ನವದೆಹಲಿ: ಸುಡಾನ್‌ನ ರಾಜಧಾನಿ ಖಾರ್ಟೌಮ್‌ನ ಸೆರಾಮಿಕ್ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸಾವನ್ನಪ್ಪಿದವರಲ್ಲಿ18 ಭಾರತೀಯರು  ಸೇರಿದ್ದಾರೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.


COMMERCIAL BREAK
SCROLL TO CONTINUE READING

ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಟ್ವೀಟ್ ನಲ್ಲಿ, 'ಭಾರತೀಯ ರಾಯಭಾರ ಕಚೇರಿಯ ಪ್ರತಿನಿಧಿ ಅಪಘಾತದ ಸ್ಥಳಕ್ಕೆ ಹೋಗಿದ್ದಾರೆ. ಸುಡಾನ್‌ನ ರಾಜಧಾನಿ ಖಾರ್ಟೂಮ್‌ನ ಬಹ್ರಿ ಪ್ರದೇಶದ ಸಿರಾಮಿಕ್ ಕಾರ್ಖಾನೆಯ ಸ್ಫೋಟದ ದುರಂತ ಸುದ್ದಿಯನ್ನು ಇದೀಗ ಸ್ವೀಕರಿಸಿದ್ದೀರಿ. ಕೆಲವು ಭಾರತೀಯ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಇತರರು ಗಂಭೀರವಾಗಿ ಗಾಯಗೊಂಡಿದ್ದಾರೆ 'ಎಂದು ಅವರು ಟ್ವೀಟ್ ಮಾಡಿದ್ದಾರೆ.



'ರಾಯಭಾರ ಕಚೇರಿಯ ಪ್ರತಿನಿಧಿ ಸ್ಥಳಕ್ಕೆ ಧಾವಿಸಿದ್ದಾರೆ. 24 ಗಂಟೆಗಳ ತುರ್ತು ಹಾಟ್‌ಲೈನ್ + 249-921917471 ಸ್ಥಾಪಿಸಾಗಿದೆ. ರಾಯಭಾರ ಕಚೇರಿಯು ಸಾಮಾಜಿಕ ಮಾಧ್ಯಮದಲ್ಲಿ ಘಟನೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡುತ್ತಿದೆ 'ಎಂದು ಅವರು ಹೇಳಿದ್ದಾರೆ. 


ಸ್ಪೋಟ ಸಂಭವಿಸಿದ ಕಾರ್ಖಾನೆಯಲ್ಲಿ ಭಾರತದಿಂದ 50 ಕ್ಕೂ ಹೆಚ್ಚು ಉದ್ಯೋಗಿಗಳಿದ್ದರು ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ. ಉತ್ತರ ಖಾರ್ಟೌಮ್‌ನ ಕೈಗಾರಿಕಾ ವಲಯದ ಟೈಲ್ ಉತ್ಪಾದನಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಕಪ್ಪು ಹೊಗೆಯ ದಪ್ಪ ಆಕಾಶದತ್ತ್ ಆವರಿಸಿತ್ತು ಎಂದು ಅಲ್ಲಿನ ಪ್ರತ್ಯಕ್ಷದಾರಿಗಳು ಹೇಳಿದ್ದಾರೆ.  


'ಸ್ಫೋಟವು ಜೋರಾಗಿತ್ತು. ಕಾರ್ಖಾನೆಯ ಕಾಂಪೌಂಡ್‌ನಲ್ಲಿ ನಿಲ್ಲಿಸಿದ್ದ ಹಲವಾರು ಕಾರುಗಳಿಗೂ ಬೆಂಕಿ ಕಾಣಿಸಿಕೊಂಡಿದೆ 'ಎಂದು ಪಕ್ಕದ ಕಾರ್ಖಾನೆಯ ಉದ್ಯೋಗಿಯೊಬ್ಬರು ಘಟನಾ ಸ್ಥಳದಲ್ಲಿ ಎಎಫ್‌ಪಿಗೆ ತಿಳಿಸಿದರು."ಕೈಗಾರಿಕಾ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದರಿಂದಾಗಿ 23 ಜನರು ಸಾವನ್ನಪ್ಪಿದ್ದಾರೆ ಮತ್ತು 130 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ" ಎಂದು ಸುಡಾನ್ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.


ಈಗ ಆಸ್ಪತ್ರೆಗೆ ದಾಖಲಾದ, ಕಾಣೆಯಾದ ಅಥವಾ ದುರಂತದಿಂದ ಬದುಕುಳಿದ ಭಾರತೀಯರ ವಿವರವಾದ ಪಟ್ಟಿಯನ್ನು ಭಾರತೀಯ ರಾಯಭಾರ ಕಚೇರಿ ಬುಧವಾರ ಬಿಡುಗಡೆ ಮಾಡಿದೆ. ಅದರ ಮಾಹಿತಿಯ ಪ್ರಕಾರ, 7 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.  \