43 Indians deported from Maldives : ವೀಸಾ ನಿಯಮ ಉಲ್ಲಂಘನೆ ಮಾದಕ ವಸ್ತು ಅಕ್ರಮ ಮಾರಾಟದಂತಹ ಆರೋಪಗಳಿಗೆ ಸಂಬಂಧಿಸಿದ ಆರು ವಿದೇಶಿಯರನ್ನು ಗಡಿಪಾರು ಮಾಡಿದೆ ಅದರಲ್ಲಿ 43 ಮಂದಿ ಭಾರತೀಯರಿದ್ದಾರೆ ಎಂದು ಅಲ್ಲಿಯ ಮಾಧ್ಯಮ ಒಂದು ತನ್ನ ವರದಿಯಲ್ಲಿ ತಿಳಿಸಿದೆ. 


COMMERCIAL BREAK
SCROLL TO CONTINUE READING

ಗಡಿಪಾರು ಮಾಡಿರುವ ದಿನಾಂಕ ಇನ್ನು ಸ್ಪಷ್ಟವಾಗಿಲ್ಲ. ಆದರೆ ಗಡಿಪಾರು ಆದವರಲ್ಲಿ ಹೆಚ್ಚಿನವರು ಬಾಂಗ್ಲಾದೇಶಿಯರು(83), ಭಾರತ(43), ಶ್ರೀಲಂಕಾ(25) ನೇಪಾಳ (10) ಇದ್ದಾರೆ ಎಂದು ಅಧಾದು ಮಾಧ್ಯಮ ವರದಿ ಮಾಡಿದೆ. 


ವಿವಿಧ ಹೆಸರುಗಳಲ್ಲಿ ಅಕ್ರಮವಾಗಿ ನಡೆಸಲಾಗುತ್ತಿರುವ ವ್ಯಾಪಾರಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವ ಉದ್ದೇಶದೊಂದಿಗೆ ಭದ್ರತಾ ಸಚಿವಾಲಯ ಮತ್ತು ಅರ್ಥ ಸಚಿವಾಲಯ ಜಂಟಿಯಾಗಿ ಕೆಲಸ ಮಾಡುತ್ತಿದೆ, ಈ ಕುರಿತು ಮಾಲ್ಡಿವ್ಸ್ ಆಂತರಿಕ ಭದ್ರತಾ ಸಚಿವ ಅಲಿ ಇಹುಸನ್ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.


ಇದನ್ನು ಓದಿ : ಅಬುಧಾಬಿಯಲ್ಲಿ ಸ್ವಾಮಿ ನಾರಾಯಣ ದೇಗುಲವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ


ಸಮರ್ಪಕವಾದ ದಾಖಲೆಗಳು ಮತ್ತು ಪಾಸ್ಪೋರ್ಟ್ ಹೊಂದಿರುವ ಆರೋಪಿಗಳನ್ನು ಗಡಿಪಾರು ಮಾಡಲಾಗಿದೆ ಮತ್ತು ವಿದೇಶಿಗರು ಕ್ರಿಮಿನಲ್ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆಯೇ ಎಂದು ತಿಳಿಯಲು ಹಲವಾರು ಕಾರ್ಯಾಚರಣೆಗಳನ್ನು ನಡೆಸಲಾಗಿದೆ ಎಂದು ಅಲ್ಲಿಯ ವಲಸೆ ನಿಯಂತ್ರಕ ಶಮಾನ್ ವಹೀದ್ ತಿಳಿಸಿದ್ದಾರೆ. 


ಯಾವುದೇ ನಿರ್ದಿಷ್ಟ ವರ್ಗವನ್ನು ಗುರಿ ಮಾಡುವ ಉದ್ದೇಶ ಈ ದಾಳಿಗಳು ನಡೆಸುತ್ತಿಲ್ಲ ಮತ್ತು ಪೊಲೀಸ್ ಇಲಾಖೆಯು ವಾರದಲ್ಲಿ ಎರಡರಿಂದ ಮೂರು ದಿನಗಳ ಕಾಲ ದಾಳಿ ನಡೆಸುತ್ತಿದ್ದು, ಅಕ್ರಮ ವ್ಯವಹಾರಗಳನ್ನು ಪತ್ತೆ ಮಾಡುವ ಉದ್ದೇಶವನ್ನು ಇದು ಹೊಂದಿದೆ ಎಂದು ತಿಳಿಸಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.