Girl Gyming In Saari Video: ಕೆಲವು ಜನರು ತಮ್ಮ ದೈಹಿಕ ವ್ಯಾಯಾಮದ ಬಗ್ಗೆ ತುಂಬಾ ಗಂಭೀರವಾಗಿರುತ್ತಾರೆ. ಅವರು ಹಗಲು ಅಥವಾ ರಾತ್ರಿಯ ಯಾವುದೇ ಸಮಯದಲ್ಲಿ ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಾರೆ. ಜಿಮ್ ಮತ್ತು ಫಿಟ್ನೆಸ್‌ನ ಅದ್ಭುತ ಕ್ರೇಜ್ ಮಹಿಳೆಯರಲ್ಲಿಯೂ ಕಂಡುಬರುತ್ತದೆ. ಮಹಿಳೆಯರು ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚಿನ ಗಮನ ನೀಡುತ್ತಾರೆ. ಇದರಿಂದ ಅವರು ಸ್ಲಿಮ್ ಮತ್ತು ಫಿಟ್ ಆಗಿ ಕಾಣುತ್ತಾರೆ. ಕೆಲವು ಮಹಿಳೆಯರು ಇಂತಹ ಬಲವಾದ ವ್ಯಾಯಾಮಗಳನ್ನು ಮಾಡುತ್ತಾರೆ. ಇದೀಗ ಸೀರೆ ಉಟ್ಟ ಮಹಿಳೆಯೊಬ್ಬರು ಅಪಾಯಕಾರಿ ಕಸರತ್ತು ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Python Video : ಐಷಾರಾಮಿ ಹೋಟೆಲ್‌ನಲ್ಲಿ ಹುಡುಗಿಯರ ಜೊತೆ ಹೆಬ್ಬಾವಿನ ಡಿನ್ನರ್‌ ಪಾರ್ಟಿ 


ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಮಹಿಳೆಯೊಬ್ಬರು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವುದನ್ನು ನೀವು ನೋಡಬಹುದು. ಇದರಲ್ಲಿ ಅಚ್ಚರಿಯ ಸಂಗತಿ ಎಂದರೆ ಸೀರೆ ಉಟ್ಟುಕೊಂಡು ಸಂಪೂರ್ಣ ವರ್ಕೌಟ್ ಮಾಡಿದ್ದಾರೆ. ವರ್ಕೌಟ್‌ ವೇಳೆ ಭಾರವಾದ ಟ್ರಕ್ ಟಯರ್ ಅನ್ನು ತಲೆ ಮೇಲೆ ಎತ್ತಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ರೀನಾ ಸಿಂಗ್ ಎಂಬ ಮಹಿಳೆ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇದೇ ರೀತಿಯ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಲೇ ಇರುತ್ತಾರೆ. ಅವರ ವಿಡಿಯೋಗಳನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಗುಲಾಬಿ ಬಣ್ಣದ ಸೀರೆ ಉಟ್ಟು ರೀನಾ ಈ ಬಾರಿ ವರ್ಕೌಟ್ ಮಾಡಿದ್ದು ನೂರಾರು ಹುಡುಗರು ಫಿದಾ ಆಗಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡ ರೀನಾ, "ಇದು ಕೇವಲ ಆರಂಭ" ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.


 



 


ಸೀರೆ ಉಟ್ಟಿದ್ದ ಮಹಿಳೆ ತನ್ನ ಕೈಗಳಿಂದ ಟ್ರಕ್‌ನ ಚಕ್ರವನ್ನು ಎತ್ತುವ ರೀತಿ, ಜನರು ಅದನ್ನು ನಂಬಲು ಅಸಾಧ್ಯ ಎಂಬಂತಿದೆ. ರೀನಾ ಟೈರ್‌ನೊಂದಿಗೆ ಸ್ಕ್ವಾಟ್‌ಗಳನ್ನು ಸಹ ಮಾಡಿದರು. ಇದುವರೆಗೆ ಈ ವಿಡಿಯೋವನ್ನು ಮೂರೂವರೆ ಲಕ್ಷಕ್ಕೂ ಹೆಚ್ಚು ಮಂದಿ ಲೈಕ್‌ ಮಾಡಿದ್ದು, 16 ಮಿಲಿಯನ್ ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ವಿಡಿಯೋ ನೋಡಿದ ಹಲವರು ಕಾಮೆಂಟ್ ಬಾಕ್ಸ್‌ನಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.  


ಇದನ್ನೂ ಓದಿ : Viral Video : ವಧುವನ್ನು ಎತ್ತಿಕೊಂಡು ಕಿಸ್‌ ಕೊಡಲು ಹೋದ ವರ! ಆದ್ರೆ ಸಿಕ್ಕಿದ್ದು ಬಹುದೊಡ್ಡ ಶಾಕ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.