ನವದೆಹಲಿ: ಭಾರತ-ಚೀನಾ ಗಡಿಯುದ್ದಕ್ಕೂ 44 ರಸ್ತೆಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರ ಯೋಜನೆಯೊಂದನ್ನು ರೂಪಿಸುತ್ತಿದೆ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಪಿಡಬ್ಲ್ಯೂಡಿ ಬಿಡುಗಡೆ ಮಾಡಿರುವ 2018-19 ರ ವಾರ್ಷಿಕ ವರದಿ ಪ್ರಕಾರ ಭಾರತ-ಚೀನಾ ಗಡಿಯುದ್ದಕ್ಕೂ 44 ರಸ್ತೆಗಳನ್ನು ನಿರ್ಮಿಸಲಾಗುವುದು,ಈ ರಸ್ತೆಗಳು ಪ್ರಮುಖವಾಗಿ ಭಾರತದ ಸೈನ್ಯಕ್ಕೆ ಸುಲಭವಾಗಿ ಪ್ರಯಾಣಿಸಲು ಅನುಕೂಲವಾಗು ನಿಟ್ಟಿನಲ್ಲಿ ನಿರ್ಮಿಸಲಾಗುತ್ತದೆ ಎಂದು ಹೇಳಲಾಗಿದೆ.


ಭಾರತ- ಚೀನಾದ ನಡುವಿರುವ ಗಡಿರೇಖೆ ಜಮ್ಮು ಕಾಶ್ಮೀರದಿಂದ ಹಿಡಿದು ಅರುಣಾಚಲ ಪ್ರದೇಶದ ವರೆಗೆ ಸುಮಾರು 4000 ಕಿಮೀ ದೂರವನ್ನು ಹೊಂದಿದೆ.ಸರ್ಕಾರದ  ಚೀನಾ ದೇಶವು ಭಾರತದ ಗಡಿ ಹತ್ತಿರ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ ಈ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಭಾರತ ಈಗ ಚೀನಾಗೆ ಟಾಂಗ್ ಕೊಡಲು 44 ರಸ್ತೆಗಳನ್ನು ನಿರ್ಮಿಸಲು ಮುಂದಾಗಿದೆ.ಈ ಹಿಂದೆ ಅಗಸ್ಟ್ ತಿಂಗಳಲ್ಲಿ ಚೀನಾ ಮತ್ತು ಭಾರತದ ನಡುವೆ ಒಪ್ಪಂದವಾದ ಹಿನ್ನಲೆಯಲ್ಲಿ ಚೀನಾ ರಸ್ತೆ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಿತ್ತು. 


ಈಗ ಅಂದಾಜಿನ ಪ್ರಕಾರ ಈ 44 ರಸ್ತೆ ನಿರ್ಮಾಣಕ್ಕೆ ಸುಮಾರು 21 ಸಾವಿರ ಕೋಟಿ ರೂಗಳು ಖರ್ಚಾಗಲಿದೆ ಎಂದು ತಿಳಿದುಬಂದಿದೆ. ಈ ಎಲ್ಲ ರಸ್ತೆಗಳು ಜಮ್ಮು ಕಾಶ್ಮೀರ್ ,ಹಿಮಾಚಲ ಪ್ರದೇಶ , ಉತ್ತರಖಂಡ್ ,ಸಿಕ್ಕಿಂ ,ಅರುಣಾಚಲಪ್ರದೇಶ ಒಟ್ಟು ಐದು ರಾಜ್ಯಗಳಲ್ಲಿ ನಿರ್ಮಾಣವಾಗಲಿವೆ ಎನ್ನಲಾಗಿದೆ.