Leopard Viral Video: ಯುವಕನೊಬ್ಬ ತೋಟಕ್ಕೆ ನುಗ್ಗಿದ ಚಿರತೆ ಬಾಲ ಹಿಡಿದು ಎಳೆದಾಡಿ ಬೋನಿಗೆ ಎಸದ ರೋಮಾಂಚನಕಾರಿ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ರಂಗಾಪುರದಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ತಿಪಟೂರು ತಾಲೂಕಿನ ರಂಗಾಪುರ ಭಾಗದಲ್ಲಿ ಕಳೆದ ಹಲವು ತಿಂಗಳುಗಳಿಂದ ಕಾಣಿಸಿಕೊಂಡು ಸ್ಥಳಿಯರಲ್ಲಿ ಭಯ ಮೂಡಿಸಿದ್ದ 5 ವರ್ಷದ ಗಂಡು ಚಿರತೆಯ ಬಾಲವಿಡಿದು ಬೋನಿಗೆ ಎಳೆದು ಹಾಕಿದ್ದ ಗ್ರಾಮದ ಆನಂದ್ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. 


ಇದನ್ನೂ ಓದಿ- ಬಾಲಿವುಡ್ ಹಾಡಿಗೆ ಪಾಕ್ ನಟಿಯ ಚಿಂದಿ ಡ್ಯಾನ್ಸ್ ವಿಡಿಯೋ ವೈರಲ್...


ಪುರಲೇಹಳ್ಳಿ ರಸ್ತೆಯ ಕುಮಾರ್ ಎಂಬುವರ ತೋಟದಲ್ಲಿ ಸೋಮವಾರ (ಜನವರಿ 06) ಬೆಳಗ್ಗೆ ಕಾಣಿಸಿಕೊಂಡು ನಿತ್ರಾಣಗೊಂಡಿದ್ದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ದಂಡು, ದಾಳಿಯೊಂದಿಗೆ ಸಕಲ ಸಲಕರಣೆಯೊಂದಿಗೆ ಬಂದಿದ್ದರೂ ಅದನ್ನು ಹಿಡಿಯಲಾಗದೆ ಕೈಚೆಲ್ಲಿದ್ದರು. ತಕ್ಷಣ ಕೈಗೆ ಸಿಕ್ಕಿದ ಚಿರತೆಯನ್ನು ಬಲೆ ಬೀಸಿ ಹಿಡಿಯಲಾರದೆ ಕೈಬಿಟ್ಟ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳ ಕಾರ್ಯವೈಖರಿಗೆ ಸಿಟ್ಟಾದ ಸ್ಥಳಿಯರೇ ಗುಂಪುಕಟ್ಟಿಕೊಂಡು ಚಿರತೆಯ ಹಿಂದೋಡಿದರು. 


ನಿತ್ರಾಣಗೊಂಡಿದ್ದ ಚಿರತೆ ಎಂದಿನ ವೇಗದಲ್ಲಿ ಓಡಲಾರದೆ ನಿಧಾನವಾಗಿ ಹೋಗುತ್ತಿದ್ದರಿಂದ ಯುವಕರೇ ಹಿಡಿದು ಬೋನಿಗಟ್ಟಲು ಸಾಧ್ಯವಾಗಿದೆ. ಚಿರತೆಯನ್ನು ಹಿಡಿಯುವ ಪಣದಿಂದ ಹಿಮ್ಮೆಟ್ಟಿಸುತ್ತಿದ್ದ ಸ್ಥಳಿಯ ಯುವಕರ ಗುಂಪಿನಲ್ಲಿದ್ದ ಆನಂದ್ ಎಂಬುವವರು ಧೈರ್ಯದಿಂದ ಚಿರತೆಯ ಬಾಲವನ್ನು ಹಿಡಿದು ಎಳೆದು ಚಿರತೆ ಮುಂದೆ ಹೋಗದಂತೆ ತಡೆದಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಸಿಬ್ಬಂದಿ ಬಲೆಯನ್ನು ಬೀಸಿ ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದರು.


ಬಾಲಿವುಡ್ ಹಾಡಿಗೆ ಪಾಕ್ ನಟಿಯ ಚಿಂದಿ ಡ್ಯಾನ್ಸ್ ವಿಡಿಯೋ ವೈರಲ್...


ಇನ್ನೂ ಚಿರತೆಯನ್ನು ನಾಯಿಯಂತೆ ಹಿಡಿದ ಯುವಕನ ಗುಂಡಿಗೆಗೆ ಸ್ಥಳೀಯರು ಸಲಾಂ ಎನ್ನುತ್ತಿದ್ದು ಸದ್ಯ ವಿಡಿಯೋ ಸಖತ್ ವೈರಲ್ ಆಗುತ್ತಿದೆ. 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.