ಅಮೆರಿಕಾದಲ್ಲಿ ಸಿಖ್ ವ್ಯಕ್ತಿ ಕೊಲೆ
ಒಂದು ವರದಿಯ ಪ್ರಕಾರ, ಎಸ್ಸೆಕ್ಸ್ ಕೌಂಟಿ ಪ್ರಾಸಿಕ್ಯೂಟರ್ ಕಚೇರಿಯು ಕೊಲೆಯ ಪ್ರಕರಣವನ್ನು ಹೇಳುತ್ತಿದೆ. ಆದರೆ, ಕೊಲೆ ಹಿಂದಿನ ಉದ್ದೇಶ ತಿಳಿದುಬಂದಿಲ್ಲ.
ನ್ಯೂಯಾರ್ಕ್: ಸಿಖ್ ವ್ಯಕ್ತಿಯೊಬ್ಬ ನ್ಯೂಜೆರ್ಸಿಯ ತನ್ನ ಸ್ವಂತ ಅಂಗಡಿಯಲ್ಲಿ ಸಾವನಪ್ಪಿದ್ದಾನೆ. ಕಳೆದ ಮೂರು ವಾರಗಳಲ್ಲಿ ಸಿಖ್ ಸಮುದಾಯದವರನ್ನು ಗುರಿಪಡಿಸಿರುವ ಮೂರನೇ ಘಟನೆ ಇದಾಗಿದೆ. ತರ್ಲೋಕ್ ಸಿಂಗ್ ಅವರ ಸ್ವಂತ ಅಂಗಡಿಯಲ್ಲೇ ನಿನ್ನೆ ಆತನ ಮೃತದೇಹ ದೊರೆತಿದೆ. ಮೃತ ದೇಹದಲ್ಲಿ ಎದೆಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವ ಗುರುತುಗಳಿವೆ. ABC 7NYನ ವರದಿಯ ಪ್ರಕಾರ, ಆಕ್ಸ್ ಕೌಂಟಿಯ ಪ್ರಾಸಿಕ್ಯೂಟರ್ ಕಚೇರಿಯು ಅದನ್ನು ಕೊಲೆ ಪ್ರಕರಣ ಎಂದು ಕರೆಯುತ್ತಿದೆ. ಆದರೆ, ಕೊಲೆ ಹಿಂದಿನ ಉದ್ದೇಶ ತಿಳಿದುಬಂದಿಲ್ಲ.
ಆಘಾತದಲ್ಲಿ ಸಿಖ್ ಸಮುದಾಯ
ತರ್ಲೋಕ್ ಸಿಂಗ್ ಬಹಳ ಒಳ್ಳೆಯ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಸಿಂಗ್ ಅವರ ಪತ್ನಿ ಮತ್ತು ಮಕ್ಕಳು ಭಾರತದಲ್ಲಿ ವಾಸಿಸುತ್ತಿದ್ದಾರೆ. ಸಿಂಗ್ ಮೇಲಿನ ಈ ಹಲ್ಲೆಯಿಂದಾಗಿ ಆ ಪ್ರದೇಶದಲ್ಲಿ ವಾಸಿಸುತ್ತಿರುವ ಸಿಖ್ ಸಮುದಾಯ ತೀವ್ರ ಆಘಾತಕ್ಕೊಳಗಾಗಿದೆ.
ವರದಿಯ ಪ್ರಕಾರ, ಸಿಂಗ್ ಕಳೆದ ಆರು ವರ್ಷಗಳಿಂದ ಅಲ್ಲಿ ಅಂಗಡಿ ನಡೆಸುತ್ತಿದ್ದರು. ನಾಗರಿಕ ಹಕ್ಕುಗಳ ಸಂಘಟನೆ ಸಿಖ್ ಒಕ್ಕೂಟವು ಸಿಂಗ್ ಅವರ ಕುಟುಂಬ, ಸ್ನೇಹಿತರು ಮತ್ತು ಸ್ಥಳೀಯ ಸಮುದಾಯಕ್ಕೆ ಫೇಸ್ಬುಕ್ ಪೋಸ್ಟ್ನಲ್ಲಿ ಸಾಂತ್ವನ ವ್ಯಕ್ತಪಡಿಸಿದೆ. ಅಮೇರಿಕಾದಲ್ಲಿ ಸತತವಾಗಿ ಸಿಖ್ ಸಮುದಾಯದ ಜನರ ಮೇಲೆ ಆಗಾಗ ದಾಳಿಗಳು ನಡೆಯುತ್ತಿವೆ ಎಂಬುದು ಗಮನಾರ್ಹವಾಗಿದೆ.