ಮಾಲಿಯಲ್ಲಿ ಭಯೋತ್ಪಾದಕರ ಅಟ್ಟಹಾಸ, 10 ಜನರ ಸಾವು
ಈ ದಾಳಿಯು ಮೈನಕಾದಿಂದ 45 ಕಿಲೋಮೀಟರ್ ದೂರದಲ್ಲಿರು ಜಿಹಾದಿ ಹಿಂಸಾಚಾರದಿಂದ ತೀವ್ರ ಪೀಡಿತ ಪ್ರದೇಶದಲ್ಲಿ ಸಂಭವಿಸಿದೆ.
ಬಮಾಕೊ: ಈಶಾನ್ಯ ಮಾಲಿಯಲ್ಲಿ ಉಗ್ರಗಾಮಿಗಳು ನಡೆಸಿದ ದಾಳಿಯಲ್ಲಿ ಕನಿಷ್ಠ 10 ಜನರು ಮೃತಪಟ್ಟಿದ್ದಾರೆ. ಮೈನಕಾದಿಂದ 45 ಕಿಲೋಮೀಟರ್ ದೂರದಲ್ಲಿರು ಜಿಹಾದಿ ಹಿಂಸಾಚಾರದಿಂದ ತೀವ್ರ ಪೀಡಿತ ಪ್ರದೇಶದಲ್ಲಿ ಬುಧವಾರ ಈ ದಾಳಿಯು ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2018 ರಲ್ಲಿ ಜಿಹಾದಿಗಳ ಹಿಂಸಾಚಾರದಲ್ಲಿ ನೂರಾರು ಜನರು ಮೃತಪಟ್ಟಿದ್ದರು.
"ಮೂವ್ಮೆಂಟ್ ಆಫ್ ದಿ ಸಾಲ್ವೇಶನ್ ಆಫ್ ಅಜ್ವಾದ್ (ಎಂಎಸ್ಎ) ಹೋರಾಟಗಾರರು ಮತ್ತು ನಾಗರಿಕರನ್ನು ಒಳಗೊಂಡಂತೆ ಮಂಗಳವಾರ ಸಶಸ್ತ್ರಧಾರಿಗಳು ಜನರ ಮೇಲೆ ನಡೆಸಿದ ಆಕ್ರಮಣದಲ್ಲಿ ಕನಿಷ್ಠ ಹತ್ತು ಮಂದಿ ಮೃತಪಟ್ಟಿದ್ದಾರೆ" ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
File Photo
ಒಂದು ಹೇಳಿಕೆಯಲ್ಲಿ ಎಂಎಸ್ಎ ಈ ದಾಳಿಯನ್ನು ಖಂಡಿಸಿದೆ. ಅವರು "ಘರ್ಷಣೆಯ ಕೊನೆಯಲ್ಲಿ, ಹಿರಿಯರನ್ನೂ ಒಳಗೊಂಡಂತೆ ಸುಮಾರು 20 ಜನರನ್ನು ದಾಳಿಕೋರರು ಆಕ್ರಮಣ ಮಾಡಿದರು" ಎಂದು ಅವರು ಹೇಳಿದರು. ಸ್ಥಳೀಯ ಚುನಾಯಿತ ಪ್ರತಿನಿಧಿ ಅವರು ದಾಳಿಕೋರರು ಮೋಟಾರುಬೈಕಿನಲ್ಲಿ ಬಂದಿದ್ದಾರೆ ಮತ್ತು ಅವರು MSA ಯ ಪೋಸ್ಟ್ ಅನ್ನು ಆಕ್ರಮಿಸಿದ್ದಾರೆಂದು ಹೇಳಿದರು. ಈ ದಾಳಿಯಲ್ಲಿ ಕನಿಷ್ಠ ಹತ್ತು ಜನರು ಮೃತಪಟ್ಟಿದ್ದಾರೆ.