ನವದೆಹಲಿ: ಕೊರೊನಾ ವೈರಸ್ ಮಹಾಮಾರಿಯ ಕಾರಣ ಏಪ್ರಿಲ್ ನಿಂದ ಜೂನ್ ಈ ಮೂರು ತಿಂಗಳ ಕಾಲಾವಧಿಯಲ್ಲಿ ಸುಮಾರು 30.5 ಕೋಟಿ ಜನರು ತಮ್ಮ ಫುಲ್ ಟೈಮ್ ಜಾಬ್ ಕಳೆದುಕೊಳ್ಳಲಿದ್ದಾರೆ ಎಂದು ವಿಶ್ವ ಸಂಸ್ಥೆಯ ಕಾರ್ಮಿಕ ಘಟಕವಾಗಿರುವ ಇಂಟರ್ನ್ಯಾಷನಲ್ ಲೇಬರ್ ಆರ್ಗನೈಜೇಷನ್ ಮತ್ತೊಮ್ಮೆ ಮುನ್ಸೂಚನೆಯನ್ನು ವ್ಯಕ್ತಪಡಿಸಿದೆ. 


COMMERCIAL BREAK
SCROLL TO CONTINUE READING

ಇದಕ್ಕೂ ಮೊದಲು ತನ್ನ ಅನುಮಾನ ವ್ಯಕ್ತಪಡಿಸಿದ್ದ ಐಎಲ್ಓ, ಕೊರೊನಾ ಮಹಾಮಾರಿಯ ಕಾರಣ 2020ನೇ ವರ್ಷದ ಜೂನ್ ತ್ರೈಮಾಸಿಕದಲ್ಲಿ ಪ್ರತಿವಾರ ಸರಾಸರಿ 48 ಗಂಟೆಗಳ ಕಾರ್ಯಾವಧಿಯಂತೆ ಸುಮಾರು 19.5 ಕೋಟಿ ಫುಲ್ ಟೈಮ್ ನೌಕರರು ತಮ್ಮ ಕೆಲಸವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿತ್ತು.


ಕೊರೊನಾ ಸಾಂಕ್ರಾಮಿಕ ರೋಗವನ್ನು ತೊಡೆದು ಹಾಕಲು ವಿಶ್ವಾದ್ಯಂತ ಲಾಕ್ ಡೌನ್ ಅವಧಿಯನ್ನು ವಿಸ್ತರಿಸರಿಸಲಾಗಿರುವ ಕಾರಣ ತಾನು ಈ ಮೊದಲು ವ್ಯಕ್ತಪಡಿಸಿದ್ದ ಅಂದಾಜನ್ನು ಮರುಪರಿಶೀಲಿಸಬೇಕಾಗಿ ಬಂತು ಎಂದು ಐಎಲ್ಓ ಹೇಳಿದೆ.


ಕೊರೊನಾ ಮಹಾಮಾರಿಯ ಕಾರಣ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಸುಮಾರು 1.6 ಶತಕೋಟಿ ಕಾರ್ಮಿಕರ ಜೀವನೋಪಾಯ ಅಪಾಯಕ್ಕೆ ಸಿಲುಕಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.


ಕೊರೊನಾ ವೈರಸ್ ಕಾರಣ ವಿಶ್ವಾದ್ಯಂತ 32.19 ಲಕ್ಷ ಜನರು ಸೋಂಕಿನಿಂದ ಬಳಲುತ್ತಿದ್ದು, ಸುಮಾರು 2.28 ಲಕ್ಷ ಜನರು ಈ ಮಹಾಮಾರಿಗೆ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೊಂದೆಡೆ ಸುಮಾರು 1 ಮಿಲಿಯನ್ ಗೂ ಅಧಿಕ ಜನರು ಈ ಮಾಹಾಮಾರಿಯಿಂದ ಚೇತರಿಸಿಕೊಂಡಿದ್ದಾರೆ.


ಕರೋನವೈರಸ್‌ನಿಂದಾಗಿ ವಿಶ್ವದಾದ್ಯಂತ 32.19 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದರೆ, ಅದರಿಂದ ಸಾವನ್ನಪ್ಪಿದವರ ಸಂಖ್ಯೆ 2.28 ಲಕ್ಷಕ್ಕೆ ಏರಿದೆ. ಇದುವರೆಗೆ ವಿಶ್ವದಾದ್ಯಂತ 1 ಮಿಲಿಯನ್‌ಗಿಂತಲೂ ಹೆಚ್ಚು ಜನರು ಕರೋನವೈರಸ್ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಮತ್ತು ಅವರ ಮನೆಗಳಿಗೆ ಹೋಗಿದ್ದಾರೆ ಎಂಬುದು ಸಮಾಧಾನಕರ ಸಂಗತಿಯಾಗಿದೆ.


ವಿಶ್ವದಲ್ಲಿ ಅತಿ ಹೆಚ್ಚು ಕೊರೊನಾ ವೈರಲ್ ಪ್ರಕರಣಗಳು ಪತ್ತೆಯಾದ ದೇಶದ ಕುರಿತು ಹೇಳುವುದಾದರೆ, ಅಮೆರಿಕಾದಲ್ಲಿ ಇದುವರೆಗೆ ಸುಮಾರು 10.64 ಲಕ್ಷ ಜನರು ಕೊರೊನಾ ವೈರಸ್ ಸೋಂಕಿಗೆ ಗುರಿಯಾಗಿದ್ದಾರೆ, 61, 656 ಜನರು ಈ ಮಾರಕ ವೈರಸ್ ದಾಳಿಗೆ ಬಲಿಯಾಗಿದ್ದಾರೆ.


ಭಾರತದಲ್ಲಿ ಕೊರೊನಾ ವೈರಸ್ ಪ್ರಕೋಪದ ಕುರಿತು ಹೇಳುವುದಾದರೆ, ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಿಸಿರುವ ಅಂಕಿ-ಅಂಶಗಳ ಪ್ರಕಾರ, ಇದುವರೆಗೆ ಸುಮಾರು 31787 ಜನರು ಈ ವೈರಸ್ ನ ಸೋಂಕಿಗೆ ಗುರಿಯಾಗಿದ್ದಾರೆ, 7797 ಮಂದಿ ಈ ವೈರಸ್ ನ ಕಾಯಿಲೆಯಿಂದ ಗುಣಮುಖರಾಗಿದ್ದಾರೆ.