ಟಿ20 ಪಂದ್ಯದ ವೇಳೆ ಅಫ್ಘಾನಿಸ್ತಾನದ ಕಾಬೂಲ್ನಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟ
ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿರುವ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಶ್ಪಜೀಜಾ ಕ್ರಿಕೆಟ್ ಲೀಗ್ ಟಿ20 ವೇಳೆ ಆತ್ಮಹತ್ಯಾ ಸ್ಫೋಟ ಸಂಭವಿಸಿದೆ.
ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿರುವ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಶ್ಪಜೀಜಾ ಕ್ರಿಕೆಟ್ ಲೀಗ್ ಟಿ20 ವೇಳೆ ಆತ್ಮಹತ್ಯಾ ಸ್ಫೋಟ ಸಂಭವಿಸಿದೆ.
ಬ್ಯಾಂಡ್-ಎ-ಅಮೀರ್ ಡ್ರಾಗನ್ಸ್ ಮತ್ತು ಪಮೀರ್ ಝಲ್ಮಿ ನಡುವೆ ಪಂದ್ಯ ನಡೆಯುತ್ತಿರುವಾಗ ಸ್ಫೋಟ ಸಂಭವಿಸಿದೆ. ದಾಳಿ ನಡೆದಾಗ ವಿಶ್ವಸಂಸ್ಥೆಯ ಅಧಿಕಾರಿಗಳು ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದರು ಎನ್ನಲಾಗಿದೆ.ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು 2013 ರಲ್ಲಿ ಐಪಿಎಲ್ ಶೈಲಿಯ ವೃತ್ತಿಪರ ಟಿ20 ಲೀಗ್ ಶ್ಪಜೀಜಾ ಕ್ರಿಕೆಟ್ ಲೀಗ್ ಅನ್ನು ಸ್ಥಾಪಿಸಿತು.
ತಾಲಿಬಾನ್ ಆಡಳಿತವನ್ನು ವಿರೋಧಿಸುವ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪು ಆರಂಭಿಸಿದ ಸರಣಿ ಬಾಂಬ್ ದಾಳಿಯಿಂದ ಅಫ್ಘಾನಿಸ್ತಾನವು ತತ್ತರಿಸಿದೆ.ಕಾಬೂಲ್‌ನ ಗುರುದ್ವಾರ ಕಾರ್ಟೆ ಪರ್ವಾನ್‌ನ ಗೇಟ್ ಬಳಿ ಸ್ಫೋಟ ಸಂಭವಿಸಿದ ಎರಡು ದಿನಗಳ ನಂತರ ಸ್ಫೋಟ ಸಂಭವಿಸದೆ. ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.