ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆ(ಯುಎನ್‌ಜಿಎ)ಯಲ್ಲಿ 4-7 ರ ನಂಬರ್ ಗೇಮ್ ನಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಯೋಜನೆಗಳು ಬುಡಮೇಲಾಗಿದೆ.


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಶನಿವಾರ 4 ನೇ ಸ್ಥಾನದಲ್ಲಿ ಮತ್ತು ಇಮ್ರಾನ್ ಖಾನ್ 7 ನೇ ಸ್ಥಾನದಲ್ಲಿ ಮಾತನಾಡಬೇಕಿತ್ತು. ಪಿಎಂ ಮೋದಿ ತಮ್ಮ ಭಾಷಣವನ್ನು ವಿಶ್ವ ಶಾಂತಿ ಮತ್ತು ಪರಿಸರದ ಬಗ್ಗೆ ಕೇಂದ್ರೀಕರಿಸಿದರು. ಪ್ರಧಾನಿ ತಮ್ಮ ಭಾಷಣದಲ್ಲಿ ಶಾಂತಿ ಸಂಕೇತವಾಗಿರುವ ಭಗವಾನ್ ಬುದ್ಧ ಮತ್ತು ಮಹಾತ್ಮ ಗಾಂಧಿಯವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಇದೇ ವೇಳೆ ಭಯೋತ್ಪಾದನೆ ವಿರುದ್ಧ ಎಲ್ಲಾ ದೇಶಗಳು ಒಗ್ಗೂಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಇಡೀ ಜಗತ್ತಿಗೆ ಕರೆ ನೀಡಿದರು.


ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾಷಣದ ವೇಳೆ ಯುಎನ್‌ಜಿಎನಲ್ಲಿ ಮನೆ ಮಾಡಿದ್ದ ಚಪ್ಪಾಳೆ ಸದ್ದು ಒಂದರ್ಥದಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ತಲ್ಲಣಗೊಳಿಸುವಂತಿತ್ತು. ಇದರ ನಂತರ, 7 ನೇ ಸ್ಥಾನದಲ್ಲಿ ಭಾಶಂತ ಪ್ರಾರಂಭಿಸಿದ ಪಾಕಿಸ್ತಾನ ಪ್ರಧಾಮಂತ್ರಿ ಇಮ್ರಾನ್ ಖಾನ್ತ ಮ್ಮ ಭಾಷಣದ ಹೆಚ್ಚಿನ ಭಾಗವನ್ನು ಕಾಶ್ಮೀರದ ವಿಷಯದ ಮೇಲೆ ಕೇಂದ್ರೀಕರಿಸಿದರು. ಇಮ್ರಾನ್ ಖಾನ್ ತಮ್ಮ ಭಾಷಣದಲ್ಲಿ ಭಾರತದ ಮೇಲೆ ಅನೇಕ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಭಾರತದ ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ಫ್ಯೂ ತೆಗೆದುಹಾಕಿದಾಗ ರಕ್ತಪಾತವಾಗುತ್ತದೆ ಎಂದು ಅವರು ಎಚ್ಚರಿಸಿದರು.


ಪಿಎಂ ಮೋದಿ ಮತ್ತು ಇಮ್ರಾನ್ ಖಾನ್ ಅವರ ಭಾಷಣಗಳ ಒಂದು ನೋಟ...


ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಏನು ಹೇಳಿದ್ದಾರೆ?
- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಭಾಷಣದ ಆರಂಭದಲ್ಲಿ ರಾಷ್ಟ್ರದ ಪಿತಾಮಹ ಮಹಾತ್ಮ ಗಾಂಧಿಯನ್ನು ಸ್ಮರಿಸುತ್ತಾ, ಸತ್ಯ ಮತ್ತು ಅಹಿಂಸೆಯ ಸಂದೇಶವು ಇಡೀ ಜಗತ್ತಿಗೆ ಇನ್ನೂ ಪ್ರಸ್ತುತವಾಗಿದೆ ಎಂದು ಹೇಳಿದರು.


-ಪಿಎಂ ಮೋದಿ ನಾವು ಆ ದೇಶದ ನಿವಾಸಿಗಳು, ಅವರು ಜಗತ್ತಿಗೆ ಯುದ್ಧವನ್ನು ನೀಡಲಿಲ್ಲ, ಅಂತೆಯೇ ಬುದ್ಧ ನಮಗೆ ಶಾಂತಿಯ ಸಂದೇಶವನ್ನು ನೀಡಿದ್ದಾರೆ. ಯುಎನ್ ಶಾಂತಿಪಾಲನಾ ಪಡೆಯಲ್ಲಿ ಭಾರತ ಹೆಚ್ಚಿನ ಕೊಡುಗೆ ನೀಡಿದೆ ಎಂದು ಹೇಳಿದರು.


- ಇಡೀ ಜಗತ್ತಿಗೆ ಭಯೋತ್ಪಾದನೆಯೊಂದು ಸವಾಲಾಗಿದೆ ಎಂದು ಬಣ್ಣಿಸಿದ ಪ್ರಧಾನಿ ನರೇಂದ್ರ ಮೋದಿ ಅದರ ವಿರುದ್ಧ ವಿಶ್ವವು ಒಗ್ಗೂಡಬೇಕು ಎಂದು ಏಕೀಕೃತ ಆಂದೋಲನಕ್ಕೆ ಕರೆ ನೀಡಿದರು. ಅಷ್ಟೇ ಅಲ್ಲದೆ ವಿಶ್ವ ಶಾಂತಿಗೆ ಭಾರತದ ಕೊಡುಗೆಯನ್ನು ಒತ್ತಿಹೇಳಿದ ಮೋದಿ,  ನಾವು ವಿಶ್ವಕ್ಕೆ 'ಯುದ್ಧವಲ್ಲ ಬುದ್ಧನನ್ನು' ನೀಡಿದ್ದೇವೆ ಎಂದರು.


- ಭಯೋತ್ಪಾದನೆಯ ಹೆಸರಿನಲ್ಲಿ ವಿಂಗಡಿಸಲಾದ ಜಗತ್ತು ವಿಶ್ವಸಂಸ್ಥೆಯು ಹುಟ್ಟಿದ ತತ್ವಗಳನ್ನು ನೋಯಿಸುತ್ತದೆ. ಭಯೋತ್ಪಾದನೆ ವಿರುದ್ಧ ಇಡೀ ಪ್ರಪಂಚದ ಏಕತೆ ಕಡ್ಡಾಯವಾಗಿದೆ ಎಂದು ನಾನು ನಂಬುತ್ತೇನೆ ಎಂದು ಪ್ರಧಾನಿ ಮೋದಿ ತಿಳಿಸಿದರು.


ಇಮ್ರಾನ್ ಖಾನ್ ಏನು ಹೇಳಿದ್ದಾರೆ?


- ತನ್ನ ದೇಶ ಮತ್ತು ಅದರ ಸಮಸ್ಯೆಯನ್ನು ಕಡೆಗಣಿಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತನ್ನ ಗಮನವನ್ನು ಸಂಪೂರ್ಣವಾಗಿ ಕಾಶ್ಮೀರದತ್ತ ತಿರುಗಿಸಿದರು.


- ಭಾರತದ ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ಫ್ಯೂ ತೆಗೆದುಹಾಕಿದಾಗ ರಕ್ತಪಾತವಾಗುತ್ತದೆ ಎಂದು ಎಚ್ಚರಿಸಿದ ಇಮ್ರಾನ್ ಖಾನ್, ಆಗ ಏನಾಗುತ್ತದೆ ಈ ಬಗ್ಗೆ ಯಾರಾದರೂ ಯೋಚಿಸಿದ್ದೀರಾ? ಎಂದು ಪ್ರಶ್ನಿಸಿದರು.


- ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿಕೊಂಡು, "ಜನಾಂಗೀಯ ಶ್ರೇಷ್ಠತೆಯ ಭಾವನೆ ಮತ್ತು ಹೆಮ್ಮೆಯಿಂದಾಗಿ, ಮನುಷ್ಯನು ತಪ್ಪುಗಳನ್ನು ಮಾಡುತ್ತಾನೆ ಮತ್ತು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ" ಎಂದರು.


- 'ಮುಸ್ಲಿಮ್ ಜನಾಂಗೀಯ ಶುದ್ಧೀಕರಣವನ್ನು ಆರ್‌ಎಸ್‌ಎಸ್ ನಂಬುತ್ತದೆ ಮತ್ತು ಪ್ರಧಾನಿ ಮೋದಿ ಆರ್‌ಎಸ್‌ಎಸ್ ನಾಯಕ' ಎಂದು ಅವರು ಹೇಳಿದರು.