ವಾಷಿಂಗ್ಟನ್: ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಮರುಆಯ್ಕೆ ಶೇ.52 ಅಮೇರಿಕನ್ನರಿಗೆ ಇಷ್ಟವಿಲ್ಲ ಎಂದು ಸಮೀಕ್ಷೆಯೊಂದು ತಿಳಿಸಿದೆ.


COMMERCIAL BREAK
SCROLL TO CONTINUE READING

ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ರಾಸ್‌ಮುಸ್ಸೆನ್‌ರ ಸಮೀಕ್ಷೆಯಲ್ಲಿ ಶೇ. 52 ರಷ್ಟು ಮತದಾರರು ಡೊನಾಲ್ಡ್ ಟ್ರಂಪ್ ಅವರನ್ನು ಮತ್ತೆ ಅಧ್ಯಕ್ಷರನ್ನಾಗಿ ನೋಡಲು ಬಯಸುವುದಿಲ್ಲ. ಅವರು ಟ್ರಂಪ್ ವಿರುದ್ಧ ಮತ ಚಲಾಯಿಸಲು ಯೋಜಿಸಿದ್ದಾರೆ. 2020 ರಲ್ಲಿ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪರ್ಧಿಸಿದರೆ ಸೋಲುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.


ರಾಸ್‌ಮುಸ್ಸೆನ್‌, ದೂರವಾಣಿ ಮತ್ತು ಆನ್‌ಲೈನ್ ಮೂಲಕ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ಇದರ ಪ್ರಕಾರ ಅಮೆರಿಕದ ಶೇಕಡಾ 42 ರಷ್ಟು ಮತದಾರರು ಡೊನಾಲ್ಡ್ ಟ್ರಂಪ್ ಪರವಾಗಿ ಮತ ಚಲಾಯಿಸಬಹುದು. ಆದರೆ ಶೇಕಡಾ 52 ರಷ್ಟು ಜನರು ಟ್ರಂಪ್ ವಿರುದ್ಧ ಮತ ಚಲಾಯಿಸಲು ನಿರ್ಧರಿಸಿದ್ದಾರೆ. ಅದೇ ಸಮಯದಲ್ಲಿ, ಶೇಕಡಾ 6 ರಷ್ಟು ಅಮೆರಿಕನ್ ಮತದಾರರು ಈ ವಿಷಯದಲ್ಲಿ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಲಾಗಿದೆ.


ಮತದಾನ ಏಜೆನ್ಸಿಯ ಪ್ರಕಾರ, ಶೇಕಡಾ 75 ರಷ್ಟು ರಿಪಬ್ಲಿಕನ್ನರು ಡೊನಾಲ್ಡ್ ಟ್ರಂಪ್ ಪರವಾಗಿ ಮತ ಚಲಾಯಿಸಲು ಸಿದ್ಧರಿದ್ದಾರೆ. ಅದೇ ಸಮಯದಲ್ಲಿ, 21 ಪ್ರತಿಶತದಷ್ಟು ರಿಪಬ್ಲಿಕನ್ನರು ಅವರ ವಿರುದ್ಧ ಮತ ಚಲಾಯಿಸಲು ಯೋಜಿಸುತ್ತಿದ್ದಾರೆ.