ಜಕಾರ್ತಾ:  ಇಂಡೋನೇಷ್ಯಾದ ಪಶ್ಚಿಮ ಕರಾವಳಿಯಲ್ಲಿ ರಿಕ್ಟರ್ ಮಾಪಕದಲ್ಲಿ 7.4 ರಷ್ಟು ಪ್ರಬಲ ಭೂಕಂಪನವು ಶುಕ್ರವಾರ ಸಂಭವಿಸಿದೆ. ಈ ಹಿನ್ನಲೆಯಲ್ಲಿ ಈಗ ಸುನಾಮಿ ಉಂಟಾಗುವ ಸಾದ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

ಇಂಡೋನೇಷ್ಯಾದ ಹವಾಮಾನ ಮತ್ತು ಹವಾಮಾನ ಸಂಸ್ಥೆ ಬಿಕೆಎಂಜಿ ಪ್ರಕಾರ, 7.4 ತೀವ್ರತೆಯ ಭೂಕಂಪನವು ಸುಮಾರು 10 ಕಿಲೋಮೀಟರ್ ಕಡಲಾಚೆಯ ಆಳದಲ್ಲಿ ಸಂಭವಿಸಿದೆ, ಜಕಾರ್ತಾದ ನೈರುತ್ಯ ದಿಕ್ಕಿನಲ್ಲಿರುವ ಸುಮೂರ್‌ನಿಂದ 147 ಕಿ.ಮೀ. ದೂರದಲ್ಲಿದೆ ಎನ್ನಲಾಗಿದೆ.ಕರಾವಳಿ ಪ್ರದೇಶಗಳಾದ ಬಾಂಟೆನ್, ಪಶ್ಚಿಮ ಜಾವಾ, ಲ್ಯಾಂಪಂಗ್ ಮತ್ತು ಬೆಂಗ್ಕುಲುಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.



ಅಮೆರಿಕಾದ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) 6.8 ತೀವ್ರತೆಯ ಪ್ರಬಲ ಭೂಕಂಪನವು ಇಂಡೋನೇಷ್ಯಾದ ಪಶ್ಚಿಮ ಕರಾವಳಿಯಲ್ಲಿ 8 ಎಎಮ್ ಇಟಿ ನಂತರ ಸಂಭವಿಸಿದೆ ಎಂದು ಹೇಳಿದೆ. ಯುಎಸ್ ಏಜೆನ್ಸಿಯ ಪ್ರಕಾರ ಭೂಕಂಪ ಕೇಂದ್ರವು ಜಾವಾ ದ್ವೀಪದಲ್ಲಿರುವ ಬಾಂಟೆನ್ ಪ್ರಾಂತ್ಯದ ತುಗು ಹಿಲಿರ್ ನಗರದಿಂದ 65 ಮೈಲಿ ದೂರದಲ್ಲಿದೆ ಎನ್ನಲಾಗಿದೆ. ಭೂಕಂಪದ ನಂತರ ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿ ನಡುಕ ಉಂಟಾಯಿತು, ಜನರು ಹೆದರಿ ತಮ್ಮ ಮನೆಗಳಿಂದ ಹೊರಗೆ ಬಂದಿದ್ದಾರೆ. ಸಾವು ನೋವುಗಳ ಬಗ್ಗೆ ಯಾವುದೇ ತಕ್ಷಣದ ವರದಿಗಳಿಲ್ಲ ಎನ್ನಲಾಗಿದೆ.


ಭೂಕಂಪನ ಕೇಂದ್ರಬಿಂದುವು 10 ಕಿ.ಮೀ ಆಳದೊಂದಿಗೆ ಬ್ಯಾಂಟನ್‌ನ ಸುಮೂರ್‌ನಿಂದ ನೈರುತ್ಯಕ್ಕೆ 147 ಕಿ.ಮೀ ದೂರದಲ್ಲಿದೆ ಎಂದು ಜಕಾರ್ತಾ ಪೋಸ್ಟ್ ತಿಳಿಸಿದೆ. ಹವಾಮಾನ ಮತ್ತು ಭೂ ಭೌತಶಾಸ್ತ್ರ ಏಜೆನ್ಸಿಯ (ಬಿಎಂಕೆಜಿ) ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ 7.4 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ತಿಳಿಸಿದೆ.