ಪಶ್ಚಿಮ ಆಸ್ಟ್ರೇಲಿಯಾವನ್ನು ತಲ್ಲಣಗೊಳಿಸಿದ 5.5 ತೀವ್ರತೆಯ ಭೂಕಂಪ
ಭಾನುವಾರ ಅದೇ ಪ್ರದೇಶದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದೆ.
ಪರ್ತ್: ಸೋಮವಾರ ಬೆಳಿಗ್ಗೆ ಕೂಡ ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆಯು 5.5 ರಷ್ಟು ದಾಖಲಾಗಿದೆ.
ಭಾನುವಾರ ಅದೇ ಪ್ರದೇಶದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿತ್ತು.
ಸೋಮವಾರ ಸಂಭವಿಸಿರುವ ಭೂಕಂಪವು ಹಿಂದೂ ಮಹಾಸಾಗರದಲ್ಲಿ ಕೇಂದ್ರಬಿಂದುವಿನಲ್ಲಿ 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದ್ದು, ಇದು ಪಶ್ಚಿಮ ಆಸ್ಟ್ರೇಲಿಯಾದ ಡರ್ಬಿಗೆ ಹತ್ತಿರದಲ್ಲಿದೆ.
ಭೂಕಂಪದಿಂದಾಗಿ ಈವರೆಗೂ ಯಾವುದೇ ಹಾನಿಗಳ ಬಗ್ಗೆ ವರದಿಯಾಗಿಲ್ಲ. ಅಲ್ಲದೆ ಯಾವುದೇ ಸುನಾಮಿ ಎಚ್ಚರಿಕೆಗಳನ್ನು ನೀಡಲಾಗಿಲ್ಲ ಎಂದು ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ.