Watch: ಕಾಶ್ಮೀರದ ಪ್ರಶ್ನೆಗೆ ಟ್ರಂಪ್ ಪ್ರತಿಕ್ರಿಯೆಯಿಂದ ಪಾಕ್ಗೆ ಮುಜುಗರ
ವಾಸ್ತವವಾಗಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ, ಪತ್ರಕರ್ತರು ಉಭಯ ದೇಶಗಳ ನಾಯಕರಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು.
ನವದೆಹಲಿ: 74 ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆ (ಯುಎನ್‌ಜಿಎ) ಅಧಿವೇಶನದಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ತೆರಳಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸೋಮವಾರ ಕಾಶ್ಮೀರ ವಿಷಯದಲ್ಲಿ ಮತ್ತೊಮ್ಮೆ ಮುಜುಗರಕ್ಕೊಳಗಾಗಿದ್ದರು ಮತ್ತು ಇದಕ್ಕೆ ಕಾರಣ ಪಾಕಿಸ್ತಾನಿ ಪತ್ರಕರ್ತರು.
ಹೌದು, ಪಾಕಿಸ್ತಾನಿ ಪತ್ರಕರ್ತರೊಬ್ಬರು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಪ್ರಶ್ನೆ ಕೇಳಿದರು. ವಾಸ್ತವವಾಗಿ, ಪಾಕಿಸ್ತಾನದ ಪತ್ರಕರ್ತರಿಂದ ಟ್ರಂಪ್ ಕಾಶ್ಮೀರದಿಂದ ಆರ್ಟಿಕಲ್ 370 ಅನ್ನು ತೆಗೆದುಹಾಕಿ ಭಾರತ ತನ್ನ ರಾಜ್ಯವನ್ನೇ ಎರಡು ಕೇಂದ್ರಾಡಳಿತ ಪ್ರದೇಶವಾಗಿ ಮಾಡಿರುವ ಬಗ್ಗೆ ನೀವು ಏನು ಹೇಳುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡೊನಾಲ್ಡ್ ಟ್ರಂಪ್, "ಇದು ನಾನು ಇಷ್ಟಪಡುವ ವರದಿಗಾರ. ನೀವು ಅವರ (ಇಮ್ರಾನ್) ತಂಡದ ಸದಸ್ಯರಾಗಿದ್ದೀರಾ?" ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವರದಿಗಾರ ಇಲ್ಲ ನಾನೊಬ್ಬ ಸ್ವತಂತ್ರ ಪತ್ರಕರ್ತ ಎಂದರು.
ಈ ಸಂದರ್ಭದಲ್ಲಿ ಮತ್ತೋರ್ವ ಪತ್ರಕರ್ತ, ಆರ್ಟಿಕಲ್ 370ನ್ನು ತೆಗೆದುಹಾಕಿದ ಬಳಿಕ ಅಲ್ಲಿನ ಜನರಿಗೆ 50 ದಿನಗಳವರೆಗೆ ಇಂಟರ್ನೆಟ್ ಸೇವೆ ಲಭ್ಯವಾಗಿಲ್ಲ. ಕಾಶ್ಮೀರದ ಜನತೆಗೆ ನೀವು ಏನನ್ನು ಹೇಳಲು ಬಯಸುತ್ತೀರಿ ಎಂದು ಡೊನಾಲ್ಡ್ ಟ್ರಂಪ್ ಅವರನ್ನು ಪ್ರಶ್ನಿಸಿದರು. ಇದಕ್ಕೆ "ನಿಮ್ಮ ಅನಿಸಿಕೆಗಳನ್ನು ನೀವು ಹೇಳುತ್ತಿದ್ದೀರಿ .. ಅದನ್ನು ಹೇಳಿಕೆಯಾಗಿ ಇಡುತ್ತೇನೆ" ಎಂದರು. ಬಳಿಕ "ಈ ರೀತಿಯ ವರದಿಗಾರರನ್ನು ನೀವು ಎಲ್ಲಿ ಕರೆತರುತ್ತೀರಿ? ಎಂದು ಇಮ್ರಾನ್ ಖಾನ್ ರನ್ನು ಪ್ರಶ್ನಿಸಿದ ಟ್ರಂಪ್ ಈ ವ್ಯಕ್ತಿಗಳು ಅದ್ಭುತ" ಎಂದಷ್ಟೇ ಪ್ರತಿಕ್ರಿಯಿಸಿದರು. ಇದನ್ನು ಕೇಳಿ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಮುಜುಗರಕ್ಕೊಳಗಾದರು.
ಅಮೆರಿಕಾದ ಅಧ್ಯಕ್ಷರು ಈ ಪತ್ರಕರ್ತನನ್ನು ನೀವು ಅವರ (ಇಮ್ರಾನ್ ಖಾನ್) ತಂಡದಿಂದ ಬಂದವರೇ? ಎಂದು ಕೇಳಿದರು. ಅಳದೆ, ನೀವು ಪ್ರಶ್ನೆಗಳನ್ನು ಕೇಳುವ ಬದಲು ಹೇಳಿಕೆ ನೀಡುತ್ತಿದ್ದೀರಿ ಎಂದು ಹೇಳಿದರು. ಇದು ಇಮ್ರಾನ್ ಖಾನ್ ಮತ್ತು ಈ ಪತ್ರಕರ್ತರನ್ನು ಮುಜುಗರಕ್ಕೀಡುಮಾಡಿದ್ದು ಮಾತ್ರವಲ್ಲ, ಪಾಕಿಸ್ತಾನದ ಚಾನೆಲ್‌ಗಳು ಸಹ ಆಘಾತಕ್ಕೊಳಗಾಗಿ, ಪ್ರಸಾರವನ್ನು ನಿಲ್ಲಿಸಬೇಕಾಯಿತು.