಗಲು-ರಾತ್ರಿಯ ಚಕ್ರವನ್ನು ಪ್ರತಿಬಿಂಬಿಸುತ್ತದೆ. ಇದು ಇತರ ಪ್ರಾಣಿಗಳ ನಡವಳಿಕೆಯ ಮೇಲೂ ಪರಿಣಾಮ ಬೀರುತ್ತದಂತೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ