ಅಡೆನ್: ಗುರುವಾರ ಅಡೆನ್‌ನಲ್ಲಿ ಸಂಭವಿಸಿದ ಅವಳಿ ಬಾಂಬ್ ದಾಳಿಯಲ್ಲಿ 40 ಜನರು ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಮೊದಲ ದಾಳಿಯ ಹೊಣೆಯನ್ನು ಇರಾನ್ ಬೆಂಬಲಿತ ಹೌತಿಸ್ ಒಪ್ಪಿಕೊಂಡಿದ್ದು, ನಗರದ ಮಿಲಿಟರಿ ಶಿಬಿರದಲ್ಲಿ ನಡೆಯುತ್ತಿದ್ದ ಮೆರವಣಿಗೆಯನ್ನು ಗುರಿಯಾಗಿಸಿ, ಸ್ಫೋಟಕ ಮತ್ತು ಕ್ಷಿಪಣಿಯನ್ನು ಹೊತ್ತ ಡ್ರೋನ್ ಅನ್ನು ಉಡಾಯಿಸುವ ಮೂಲಕ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಬೆಂಬಲ ಪಡೆಯ ಕಮಾಂಡರ್ ಬ್ರಿಗೇಡಿಯರ್ ಮುನೀರ್ ಅಲ್ ಯಾಫಿ ಮೃತಪಟ್ಟಿದ್ದಾರೆ ಎಂದು ಅಲ್-ಅರೇಬಿಯಾ ಉಲ್ಲೇಖಿಸಿ ಗಲ್ಫ್ ನ್ಯೂಸ್ ವರದಿ ಮಾಡಿದೆ. 


ಎರಡನೇ ದಾಳಿಯಲ್ಲಿ ಅಡೆನ್ ಜಿಲ್ಲೆಯ ಶೇಖ್ ಒಥ್‌ಮನ್‌ನಲ್ಲಿರುವ ಪೊಲೀಸ್ ಠಾಣೆಯನ್ನು ಟಾರ್ಗೆಟ್ ಮಾಡಿ, ಕಾರ್ ಬಾಂಬ್ ಸ್ಫೋಟಿಸಲಾಗಿದೆ. ಈ ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದಾರೆ ಎಂದು ಅಲ್-ಅರೇಬಿಯಾ ಟಿವಿ ತಿಳಿಸಿದೆ. ಆದರೆ ಈ ದಾಳಿಯ ಹೊಣೆಯನ್ನು ಯಾವುದೇ ಗುಂಪು ವಹಿಸಿಕೊಂಡಿಲ್ಲ.