ವ್ಯಕ್ತಿಯೊಬ್ಬರು ಬೀದಿ ಶ್ವಾನಗಳೊಂದಿಗೆ (Stray Dogs) ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ (Birthday Celebration) ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಕೊಲಂಬಿಯಾದ ಬುಕಾರಮಂಗಾದ ಬೀದಿಗಳಲ್ಲಿ ಈ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ.


COMMERCIAL BREAK
SCROLL TO CONTINUE READING

@roteloperiodismo ಎಂಬ ಬಳಕೆದಾರರು ಈ ವಿಡಿಯೋವನ್ನು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿರುವ ವ್ಯಕ್ತಿ ಚೋಕೊ ಎಂದು ಹೇಳಲಾಗಿದೆ. 


ವಿಡಿಯೋದಲ್ಲಿ ಚೋಕೊ ತನ್ನ ಸ್ನೇಹಿತರೊಂದಿಗೆ (ನಾಯಿಗಳೊಂದಿಗೆ) ಮೆಟ್ಟಿಲುಗಳ ಮೇಲೆ ಕುಳಿತಿರುವುದನ್ನು ಕಾಣಬಹುದು. ಎರಡೂ ಶ್ವಾನಗಳು ಪಾರ್ಟಿ ಟೋಪಿಗಳನ್ನು ಧರಿಸಿವೆ. ಚೋಕೊ ಬ್ಯಾಗ್‌ನಿಂದ ಹುಟ್ಟುಹಬ್ಬದ ಕೇಕ್ ಅನ್ನು ಹೊರತೆಗೆದು, ಮೇಣದಬತ್ತಿಗಳನ್ನು ಬೆಳಗಿಸಿ ನಂತರ 'ಹ್ಯಾಪಿ ಬರ್ತ್‌ಡೇ' ಹಾಡನ್ನು ಹಾಡುತ್ತಾರೆ. ನಾಯಿಗಳಿಗೆ ಚುಂಬಿಸಿದ ನಂತರ, ಅವರಿಗೆ ತಲಾ ಒಂದು ತುಂಡು ಕೇಕ್ ಅನ್ನು ತಿನ್ನಿಸುತ್ತಾರೆ.


 



 


ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ (Video Viral) ಆಗಿದೆ. ಇದನ್ನು 5.78 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಸುಮಾರು ಮೂರು ನಿಮಿಷಗಳ ಅವಧಿಯ ಕ್ಲಿಪ್ ನೆಟಿಜನ್‌ಗಳ ಹೃದಯವನ್ನು ಕರಗಿಸಿದೆ


ಒಬ್ಬ ಬಳಕೆದಾರ, "ಅಂತಹ ಶುದ್ಧ ಹೃದಯ. ಅವನನ್ನು ಮತ್ತು ಅವನ ನಾಯಿಗಳನ್ನು ಆಶೀರ್ವದಿಸಿ." ಎಂದಿದ್ದಾರೆ. ಮತ್ತೊಬ್ಬರು, "ಮನುಷ್ಯನ ಬೆಸ್ಟ್ ಫ್ರೆಂಡ್... ಮನುಷ್ಯರಿಗಿಂತ ಹೆಚ್ಚು ನಿಷ್ಠಾವಂತ." ಎಂದು ಕಾಮೆಂಟ್ ಮಾಡಿದ್ದಾರೆ.


ಇದನ್ನೂ ಓದಿ: Watch:ಚಲಿಸುತ್ತಿದ್ದ ಪೊಲೀಸ್ ವ್ಯಾನ್ ನಿಂದಲೇ ಕೈದಿ ಪರಾರಿ, ನಿಬ್ಬೆರಗಾಗಿಸುವ ವಿಡಿಯೋ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.