ಈ ಹಿಂದೆಯೂ ಇಂತಹ ಹಲವು ಅವಘಡಗಳು ನಡೆದಿವೆ, ವಿವಿಧ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳು ಬಾಂಬ್‌ನಂತೆ ಸ್ಫೋಟಗೊಂಡ ಹಲವು ಪ್ರಕರಣಗಳು ಮುನ್ನೆಲೆಗೆ ಬಂದಿವೆ. ಇತ್ತೀಚೆಗೆ, ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಸಂಸ್ಥೆ ಶಿಯೋಮಿಯ ಸ್ಮಾರ್ಟ್‌ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡ ಪ್ರಕರಣವು ಭಾರತದಲ್ಲಿ ಸಂಭವಿಸಿದೆ. ರಿಪೇರಿ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಅದರ ವಿಡಿಯೋ ಕೂಡ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: 5 ಮನೆ, ಥಿಯೇಟರ್, ಈಜುಕೊಳ & ಲಕ್ಷುರಿ ಕಾರು: ಸರ್ಕಾರಿ ನೌಕರನ ಮನೆ ನೋಡಿ ಅಧಿಕಾರಿಗಳಿಗೆ ಶಾಕ್!


ಈ ಸ್ಮಾರ್ಟ್‌ಫೋನ್ ಹೇಗೆ ಸ್ಫೋಟಗೊಂಡಿದೆ. ಸ್ಮಾರ್ಟ್‌ಫೋನ್‌ಗಳು ಸಾಮಾನ್ಯವಾಗಿ ಏಕೆ ಸ್ಫೋಟಗೊಳ್ಳುತ್ತವೆ ಎಂಬ ಬಗ್ಗೆ ಇಲ್ಲಿ ಮಾಹಿತಿಯನ್ನು ನೀಡಲಿದ್ದೇವೆ.


ಮಧ್ಯಪ್ರದೇಶದ ಬಾಟ್‌ಘಾಟ್‌ನಲ್ಲಿರುವ ರಿಪೇರಿ ಅಂಗಡಿಯಲ್ಲಿ ನಡೆದಿದೆ. ಫೋನ್‌ನ ಬ್ಯಾಟರಿ ಉಬ್ಬಲು ಪ್ರಾರಂಭಿಸಿದ ಕಾರಣ ವ್ಯಕ್ತಿಯೊಬ್ಬರು ತನ್ನ ಸ್ಮಾರ್ಟ್‌ಫೋನ್ ಸರಿಪಡಿಸಲು ಅಂಗಡಿಗೆ ಬಂದಿದ್ದಾನೆ. ಆದರೆ ಈ ಸಂದರ್ಭದಲ್ಲಿ ಫೋನ್ ಗೆ ಕರೆ ಬಂದಿದೆ. ತಕ್ಷಣವೇ ಫೋನ್ ಬಾಂಬ್ ಥರ ಬ್ಲ್ಯಾಸ್ಟ್ ಆಗಿದ್ದು, ಜನರು ಭಯಭೀತರಾಗಿದ್ದಾರೆ. ಆದರೆ ಯಾವುದೇ ಗಾಯಗಳಾಗಿಲ್ಲ. ಈ ಸ್ಮಾರ್ಟ್‌ಫೋನ್ Xiaomi ಬ್ರಾಂಡ್‌ಗೆ ಸೇರಿದೆ ಎಂದು ಹೇಳಲಾಗುತ್ತಿದೆ.


ಫೋನ್ ಸ್ಫೋಟಕ್ಕೆ ಕಾರಣ:  ಈ ಸ್ಮಾರ್ಟ್‌ಫೋನ್ ಏಕಾಏಕಿ ಹೇಗೆ ಸ್ಫೋಟಗೊಂಡಿತು ಎಂದು ನೀವು ಆಶ್ಚರ್ಯ ಪಡುತ್ತಿದ್ದೀರಾ? ಫೋನ್‌ನ ಬ್ಯಾಟರಿ ಉಬ್ಬಿದ್ದ ಸಂದರ್ಭದಲ್ಲಿ ಕರೆ ಬಂದಿದೆ. ಆಗ ಬ್ಯಾಟರಿಯಲ್ಲಿ ಸ್ಫೋಟ ಸಂಭವಿಸಿದೆ, ಇಂತಹ ಅವಘಡಗಳು ಈ ಹಿಂದೆಯೂ ನಡೆದಿದ್ದು, ಹೆಚ್ಚಿನ ಸಂದರ್ಭಗಳಲ್ಲಿ ಬ್ಯಾಟರಿಗೆ ಸಂಬಂಧಿಸಿವೆ.


ಇದನ್ನೂ ಓದಿ: ಅಥಣಿಯಲ್ಲಿ ಭೀಕರ ಅಪಘಾತ ಪ್ರಕರಣ : ಸ್ಥಳಕ್ಕೆ ಬೆಳಗಾವಿ ಎಸ್ಪಿ ಸಂಜೀವ್ ಪಾಟೀಲ ಭೇಟಿ


ಈ ಸಣ್ಣ ತಪ್ಪಿನಿಂದ ಅವಘಡ: ಸ್ಮಾರ್ಟ್‌ಫೋನ್ ಸ್ಫೋಟಗಳ್ಳುವುದು ಇಂದು ತುಂಬಾ ಸಾಮಾನ್ಯವಾಗಿದೆ, ನಿಮ್ಮ ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳದಂತೆ ನೀವು ತಪ್ಪಿಸಬೇಕಾದರೆ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ. ಮೊಬೈಲ್ ಬಿಸಿಯಾಗುವುದರಿಂದ ಸಾಮಾನ್ಯವಾಗಿ ಸ್ಮಾರ್ಟ್‌ಫೋನ್ ಸ್ಫೋಟ ಸಂಭವಿಸುತ್ತದೆ. ಫೋನ್ ಅಗತ್ಯಕ್ಕಿಂತ ಹೆಚ್ಚು ಸಮಯ ಚಾರ್ಜ್ ಮಾಡಿದಾಗ ಅಥವಾ ಚಾರ್ಜ್ ಮಾಡುವಾಗ ನೀವು ಫೋನ್ ಅನ್ನು ಬಳಸಿದರೆ ಸ್ಪೋಟಗೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಆದಷ್ಟು ಇಂತಹ ತಪ್ಪುಗಳನ್ನು ದೂರ ಮಾಡಿದಲ್ಲಿ ಫೋನ್ ಸ್ಪೋಟಗೊಳ್ಳುವುದನ್ನು ತಪ್ಪಿಸಬಹುದು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.