ಹೈದರಾಬಾದ್: ‘ಪ್ರಥಮ ಚುಂಬನಂ ದಂತ ಭಗ್ನಂ’ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇಲೊಬ್ಬ ಪತ್ನಿಗೆ ಚುಂಬಿಸಲು ಹೋಗಿ ಆಸ್ಪತ್ರೆ ಸೇರಿದ್ದಾನೆ. ಹೌದು, ಕುಡಿದ ಮತ್ತಿನಲ್ಲಿ ಪತ್ನಿಗೆ ಚುಂಬಿಸಲು ಹೋದ ವ್ಯಕ್ತಿಯ ನಾಲಿಗೆಯೇ ಹರಿದಹೋಗಿದೆ. ಅಷ್ಟಕ್ಕೂ ಏನಾಯ್ತು ಅಂತೀರಾ? ಈ ಸ್ಟೋರಿ ನೋಡಿ.


COMMERCIAL BREAK
SCROLL TO CONTINUE READING

ಕುಡಿದ ಮತ್ತಿನಲ್ಲಿ ಕುಡುಕರು ಏನೇನ್ ಮಾಡ್ತಾರೋ ಅವರಿಗೆ ಗೊತ್ತಿರಲ್ಲ. ಕಂಠಪೂರ್ತಿ ಕುಡಿದು ತೂರಾಡುವ ಎಣ್ಣೆ ಪಾರ್ಟಿಗಳು ಮಾಡುವ ಯಡವಟ್ಟುಗಳಿಗೆ ಲೆಕ್ಕವಿಲ್ಲ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಕುಡಿದ ಮತ್ತಿನಲ್ಲಿ ತನ್ನ ಹೆಂಡತಿಗೆ ಚುಂಬಿಸಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾನೆ.


ಇದನ್ನೂ ಓದಿ: SSC Recruitment 2023: 1876 ಸಬ್ ಇನ್ಸ್ಪಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ


ಆಂಧ್ರಪ್ರದೇಶದ ಕರ್ನೂಲ್​ನಲ್ಲಿ ಈ ಆಘಾತಕಾಗಿ ಘಟನೆ ನಡೆದಿದೆ. ಬಲವಂತವಾಗಿ ಹೆಂಡತಿಗೆ ಕಿಸ್ ಕೊಟ್ಟ ವ್ಯಕ್ತಿಗೆ ಆಕೆ ಸರಿಯಾಗಿಯೇ ಪಾಠ ಕಲಿಸಿದ್ದಾಳೆ. ಒಟ್ಟಿಗೆ ಕುಳಿತು ಈ ದಂಪತಿ ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ರೋಮ್ಯಾನ್ಸ್ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಆತುರಗೆಟ್ಟಂತೆ ಪತ್ನಿಗೆ ಪತಿ ಚುಂಬಿಸಲು ಹೋಗಿದ್ದಾನೆ. ಆಕೆ ನಿಧಾನ ಎಂದರೂ ಕೇಳಿಲ್ಲ.


ಬಲವಂತವಾಗಿ ಚುಂಬಿಸಲು ಹೋದ ಗಂಡನ ನಾಲಿಗೆಯನ್ನು ಹೆಂಡತಿ ಕಚ್ಚಿಬಿಟ್ಟಿದ್ದಾಳೆ. ಪತಿಯ ನಾಲಿಗೆ ತುಂಡು ಆಗುವಷ್ಟು ಪತ್ನಿ ಕಚ್ಚಿಬಿಟ್ಟಿದ್ದಾಳೆ. ಪರಿಣಾಮ ಆತನ ನಾಲಿಗೆಯಿಂದ ಧಾರಾಕಾರವಾಗಿ ರಕ್ತ ಹರಿಯತೊಡಗಿದೆ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


ಇದನ್ನೂ ಓದಿ: Viral Video: ಮಾಂಸದ ಬದಲು ಎಲೆ ತಿನ್ನುತ್ತಿರುವ ಕಾಡಿನ ರಾಜ ಸಿಂಹ!


ಕುಡಿದ ಮತ್ತಿನಲ್ಲಿ ಬಲವಂತವಾಗಿ ಚುಂಬಿಸಲು ಹೋದ ಪತಿಗೆ ನಾಲಿಗೆಯಲ್ಲಿ ರಕ್ತ ಬರುವಂತೆ ಪತ್ನಿ ಕಚ್ಚಿದ್ದಾಳೆ. ಈ ಸುದ್ದಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಪತ್ನಿಗೆ ಕಿಸ್ ಮಾಡಬೇಕಾದರೆ ಪುರುಷರು ಹುಷಾರ್ ಆಗಿರಬೇಕೆಂದು ನೆಟಿಜನ್‍ಗಳು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಫನ್ನಿ ಫನ್ನಿಯಾಗಿ ಕಾಮೆಂಟ್‍ಗಳನ್ನು ಮಾಡುತ್ತಿದ್ದಾರೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.