ಮೆಕ್ಸಿಕೋ: ಮೆಕ್ಸಿಕೊದಲ್ಲಿ ಮಂಗಳವಾರ ಸಂಭವಿಸಿದ 7.1 ತೀವ್ರ ಪ್ರಮಾಣದ ಭೂಕಂಪವು 150 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಈ ಪ್ರಬಲ ಭೂಕಂಪದಲ್ಲಿ 49 ಕಟ್ಟಡಗಳು ಧರೆಗುರುಳಿದೆ. ಕಟ್ಟಡಗಳ ಭಗ್ನಾವಶೇಷಗಳಲ್ಲಿ ಸಿಲುಕಿರುವ ಜನರಿಗಾಗಿ ಶೋಧ ಕಾರ್ಯ ಭರದಿಂದ ಸಾಗಿದ್ದು, ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.


COMMERCIAL BREAK
SCROLL TO CONTINUE READING

ಮಂಗಳವಾರ ಸಂಭವಿಸಿದ ಈ ಭೂಕಂಪದ ಕೇಂದ್ರವು ಪುಯೇಬ್ಲಾ ಪ್ರಾಂತ್ಯದ ಅಟೆನ್ಸಿಯೊಗೆ ಸಮೀಪದಲ್ಲಿದೆ. ಈ ಪ್ರದೇಶವು ಮೆಕ್ಸಿಕೋ ನಗರದಿಂದ 120 ಕಿ.ಮೀ. ದೂರದಲ್ಲಿದೆ. ಅಮೆರಿಕಾದ ಭೂ ವೈಜ್ಞಾನಿಕ ಪರೀಕ್ಷೆಯ ಪ್ರಕಾರ, ಭೂಕಂಪದ ಆಳವು 51 ಕಿಲೋಮೀಟರ್ಗಳಷ್ಟಿತ್ತು ಎಂದು ತಿಳಿದು ಬಂದಿದೆ. 


ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಭೂಕಂಪದ ತೀವ್ರತೆಯು 7.1 ಎಂದು ಅಂದಾಜು ಮಾಡಲ್ಪಟ್ಟಿದೆ. ಆದರೆ ಮೆಕ್ಸಿಕೊದ ಭೂಕಂಪನ ಇನ್ಸ್ಟಿಟ್ಯೂಟ್ ಪ್ರಕಾರ, ಭೂಕಂಪ ತೀವ್ರತೆಯು 6.8 ಆಗಿತ್ತು ಎಂದು ವರದಿ ತಿಳಿಸಿದೆ.


ಸೆ.19, 1985ರಲ್ಲಿ ಕೂಡ ಮೆಕ್ಸಿಕೋದಲ್ಲಿ ಇಂತಹ ಘಟನೆ ಸಂಭವಿಸಿತ್ತು. ನಿನ್ನೆ ಭೂಕಂಪವು ಕರಾಳ ಘಟನೆಯನ್ನು ಮತ್ತೆ ನೆನಪಿಸಿದೆ. 32 ವರ್ಷಗಳ ಹಿಂದೆ ಸಂಭವಿಸಿದ್ದ ಭೂಕಂಪದಲ್ಲಿ 10,000 ಜನ ಮೃತಪಟ್ಟಿದ್ದರು.