ಪೋರ್ಚುಗಲ್ನಲ್ಲಿ ಭೀಕರ ರಸ್ತೆ ಅಪಘಾತ; ಟೂರಿಸ್ಟ್ ಬಸ್ ಪಲ್ಟಿ, 28 ಜನ ಮೃತ
ಡೈರಿಯೊ ಡಿ ನೊಟಿಸಿಯಸ್ ಪತ್ರಿಕೆಯ ಪ್ರಕಾರ, 11 ಪುರುಷರು ಮತ್ತು 17 ಮಹಿಳೆಯರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಜರ್ಮನ್ ನಾಗರಿಕರಾಗಿದ್ದಾರೆ ಎಂದು ಪತ್ರಿಕೆಯಲ್ಲಿ ವರದಿಯಾಗಿದೆ.
ಲಿಸ್ಬನ್: ಪೋರ್ಚುಗಲ್‌ನ ಮದೀರ ದ್ವೀಪದಲ್ಲಿ ಪ್ರವಾಸಿ ಬಸ್ ಪಲ್ಟಿ ಹೊಡೆದ ಪರಿಣಾಮ 28 ಮಂದಿ ಮೃತ ಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪೋರ್ಚುಗಲ್‌ನ ಅಧಿಕೃತ ರೇಡಿಯೋ ಮತ್ತು ಟೆಲಿವಿಷನ್ ಪ್ರಕಾರ, ಬುಧವಾರ ರಾತ್ರಿ ಮದೀರ ದ್ವೀಪದಲ್ಲಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಡೈರಿಯೊ ಡಿ ನೊಟಿಸಿಯಸ್ ಪತ್ರಿಕೆಯ ಪ್ರಕಾರ, 11 ಪುರುಷರು ಮತ್ತು 17 ಮಹಿಳೆಯರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಜರ್ಮನ್ ನಾಗರಿಕರಾಗಿದ್ದಾರೆ. ಈ ಅಪಘಾತದಲ್ಲಿ ಬಸ್ ಚಾಲಕ ಮತ್ತು ಗೈಡ್(ಮಾರ್ಗದರ್ಶಿ)ಗೆ ಗಾಯಗಳಾಗಿವೆ ಎಂದು ಪತ್ರಿಕೆಯಲ್ಲಿ ವರದಿಯಾಗಿದೆ.
ಪ್ರವಾಸಿ ಬಸ್ ಅಪಘಾತದ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸ್ ತಂಡವು ಸ್ಥಳಕ್ಕೆ ಆಗಮಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿತು. ಆದಾಗ್ಯೂ, ಈ ಅಪಘಾತಕ್ಕೆ ನಿಖರ ಕಾರಣಗಳು ತಿಳಿದುಬಂದಿಲ್ಲ.