ನವದೆಹಲಿ: ಕೊರೊನಾ ಲಸಿಕೆಯ ಸೀಮಿತ ಪೂರೈಕೆಯಿಂದಾಗಿ ಪ್ರಪಂಚದಾದ್ಯಂತದ ಅನೇಕ ಬಡ ದೇಶಗಳು ಪ್ರಸ್ತುತ ತಮ್ಮ ದೇಶದ ಲಸಿಕೆ ಕಾರ್ಯಕ್ರಮವನ್ನು ಸರಿಯಾಗಿ ನಡೆಸಲು ಸಾಧ್ಯವಾಗುತ್ತಿಲ್ಲ. ಲಸಿಕೆ ಅಭಿಯಾನದ ಆರಂಭದ ನಂತರ ಅನೇಕ ದೇಶಗಳಲ್ಲಿ ಲಸಿಕೆಯ ಕೊರತೆಯಿದೆ, ಕೆಲವು ದೇಶಗಳಲ್ಲಿ ಜನರು ಮೊದಲ ಡೋಸ್ ನಂತರ ಎರಡನೇ ಡೋಸ್ ಪಡೆಯಲು ಸಾಧ್ಯವಾಗುತ್ತಿಲ್ಲ.
ಇಂತಹ ಪರಿಸ್ಥಿತಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಲಸಿಕೆಯ ಕೊರತೆ ನೀಗಿಸಲು ಸಲಹೆಯೊಂದನ್ನು ನೀಡಿದೆ.


COMMERCIAL BREAK
SCROLL TO CONTINUE READING

ಟ್ವೀಟ್ ಮಾಡಿ WHO ಸಲಹೆ:
ಪ್ರಸ್ತುತ ವಿಶ್ವದ ಹಲವು ದೇಶಗಳಲ್ಲಿ ಎದುರಾಗಿರುವ ಕರೋನಾ ಲಸಿಕೆ (Corona Vaccine) ಕೊರತೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಟ್ವೀಟ್ ಮಾಡುವ ಮೂಲಕ ಲಸಿಕೆಯ ಕೊರತೆ ಎದುರಿಸುತ್ತಿರುವ ದೇಶಗಳಿಗೆ ಸಲಹೆ ನೀಡಿದೆ. ಡಬ್ಲ್ಯುಎಚ್‌ಒ ಅಸ್ಟ್ರಾಜೆನೆಕಾ  (AstraZeneca) ಮೊದಲ ಡೋಸ್ ನಂತರ ಎರಡನೇ ಡೋಸ್ ಕೊರತೆಯಿದ್ದರೆ, ಅಂತಹ ದೇಶಗಳು ಎಂ-ಆರ್‌ಎನ್‌ಎ (m-RNA) ಲಸಿಕೆ ಫಿಜರ್ ಅಥವಾ ಮಾಡರ್ನಾವನ್ನು ಎರಡನೇ ಡೋಸ್ ಆಗಿ ಪಡೆಯಬಹುದು ಎಂದು ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಸಲಹೆಯ ಹಿಂದೆ ಲಸಿಕೆ ಪ್ರಮಾಣಗಳನ್ನು ಬೆರೆಸುವ ಕುರಿತು ಸಂಶೋಧನೆಗಳನ್ನು ನಡೆಸಿದೆ.


Kerala : ವ್ಯಾಕ್ಸಿನ್ ಪಡೆದ 39 ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್!


'ಎರಡು ಲಸಿಕೆ ಸುರಕ್ಷಿತವಾಗಿದೆ':
ವಿಶ್ವ ಆರೋಗ್ಯ ಸಂಸ್ಥೆಯ (World Health Organization) ಪ್ರಕಾರ, ವಿಜ್ಞಾನಿಗಳು ಎರಡು ಡೋಸ್ ಲಸಿಕೆ, ಅಂದರೆ ಒಂದು ಡೋಸ್ ಅಸ್ಟ್ರಾಜೆನೆಕಾ ಮತ್ತು ಇನ್ನೊಂದು ಡೋಸ್ ಎಂ-ಆರ್‌ಎನ್‌ಎ ಲಸಿಕೆ ಮಿಶ್ರಣ ಮಾಡುವ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ವೈಜ್ಞಾನಿಕ ಸಂಶೋಧನೆಯ ಪ್ರಾಥಮಿಕ ಫಲಿತಾಂಶಗಳು ಮೊದಲ ಡೋಸ್ ಅಸ್ಟ್ರಾಜೆನೆಕಾ ಮತ್ತು ಎರಡನೇ ಡೋಸ್ ಎಂ-ಆರ್‌ಎನ್‌ಎ ಲಸಿಕೆಗಳಾದ ಫೈಜರ್ ಅಥವಾ ಮಾಡರ್ನಾ ಅನ್ವಯಿಸುವುದು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಕಂಡುಹಿಡಿದಿದೆ. ಇಂತಹ ಪರಿಸ್ಥಿತಿಯಲ್ಲಿ, ಲಸಿಕೆಗಳ ತೀವ್ರ ಕೊರತೆಯಿರುವ ದೇಶಗಳು ತಮ್ಮ ನಾಗರಿಕರನ್ನು ಕರೋನಾವೈರಸ್‌ನಿಂದ ರಕ್ಷಿಸಲು ಈ ವಿಧಾನವನ್ನು ಬಳಸಬಹುದು ಎನ್ನಲಾಗಿದೆ.


ಇದನ್ನೂ ಓದಿ- Corona: ಸಂಪೂರ್ಣ ಸುರಕ್ಷಾ ಕವಚವಾಗಿ ಸಾಬೀತಾಯಿತು ಈ ಲಸಿಕೆ ; ಡೆಲ್ಟಾ ರೂಪಾಂತರದ ವಿರುದ್ದವೂ ಪರಿಣಾಮಕಾರಿ


WHO ಮೇಲೆ 51 ದೇಶದ ಜವಾಬ್ದಾರಿ :
ಒಂದು ಮಾಹಿತಿಯ ಪ್ರಕಾರ, ವಿಶ್ವದ 214 ದೇಶಗಳ ಪೈಕಿ 51 ದೇಶಗಳ ಲಸಿಕೆ ಹಾಕುವ ಅಭಿಯಾನವು ವಿಶ್ವ ಆರೋಗ್ಯ ಸಂಸ್ಥೆಯ ಸಹಾಯವನ್ನು ಆಧರಿಸಿದೆ. ಈ ಎಲ್ಲಾ ದೇಶಗಳು ಬಡ ದೇಶಗಳ ಪಟ್ಟಿಯಲ್ಲಿ ಬರುತ್ತವೆ. ಈ ದೇಶಗಳು ತಮ್ಮ ನಾಗರಿಕರಿಗೆ ಲಸಿಕೆ ಹಾಕಲು ಯಾವುದೇ ಲಸಿಕೆ ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಈ ದೇಶಗಳಿಗೆ ತಮ್ಮ ನಾಗರಿಕರ ಲಸಿಕೆಗಾಗಿ ಉಚಿತ ಲಸಿಕೆಗಳನ್ನು ಒದಗಿಸುವುದು ಮಾತ್ರವಲ್ಲ, ಈ ದೇಶಗಳಲ್ಲಿ ಲಸಿಕೆ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ವಿಶ್ವ ಆರೋಗ್ಯ ಸಂಸ್ಥೆಯ ಮೇಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ