ಮಾಲ್‌ನಲ್ಲಿ ಸಲಾರ್ ಸಿನಿಮಾ ನೋಡಲು ಮಕ್ಕಳನ್ನು ತಡೆದಿದಕ್ಕೆ ತಾಯಿ ಕಿರಿಕ್: ವಿಡಿಯೋ ವೈರಲ್!
Salaar Censor: ಹೈದರಾಬಾದ್ನ ಮಲ್ಟಿಪ್ಲೆಕ್ಸ್‌ಗೆ ಕುಟುಂಬವೊಂದು `ಸಲಾರ್` ಚಿತ್ರದ ಟಿಕೆಟ್ ಬುಕ್ ಮಾಡಿಕೊಂಡು ಸಿನಿಮಾ ನೋಡಲು ಹೋಗಿದ್ದಾಗ, ಇಬ್ಬರು ಪುಟ್ಟ ಮಕ್ಕಳಿದ್ದ ಕಾರಣ, ಮಕ್ಕಳ ತಾಯಿ ಸಿಬ್ಬಂದಿಯೊಂದಿಗೆ ಜಗಳವಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Salaar Audience Video Viral: ಟಾಲಿವುಡ್ ರೆಬಲ್ ಸ್ಟಾರ್ ಪ್ರಭಾಸ್ ಅಭಿನಯದ ʻಸಲಾರ್ʼನಲ್ಲಿ ವೈಲೆನ್ಸ್ ಹೆಚ್ಚಾಗಿದೆ ಎನ್ನುವ ಕಾರಣಕ್ಕೆ ಸೆನ್ಸಾರ್ ಮಂಡಳಿ 'A'(ವಯಸ್ಕ ಪ್ರಮಾಣ ಪತ್ರ) ಸರ್ಟಿಫಿಕೇಟ್ ಕೊಟ್ಟಿದ್ದು, ಅಂದರೆ 18 ವರ್ಷಕ್ಕಿಂತ ಚಿಕ್ಕ ಮಕ್ಕಳು ಸಿನಿಮಾ ನೋಡಲು ಅವಕಾಶವಿಲ್ಲ ಅಂದರ್ಥ. ಸಲಾರ್ ಚಿತ್ರತಂಡ ತಮ್ಮ ಕಥೆಗೆ ವೈಲೆನ್ಸ್ ಅವಶ್ಯಕತೆ ಇದ್ದಿದ್ದಕ್ಕಾಗಿ, 'A' ಸರ್ಟಿಫಿಕೇಟ್ ತಗೊಂಡಿದ್ದಾಗಿ ಹೇಳಿದೆ. ಆದರೂ ಈ ವಿಚಾರದಲ್ಲಿ ನನಗೆ ನಿರಾಸೆಯಾಗಿದೆ ಎಂದು ಪ್ರಶಾಂತ್ ನೀಲ್ ಹೇಳಿದ್ದರು.
ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ 'A' ಸರ್ಟಿಫಿಕೇಟ್ ಚಿತ್ರಗಳಿಗೂ ಕೆಲವರು ಮಕ್ಕಳನ್ನು ಕರೆದುಕೊಂಡು ಹೋಗಿಬಿಡಬಹುದು, ಆದರೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಇದಕ್ಕೆ ಅವಕಾಶವಿರುವುದಿಲ್ಲ. ಹೈದರಾಬಾದ್‌ನಲ್ಲಿ ಕುಟುಂಬವೊಂದು ಮಕ್ಕಳೊಂದಿಗೆ 'ಸಲಾರ್' ಚಿತ್ರಕ್ಕೆ ವೀಕ್ಷಿಸಲು ಮಲ್ಟಿಪ್ಲೆಕ್ಸ್‌ಗೆ ತೆರಳಿದಾಗ, ಅಲ್ಲಿಯ ಸಿಬ್ಬಂದಿ ಮಕ್ಕಳಿಗೆ ಅವಕಾಶವಿಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ. ಇದಕ್ಕೆ ಮಕ್ಕಳ ತಾಯಿ ಸಿಬ್ಬಂದಿಯೊಂದಿಗೆ ಜಗಳವಾಡಿರುವ ವಿಡಿಯೋ, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಸಲಾರ್ ಮೇಕಿಂಗ್ ವಿಡಿಯೋ ನೋಡಿದ್ದೀರಾ..? ಆ ಸೀನ್ ಮಾತ್ರ ಗ್ರಾಫಿಕ್ಸ್ ಅಲ್ಲವೇ ಅಲ್ಲ..!
ಹೈದರಾಬಾದ್ ಉಪ್ಪಲ್ ಬಳಿ ಡಿಎಸೆಲ್ ವಿರ್ತು ಮಾಲ್‌ನಲ್ಲಿ ಸಿನಿಪಾಲೀಸ್ ಪರದೆಗಳನ್ನು ಹೊಂದಿದು, ಸದ್ಯ 'ಸಲಾರ್' ಸಿನಿಮಾ ಪ್ರದರ್ಶನವಾಗುತ್ತಿದೆ. ಕುಟುಂಬವೊಂದು 'ಸಲಾರ್' ಚಿತ್ರದ ಟಿಕೆಟ್ ಬುಕ್ ಮಾಡಿಕೊಂಡು ಸಿನಿಮಾ ನೋಡಲು ಹೋಗಿದ್ದಾಗ, ಇಬ್ಬರು ಪುಟ್ಟ ಮಕ್ಕಳಿದ್ದ ಕಾರಣ ಅವರನ್ನು ಥಿಯೇಟರ್ ಒಳಗೆ ಬಿಡಲಿಲ್ಲ. ಕೂಡಲೇ ಮಕ್ಕಳ ತಾಯಿ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾರೂ, ಸಿಬ್ಬಂದಿ ಅವರನ್ನು ಥಿಯೇಟರ್ ಒಳಗೆ ಬಿಡಲಿಲ್ಲ.
ವಿಡಿಯೋದಲ್ಲಿ ಮಹಿಳೆ, "ನನ್ನ ಮಕ್ಕಳನ್ನು ಯಾವ ಸಿನಿಮಾ ನೋಡಲು ಕರ್ಕೊಂಡು ಹೋಗಬೇಕೋ ನನಗೆ ಗೊತ್ತಿಲ್ವಾ?" ಎಂದು ಸಿಬ್ಬಂದಿ ಜೊತೆ ವಾದಿಸುತ್ತಿರುವುದು ಹೈಲೆಟ್ ಆಗಿದು, ಆ ತಾಯಿಯ ವಾದ ದೊಡ್ಡ ಚರ್ಚೆ ಹುಟ್ಟಾಕ್ಕಿರುವುದಂತು ಸುಳ್ಳಲ್ಲ. ಸಿಂಗಲ್ ಸ್ಕ್ರೀನ್ ಥಿಯೇಟರ್ ಸಿಬ್ಬಂದಿ ಈ ರೀತಿ 'A' ಸರ್ಟಿಫಿಕೇಟ್ ಚಿತ್ರಕ್ಕೆ ಮಕ್ಕಳು ಬರುವುದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಆದರೆ ಪಿವಿಆರ್, ಐನಾಕ್ಸ್, ಸಿನಿಪೊಲಿಸ್ ರೀತಿಯ ಮಲ್ಟಿಪ್ಲೆಕ್ಸ್ ಚೈನ್‌ಗಳಲ್ಲಿ ಈ ನಿಯಮಗಳನ್ನು ತಪ್ಪದೇ ಪಾಲಿಸುತ್ತಾರೆ.
ಸಲಾರ್‌ನಲ್ಲಿ ಚಂದನವನದ ಕಲಾಕರ್ಸ್ ಹವಾ! ಯಾರೆಲ್ಲಾ ಇದ್ದಾರೇ ಗೊತ್ತೇ?
ಈ ವಿಡಿಯೋ ನೋಡಿದವರು, ಮಕ್ಕಳಿಗೆ 'A' ಸರ್ಟಿಫಿಕೇಟ್ ಸಿನಿಮಾ ತೋರಿಸಲು ಹೇಗೆ ಸಾಧ್ಯ? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಹಿಂಸೆಯ ಸನ್ನಿವೇಶಗಳಲ್ಲಿ ಸೌಂಡ್ ಕೂಡ ಹೆಚ್ಚಾಗಿರುತ್ತದೆ. ಅಂತಹ ಶಬ್ಧ ಮಕ್ಕಳು ಸಹಿಸುವುದು ಕಷ್ಟ ಎನ್ನುತ್ತಿದ್ದಾರೆ. ಆದರೆ ಇನ್ನೂ ಕೆಲವರು ಸೆನ್ಸಾರ್ ಮಂಡಳಿಯ ನಿರ್ಧಾರವನ್ನು ಟೀಕಿಸುತ್ತಾ, ಮಕ್ಕಳು 'A' ಸರ್ಟಿಫಿಕೇಟ್ ಸಿನಿಮಾ ನೋಡಬೇಕೋ ಬೇಡವೋ ಎಂಬುದು ಪೋಷಕರಿಗೆ ಬಿಟ್ಟ ವಿಚಾರ ಎನ್ನುವುದು ಅವರ ಅಭಿಪ್ರಾಯ. 'A' ಸರ್ಟಿಫಿಕೇಟ್ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡದಿದ್ದರೆ ಬಳಿಕ ಓಟಿಟಿಯಲ್ಲಿ ಬಂದರೆ ಮನೆಯಲ್ಲಿರುವ ಮಕ್ಕಳು ನೋಡಲ್ವಾ? ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.