Viral Video: ಇಬ್ಬರು ಗಂಡಂದಿರ ಮುದ್ದಿನ ಹೆಂಡತಿ.. ಒಂದೆ ಬೆಡ್.. ಒಂದೆ ರೂಮ್..! ಯಪ್ಪಾ ದೇವ್ರೆ ಸಂಸಾರ ಹೀಗೂ ಮಾಡ್ತಾರಾ? ವಿಡಿಯೋ ವೈರಲ್..
Woman with two husband Video: ಡಿಯೋರಿಯಾದಲ್ಲಿ ನೆಲೆಸಿರುವ ಮಹಿಳೆ ಸಾಮಾಜಿಕ ಮಾಧ್ಯಮದಲ್ಲಿ ವಿಶಿಷ್ಟವಾದ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ. ಒಂದೇ ಮನೆಯಲ್ಲಿ ಇಬ್ಬರು ಗಂಡಂದಿರೊಂದಿಗೆ ವಾಸವಾಗಿರುವುದಾಗಿ ಮಹಿಳೆ ತಿಳಿಸಿದ್ದಾರೆ. ಸದ್ಯ ಈ ಸಂಬಂಧ ವಿಡಿಯೋ ಸಖತ್ ವೈರಲ್ ಆಗಿದೆ..
Viral Video: ಸಂಬಂಧಗಳು ಮತ್ತು ಬಾಂಧವ್ಯಗಳು ದಿನದಿಂದ ದಿನಕ್ಕೆ ವಿಚಿತ್ರವಾಗುತ್ತಿವೆ. ಅದರಲ್ಲೂ ಮದುವೆಯ ವಿಚಾರದಲ್ಲಿ.. ದಾಂಪತ್ಯ ಜೀವನದ ಪಾವಿತ್ರ್ಯ ದಿನದಿಂದ ದಿನಕ್ಕೆ ಹಲವು ರೀತಿಯಲ್ಲಿ ಬದಲಾಗುತ್ತಿದೆ. ಅರ್ಮಾನ್ ಮಲಿಕ್ ಬಿಗ್ ಬಾಸ್ ಸೇರಿದ ನಂತರ ಇಬ್ಬರು ಹೆಂಡತಿಯರಿಂದ ಇಡೀ ಜಗತ್ತಿಗೆ ಪರಿಚಿತರಾದರು.. ಇಬ್ಬರು ಪತ್ನಿಯರ ಜೊತೆ ಸುಖವಾಗಿ ಜೀವನ ನಡೆಸುತ್ತಿರುವ ಅರ್ಮಾನ್ ಮಲಿಕ್ ಹೆಸರು ಈಗ ಮತ್ತೇ ಸುದ್ದಿಯಲ್ಲಿದೆ. ಏಕೆಂದರೇ ಡಿಯೋರಿಯಾದಲ್ಲಿ ಮಹಿಳೆಯೊಬ್ಬಳು ತನ್ನ ಇಬ್ಬರು ಗಂಡಂದಿರೊಂದಿಗೆ ವಾಸಿಸುತ್ತಿದ್ದೇನೆ ಎಂದು ಸಾರ್ವಜನಿಕವಾಗಿ ಹೇಳಿದ್ದಲ್ಲದೇ ಆಕೆಯೇ ಶೇರ್ ಮಾಡಿರುವ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಭಾರತದಲ್ಲಿ, ಮದುವೆಯ ಪವಿತ್ರ ಸಮಾರಂಭವನ್ನು ಜೀವನದ ಪ್ರಮುಖ ಕ್ಷಣವೆಂದು ಪರಿಗಣಿಸಲಾಗುತ್ತದೆ. ಹಿಂದೂ ಪುರಾಣಗಳಲ್ಲಿ, ಮದುವೆಯನ್ನು ಏಳು ಜನ್ಮಗಳ ಬಂಧವೆಂದು ಪರಿಗಣಿಸಲಾಗುತ್ತದೆ. ಹಿಂದೂ ಧಾರ್ಮಿಕ ಕಾನೂನಿನ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು ಒಮ್ಮೆ ಮಾತ್ರ ಮದುವೆಯಾಗಬಹುದು. ಆದರೆ ಡಿಯೋರಿಯಾದಲ್ಲಿ ವಾಸಿಸುವ ಮಹಿಳೆ ಈ ನಿಯಮಗಳನ್ನು ಉಲ್ಲಂಘಿಸಿ ಒಂದೇ ಸಮಯದಲ್ಲಿ ಎರಡು ಬಾರಿ ವಿವಾಹವಾದರು. ಅಷ್ಟೇ ಅಲ್ಲ, ಮಹಿಳೆ ತನ್ನ ಇಬ್ಬರು ಗಂಡಂದಿರೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಾಳೆ. ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಕ್ಷಣಾರ್ಧದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ-ಸತತ ಇಳಿಕೆ ಕಾಣುತ್ತಿರುವ ಬಂಗಾರ! ಇಂದೆಷ್ಟಿದೆ 10 ಗ್ರಾಂ ಚಿನ್ನದ ಬೆಲೆ?!
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವಿಡಿಯೋ ಪ್ರಕಾರ, ಮಹಿಳೆ ಡಿಯೋರಿಯಾ ನಿವಾಸಿ. ಆ ಮಹಿಳೆಯ ಪಕ್ಕದಲ್ಲಿ ಕಾಣಿಸಿಕೊಂಡಿರುವ ಇಬ್ಬರು ಪುರುಷರು ಆಕೆಯ ಗಂಡಂದಿರಂತೆ.. ಇಬ್ಬರ ಜೊತೆ ಒಂದೇ ಮನೆಯಲ್ಲಿ ವಾಸವಾಗಿರುವ ಆಕೆ ಕುತ್ತಿಗೆಯಲ್ಲಿ ಎರಡು ಮಂಗಳಸೂತ್ರಗಳನ್ನು ಧರಿಸಿದ್ದಾರೆ..
ವೀಡಿಯೊದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಗಂಡಂದಿರಿಗೆ ಹೇಗೆ ಸಮಯ ನೀಡುತ್ತೀರಿ? ಎಂದು ಮಹಿಳೆಯನ್ನು ಕೇಳಿದಾಗ.. ಆ ಮಹಿಳೆ ಬಹಳ ಸಂತೋಷದಿಂದ ತಾನು ನಿರ್ವಹಿಸುತ್ತೇನೆ ಎಂದು ಉತ್ತರಿಸಿದ್ದಾಳೆ.. ಆದರೆ ಈ ವೀಡಿಯೋ ಶೇರ್ ಮಾಡಿದ ನಂತರ ಹಲವರು ಕಾಮೆಂಟ್ ಮಾಡಿ ಮಹಿಳೆಯನ್ನು ಟೀಕಿಸಿದ್ದಾರೆ. ಅನೇಕರು ಅವಳನ್ನು ಲೇಡಿ ಅರ್ಮಾನ್ ಮಲಿಕ್ ಎಂದು ಹೇಳಿದ್ದಾರೆ.. ಆದರೆ ಆ ಮಹಿಳೆಯ ಮಾತಿನಲ್ಲಿ ಎಷ್ಟರಮಟ್ಟಿಗೆ ಸತ್ಯವಿದೆಯೋ ಗೊತ್ತಿಲ್ಲ.. ಈ ಮೂವರು ವೈರಲ್ ಆಗಲು ಈ ರೀತಿ ನಟಿಸುತ್ತಿದ್ದಾರೆ ಎಂದು ಹಲವರು ಹೇಳುತ್ತಿದ್ದಾರೆ.. ವಿಡಿಯೋದಲ್ಲಿನ ಮಹಿಳೆ ನಿಜವಾಗಿ ಎರಡು ಮದುವೆ ಆಗಿದ್ದಾಳೆ ಎನ್ನುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ.. ಆಕೆ ಹೇಳಿರುವ ಮಾತುಗಳನ್ನು ಆಧರಿಸಿ ಸುದ್ದಿ ಮಾಡಲಾಗಿದೆ.. ಇದು ಖಚಿತವಾಗಿ ನಡೆದಿದೆ ಎಂದು ZEE KANNADA NEWS ಹೇಳುವುದಿಲ್ಲ..
ಇದನ್ನೂ ಓದಿ-ರೋಹಿತ್ ಶರ್ಮಾ ನಂತರ ಟೀಮ್ ಇಂಡಿಯಾ ಕ್ಯಾಪ್ಟನ್ ಯಾರು.. 3 ಸ್ಟಾರ್ ಆಟಗಾರರ ನಡುವೆ ಭಾರೀ ಪೈಪೋಟಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.