Trending Video: ಕಿಂಗ್ ಕೋಬ್ರಾ ಅಥವಾ ಕಾಳಿಂಗ ಸರ್ಪ ಹಾವು ಎಷ್ಟೊಂದು ಅಪಾಯಕಾರಿಯಾಗಿರುತ್ತದೆ ಎಂಬ ಸಂಗತಿ ಯಾರಿಗೂ ಹೇಳಬೇಕಾಗಿಲ್ಲ. ಅದರ ಹತ್ತಿರಕ್ಕೂ ಹೋಗಲು ಯಾರು ಇಷ್ಟಪಡುವುದಿಲ್ಲ. ಅಷ್ಟೇ ಯಾಕೆ ಕಾಳಿಂಗ ಸರ್ಪ ಒಂದೊಮ್ಮೆ ಕಣ್ಣಿಗೆ ಬಿದ್ದರೆ ಎದೆಯೇ ಝಲ್ ಎನ್ನುತ್ತದೆ.  ಇದಕ್ಕೆ ವಿಪರೀತ ಎಂಬಂತೆ ಅದನ್ನು ಸುಲಭವಾಗಿ ಹಿಡಿಯುವ ಹಲವು ಸರ್ಪ ಮಿತ್ರರೂ ಕೂಡ ನಮ್ಮ ಮಧ್ಯೆ ಇದ್ದಾರೆ. ಆದರೆ ವ್ಯಕ್ತಿಯೊಬ್ಬ ಇಂತಹ ಅಪಾಯಕಾರಿ ಜೀವಿಯನ್ನು ಸಾಕು ಪ್ರಾಣಿಯಂತೆ ಸಾಕುತ್ತಿದ್ದಾನೆ, ಅದನ್ನು ಪ್ರೀತಿಯಿಂದ ಚುಂಬಿಸುತ್ತಿದ್ದಾನೆ ಎಂಬುದನ್ನೂ ಎಲ್ಲಾದರೂ ನೀವು ಕೇಳಿದ್ದೀರಾ ಅಥವಾ ನೋಡಿದ್ದೀರಾ? ಏಕೆಂದರೆ ಅದನ್ನು ಊಹಿಸಲೂ ಅಸಾಧ್ಯ. ಆದರೆ ಜಗತ್ತಿನಲ್ಲಿ ಇಂತಹ ಸಾಧನೆ ಮಾಡಲು ಹೆದರದ ಕೆಲ ಜನರು ಇರ್ತಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Viral Video: ವೇಗವಾಗಿ ಚಲಿಸುತ್ತಿದ್ದ ಆಟೋಮೋಡ್ ಕಾರಲ್ಲಿ ಪತಿ-ಪತ್ನಿಯ ಸರಸ... ವಿಡಿಯೋ ನೋಡಿ!

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ  ವ್ಯಕ್ತಿಯೊಬ್ಬ ಹಾವಿಗೆ ಮುತ್ತಿಡುತ್ತಿರುವ ದೃಶ್ಯವಿದೆ. ಇದು ಮಾಮೂಲಿ ಹಾವಲ್ಲ, ಇದರ ಬಗ್ಗೆ ಕೇಳಿದರೆ ಮೈ ಜುಮ್ಮೆನ್ನುತ್ತದೆ. ಈ ಹಾವು ಬೇರಾವ ಹಾವು ಅಲ್ಲ ಮತ್ತು ಅದು  ಕಿಂಗ್ ಕೋಬ್ರಾ ಆಗಿದೆ. ಹೌದು.. ಅದು ಕಾಳಿಂಗ ಸರ್ಪ.  ಛೇ ಯಾರಾದರೂ ಕಾಳಿಂಗ ಸರ್ಪವನ್ನು ಸಾಕಿ ಅದನ್ನು ಚುಂಬಿಸುತ್ತಾರಾ? ಅಸಾಧ್ಯ ಮತ್ತು ನಂಬಲಸಾಧ್ಯ ಅಂತ ನೀವೂ ಹೇಳಬಹುದು. ಆದರೆ ಇದು 100% ನಿಜ. ಈ ಅಪಾಯಕಾರಿ ಸಾಹಸದ ವೀಡಿಯೋವನ್ನು ನೀವೂ ನೋಡಬಹುದು, ಇದನ್ನು ನೋಡಿ ಒಂದು ಕ್ಷಣ ನಿಮ್ಮ ತಲೆ ಕೂಡ ಗಿರ್ರ್ ಅಂತ ಸುತ್ತುವುದು ಮಾತ್ರ ಗ್ಯಾರಂಟಿ .



ಇದನ್ನೂ ಓದಿ-Viral Video: ರಸ್ತೆಗಿಳಿದ ವಿಶ್ವದ ಅತಿ ದೊಡ್ಡ ಹಾವು ಅನಕೊಂಡ, ನೋಡಿ ಸ್ಥಭ್ದರಾದ ಜನ!

ಕಾಳಿಂಗ ಸರ್ಪ-ಮನುಷ್ಯನ ಕಿಸ್ಸಿಂಗ್ ಸೀನ್ ವೈರಲ್
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋಗೆ. ಇದುವರೆಗೆ ಹಲವು ಪ್ರತಿಕ್ರಿಯೆಗಳು ಬಂದಿವೆ. ಈ ವೀಡಿಯೋ (ಟ್ರೆಂಡಿಂಗ್ ವೀಡಿಯೋ) ಕುರಿತು ಪ್ರತಿಕ್ರಿಯಿಸಿದ ಬಳಕೆದಾರರು, ವ್ಯಕ್ತಿ ನಿಜವಾಗಿಯೂ ಗಟ್ಸ್ ಹೊಂದಿದ್ದಾನೆ ಮತ್ತು ಇಂತಹ ಅಪಾಯಕಾರಿ ಕೃತ್ಯವನ್ನು ಮಾಡುತ್ತಿದ್ದಾನೆ... ದೇವರು ನಿನ್ನನ್ನು ರಕ್ಷಿಸಲಿ ಎಂದು ಹೇಳುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಮತ್ತೊಬ್ಬ ಬಳಕೆದಾರ 'ಭಾಯ್ ನಿನಗೆ ನಿನ್ನ ಜೀವನದ ಮೇಲೆ ಜಿಗುಪ್ಸೆ ಹುಟ್ಟಿಕೊಂಡಿದೆ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾನೆ. ಅಂದಹಾಗೆ, ಈ ಅಪಾಯಕಾರಿ ವೀಡಿಯೊಗೆ ಇದುವರೆಗೆ ಸಾವಿರಾರು ಲೈಕ್‌ಗಳು ಬಂದಿವೆ. ಅಲ್ಲದೆ ಈ ವಿಡಿಯೋವನ್ನು ಸಾವಿರಾರು ಬಾರಿ ಶೇರ್ ಮಾಡಲಾಗಿದ್ದು, ಕೋಟ್ಯಾಂತರ ವೀಕ್ಷಣೆಗಳು ಬಂದಿವೆ.  ವೈರಲ್ ಆಗುತ್ತಿರುವ ಈ ಅಪಾಯಕಾರಿ ವೀಡಿಯೊವನ್ನು '20te20te' ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ. ನೀವು ಈ ವೀಡಿಯೊವನ್ನು ಹೇಗೆ ಇಷ್ಟಪಟ್ಟಿದ್ದೀರಿ, ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.