ಅಭ್ಯಾಸದ ವೇಳೆ ಹೃದಯಾಘಾತ: ಕುಸಿದು ಬಿದ್ದು 17 ವರ್ಷದ ಬ್ಯಾಸ್ಕೆಟ್‌ಬಾಲ್ ಆಟಗಾರ ಸಾವು!
Basketball Player Dies: ಅಲಬಾಮಾದ ಪಿನ್ಸನ್ ವ್ಯಾಲಿ ಹೈಸ್ಕೂಲ್‌ನ ಕ್ಯಾಲೆಬ್ ವೈಟ್ ತನ್ನ ಸಹ ಆಟಗಾರರೊಂದಿಗೆ ಅಭ್ಯಾಸ ನಡೆಸುತ್ತಿದ್ದಾಗ ಹೃದಯಸ್ತಂಭನವಾಗಿ ನೆಲದ ಮೇಲೆ ಕುಸಿದುಬಿದ್ದರು ಎಂದು ವರದಿಯಾಗಿದೆ.
ನವದೆಹಲಿ: ಅಭ್ಯಾಸದ ವೇಳೆ ಹೃದಯಾಘಾತವಾಗಿ ಅಂಕಣದಲ್ಲಿಯೇ ಕುಸಿದುಬಿದ್ದು 17 ವರ್ಷದ ಬಾಸ್ಕೆಟ್‍ಬಾಲ್ ಆಟಗಾರ ಸಾವನ್ನಪ್ಪಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಅಲಬಾಮಾದ ಪಿನ್ಸನ್ ವ್ಯಾಲಿ ಹೈಸ್ಕೂಲ್‌ನ ಕ್ಯಾಲೆಬ್ ವೈಟ್ ತನ್ನ ಸಹ ಆಟಗಾರರೊಂದಿಗೆ ಅಭ್ಯಾಸ ನಡೆಸುತ್ತಿದ್ದಾಗ ಹೃದಯಸ್ತಂಭನವಾಗಿ ನೆಲದ ಮೇಲೆ ಕುಸಿದುಬಿದ್ದರು ಎಂದು ವರದಿಯಾಗಿದೆ.
ಹಠಾತ್ ಕುಸಿದುಬಿದ್ದ ಕ್ಯಾಲೆಬ್ ವೈಟ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಅವನನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಕ್ಯಾಲೆಬ್ ಅವರ ತಾತನಾಗಿರುವ ಜಾರ್ಜ್ ವರ್ನಾಡೋ ಜೂನಿಯರ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು, ದುಃಖ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪಾಕ್ ಪ್ರಧಾನಿ ಹುದ್ದೆಯೇ ಮುಳ್ಳಿನ ಕಿರೀಟ.. ಇಲ್ಲಿಯವರೆಗೆ ಜೈಲಿಗೆ ಹೋಗಿ ಬಂದ ಪ್ರಧಾನಿಗಳ ಪಟ್ಟಿ ಇಲ್ಲಿದೆ..!
‘17ನೇ ವಯಸ್ಸಿನಲ್ಲಿ ನನ್ನ ಮೊಮ್ಮಗ ಕ್ಯಾಲೆಬ್ ವೈಟ್ ನಿಧನ ಹೊಂದಿದರು! ನನ್ನ ಮೊಮ್ಮಗ ಅತ್ಯಂತ ಗೌರವಾನ್ವಿತ ವಿದ್ಯಾರ್ಥಿಯಾಗಿದ್ದ. ಉತ್ತಮ ಬುದ್ಧಿಶಕ್ತಿ, ಅತ್ಯುತ್ತಮ ರೋಲ್ ಮಾಡೆಲ್, ಅಸಾಧಾರಣ ಬ್ಯಾಸ್ಕೆಟ್‌ಬಾಲ್ ಆಟಗಾರನಾಗಿದ್ದ. ನಮ್ಮ ಇಡೀ ಕುಟುಂಬವೇ ಅವನ ಭವಿಷ್ಯದ ಬಗ್ಗೆ ದೊಡ್ಡ ಆಸೆಯನ್ನು ಇಟ್ಟುಕೊಂಡಿತ್ತು. ಮುಂಬರುವ ದಿನಗಳಲ್ಲಿ ಕೆಲವು ಉತ್ತಮ ಟೂರ್ನಿಗಳಲ್ಲಿ ಅವನು ಭಾಗವಹಿಸಬೇಕಿತ್ತು. D-1 ಶಾಲೆಯಿಂದ ಹಿಡಿದು ಬಹುಶಃ NBAಗಾಗಿ ಆತ ಆಡುತ್ತಾನೆಂದು ನಾವು ನಿರೀಕ್ಷಿಸಿದ್ದೆವು. ಆದರೆ… ನಮ್ಮ ಆಸೆ ಈಡೇರಲಿಲ್ಲ’ವೆಂದು ಬೇಸರ ಹಂಚಿಕೊಂಡಿದ್ದಾರೆ.
‘ನೀವು ಗಮನಿಸಿ, ಯಾವ ಸಮಯದಲ್ಲಿ ಏನು ಆಗಬೇಕೋ ಅದು ಆಗೇ ಆಗುತ್ತದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಏಕೆಂದರೆ ನಾವೆಲ್ಲರೂ ದೇವರೊಂದಿಗೆ ಅಪಾಯಿಂಟ್‍ಮೆಂಟ್ ಹೊಂದಿದ್ದೇವೆ. ನೀವು ಮತ್ತೆ ಸಮಯವನ್ನು ಮರುಹೊಂದಿಸಲು ಸಾಧ್ಯವಿಲ್ಲ. ತನ್ನ 17 ವರ್ಷದ ಮೊಮ್ಮಗನಿಗೆ ಹೃದಯ ಸ್ತಂಭನವಾಗಿದೆ. ಆದರೆ ಜೆಫರ್ಸನ್ ಕೌಂಟಿ ಕರೋನರ್ ಇನ್ನೂ ತೀರ್ಪನ್ನು ನಿರ್ಧರಿಸಿಲ್ಲವೆಂದು ಅವರು ತಿಳಿಸಿದ್ದಾರೆ.
ಕೊರೊನಾದಿಂದ ಬಳಲಿ ಬೆಂಂಡಾಗಿದ್ದ ಜನರಿಗೆ ಮತ್ತೊಂದು ಶಾಕಿಂಗ್ ಸುದ್ದಿ..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.