middle aged woman marries niece: ಸಾಮಾನ್ಯವಾಗಿ ಅತ್ತೆ ಸೊಸೆಯೆಂದರೆ ಜಗಲ ಮನಸ್ತಾಪ ಇದ್ದೇ ಇರುತ್ತದೆ. ಅತ್ತೆ ಸೊಸೆಯಂದಿರ ಜಗಲ ಬಿಡಿಸೋಕೆ ಆಗದೆ ಮನೆಯಲ್ಲಿನ ಗಂಡಸರೊಂತೂ ಸುಸ್ತಾಗೊ ಹೋಗುತ್ತಾರೆ. ಆದರೆ ಇಲ್ಲೊಬ್ಬ ಅತ್ತೆ ಸೊಸೆ ಪ್ರೀತಿಸಿ ಮದುವೆಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಹೌದು, ಪಾಟ್ನಾದ ಮಹಿಳೆಯೊಬ್ಬರು ತನ್ನ ಗಂಡನ್ನು ಬಿಟ್ಟು ಸೊಸೆಯನ್ನು ಮದುವೆಯಾಗಿದ್ದಾರೆ. ಈ ಅಪರೂಪದ ಘಟನೆ ಬಿಹಾರ ರಾಜ್ಯದ ಗೋಪಾಲ್‌ಗಂಜ್‌ ಎಂಬ ಜಿಲ್ಲೆಯಲ್ಲಿ ನಡೆದಿದೆ.


ಶೋಭಾ ಹಾಗೂ ಸುಮನ್‌ ಇಬ್ಬರು ಸಂಬಂಧಿಗಳಾಗಿದ್ದು, ಸಂಬಂಧದಲ್ಲಿ ಈ ಇಬ್ಬರು ಅತ್ತೆ ಸೊಸೆ ವರೆಸೆಯಂತೆ. ಈ ಇಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ಲವ್‌ ಆಗಿತ್ತು. ಮೂರು ವರ್ಷಗಳ ಕಾಲ ಪರಸ್ಪರ ಪ್ರೀತಿ ಮಾಡುತ್ತಿದ್ದ ಈ ಜೋಡಿ ಏಕಾಏಕಿ ಓಡಿ ಹೋಗಿ ಮದುವೆಯಾಗಿದ್ದಾರೆ.


ಶೋಭಾ ಮತ್ತೊಬ್ಬರ ಜೊತೆ ಮದುವೆಯಾಗುವುದು ಪ್ರೇಯಸಿ ಸುಮನ್‌ಗೆ ಇಷ್ಟ ಇರಲಿಲ್ಲವಂತೆ, ಇದೇ ಕಾರಣದಿಂದ ಶೋಭಾಳನ್ನು ಮನೆ ಬಿಟ್ಟು ಬರುವಂತೆ ಒತ್ತಾಯಿಸಿ ಈ ಜೋಡಿ ಕೊನೆಗೆ ಮದುವೆಯಾಗಿದ್ದಾರೆ.


ಬಿಹಾರದ ಈ ಜೋಡಿ ಬೆಳವ ಗ್ರಾಮದ ದೇವಸ್ಥಾನದಲ್ಲಿ ಹಾರ ಬದಲಿಸಿಕೊಂಡು ಮದುವೆಯಾಗಿದ್ದಾರೆ. ಇದೀಗ ಸ್ಥಳಿಯರು ಸಾಮಾಜಿಕ ಜಾಲತಣದಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.


ಇನ್ನೂ, ಮದುವೆ ನಂತರ ಮಾತನಾಡಿದ ಸುಮನ್‌ "ಶೋಭಾ ಇಲ್ಲದೆ ನನ್ನ ಜೀವನವನ್ನು ಊಹಿಸೋಕು ಸಾಧ್ಯ ಇಲ್ಲ. ಎಲ್ಲಿ ಬೇರೆಯವರನ್ನು ಮದುವೆಯಾದರೆ ಆಕೆಯನ್ನು ಕಳೆದುಕೊಳ್ಳುತ್ತೇನೋ ಎಂಬ ಭಾಯ ಶುರುವಾಯಿತು. ಇದೇ ಕಾರಣದಿಂದಾಗಿ ಇದೀಗ ನಾವು ಮನೆಯಿಂದ ಹೊರಬಂದು ಮದುವೆಯಾಗಿದ್ದೇವೆ" ಎಂದಿದ್ದಾರೆ.


ಇನ್ನೂ ಈ ಜೋಡಿಯ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದ, ವಿಡಿಯೋ ನೋಡಿದ ಹಲವರು ವಿವಿಧ ರೀತಿಯಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.