ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿ 15 ತಾಲಿಬಾನ್ ಉಗ್ರರ ಹತ್ಯೆ
ನಿಶ್ ಜಿಲ್ಲೆಯ ಖಿಂಜಾಕ್ ಪ್ರದೇಶದಲ್ಲಿ ಶುಕ್ರವಾರ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಹೇಳಲಾಗಿದೆ.
ಕಾಬೂಲ್ [ಅಫ್ಘಾನಿಸ್ತಾನ]: ದೇಶದ ದಕ್ಷಿಣ ಪ್ರಾಂತ್ಯದ ಕಂದಹಾರ್‌ನಲ್ಲಿ ಅಫಘಾನ್ ಪಡೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 15 ತಾಲಿಬಾನ್ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಈ ಸಂದರ್ಭದಲ್ಲಿ ಇನ್ನಿಬ್ಬರು ಭಯೋತ್ಪಾದಕರನ್ನು ಬಂಧಿಸಲಾಗಿದೆ ಎಂದು ವಿಶೇಷ ಪಡೆ ಕಮಾಂಡರ್ ಶನಿವಾರ ತಿಳಿಸಿದ್ದಾರೆ.
ನಿಶ್ ಜಿಲ್ಲೆಯ ಖಿಂಜಾಕ್ ಪ್ರದೇಶದಲ್ಲಿ ಶುಕ್ರವಾರ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಅಫಘಾನ್ ರಾಷ್ಟ್ರೀಯ ಸೇನಾ ವಿಶೇಷ ಕಾರ್ಯಾಚರಣೆ ದಳ ತಿಳಿಸಿರುವುದಾಗಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಆದರೆ ಈ ವರದಿಯ ಬಗ್ಗೆ ತಾಲಿಬಾನ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
(With ANI Input)