Aamir Liaquat: ಕೇವಲ 2 ತಿಂಗಳಿಗೆ 18 ವರ್ಷದ ಪತ್ನಿಗೆ ವಿಚ್ಛೇದನ ನೀಡಿದ್ರಾ ಪಾಕ್ ಸಂಸದ?
ತಮ್ಮ ಮತ್ತು ದಾನಿಯಾ ಶಾರ ವಿಚ್ಛೇದನದ ಸುದ್ದಿ ಕೇವಲ ವದಂತಿ ಎಂದು ಪಾಕಿಸ್ತಾನಿ ಸಂಸದ ಅಮೀರ್ ಲಿಯಾಕತ್ ಹುಸೇನ್ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಬಗ್ಗೆ ಪಿಟಿಐ ಪಕ್ಷದ ನಾಯಕ ಗಾಳಿಸುದ್ದಿ ಹರಡುತ್ತಿದ್ದಾರೆಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿ: ಪಾಕಿಸ್ತಾನದ ಸಂಸದ ಅಮೀರ್ ಲಿಯಾಕತ್ ಹುಸೇನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕಳೆದ ಬಾರಿ ಅವರು 18 ವರ್ಷದ ಸಯೀದಾ ದಾನಿಯಾ ಶಾರನ್ನು ವಿವಾಹವಾಗಿ ಸುದ್ದಿಯಾಗಿದ್ದರು. ಈ ಬಾರಿ ಅವರ ವಿಚ್ಛೇದನದ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಫೆಬ್ರವರಿಯಲ್ಲಿ ಮದುವೆಯಾಗಿದ್ದ ಇಮ್ರಾನ್ ಖಾನ್ ಪಕ್ಷದ ಈ ಮಾಜಿ ನಾಯಕ ಇದೀಗ ವಿಚ್ಛೇದನ ಪಡೆದಿದ್ದಾರೆ ಎನ್ನಲಾಗುತ್ತಿದೆ. ಈ ವರದಿಗಳ ಬಗ್ಗೆ ಸ್ವತಃ ಅಮೀರ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ಫೆಬ್ರವರಿಯಲ್ಲಿ ಮದುವೆ
ಪಾಕಿಸ್ತಾನದ ಸಂಸದರಾಗಿರುವ ಅಮೀರ್ ಲಿಯಾಕತ್ ಹುಸೇನ್ (49) ಈ ವರ್ಷದ ಫೆಬ್ರವರಿಯಲ್ಲಿ 18 ವರ್ಷದ ಸೈಯದಾ ದಾನಿಯಾ ಶಾರನ್ನು ವಿವಾಹವಾದರು. ಆ ಸಮಯದಲ್ಲಿ ಅವರ ಮದುವೆಯು ಪಾಕಿಸ್ತಾನದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ಸದ್ದು ಮಾಡಿತು. ಆದರೆ ಕೇವಲ ಎರಡೇ ತಿಂಗಳಲ್ಲಿ ಇವರಿಬ್ಬರ ವಿಚ್ಛೇದನದ ಸುದ್ದಿಯೂ ಮುನ್ನೆಲೆಗೆ ಬರತೊಡಗಿತು. ಈ ಸುದ್ದಿಯಿಂದ ಕಂಗೆಟ್ಟಿರುವ ಅಮೀರ್ ಇದೀಗ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: Shehbaz Sharif on India: ಪ್ರಧಾನಿ ಮೋದಿಗೆ ಕೃತಜ್ಞತೆ ಸಲ್ಲಿಸಿದ ಶಹಬಾಜ್ ಷರೀಫ್
ಪಿಟಿಐ ವಿರುದ್ಧ ಅಮೀರ್ ವಾಗ್ದಾಳಿ
ಈ ವರದಿಗಳ ಬೆನ್ನಲ್ಲೇ ಅಮೀರ್ ತನ್ನ ಹಳೆಯ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದಾನಿಯಾಗೆ ನಾನು ವಿಚ್ಛೇದನ ನೀಡಿದ್ದೇನೆಂಬ ವದಂತಿಯನ್ನು ಪಿಟಿಐ ಮತ್ತದರ ನಾಯಕರು ಹಬ್ಬಿಸುತ್ತಿದ್ದಾರೆಂದು ಕಿಡಿಕಾರಿದ್ದಾರೆ. ದಾನಿಯಾ ಜೊತೆಗಿನ ನನ್ನ ಸಂಬಂಧ ಚೆನ್ನಾಗಿಯೇ ಇದ್ದು, ವಿಚ್ಛೇದನದ ಮಾತುಗಳು ಕೇವಲ ವದಂತಿ ಎಂದು ಸ್ಪಷ್ಟನೆ ನೀಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ವೊಂದರಲ್ಲಿ, ‘ಪಿಟಿಐ ಮತ್ತು ಅದರ ಕೂಲಿ ಸೈನಿಕರು ನಾನು ದಾನಿಯಾ ಜೊತೆಗಿನ ಸಂಬಂಧವನ್ನು ಮುರಿದುಕೊಂಡಿದ್ದೇನೆಂಬ ವದಂತಿ ಹರಡುತ್ತಿದ್ದಾರೆ. ಈ ಎಲ್ಲಾ ವದಂತಿಗಳನ್ನು ನಾನು ನಿರಾಕರಿಸುತ್ತೇನೆ’ ಎಂಬು ಬರೆದುಕೊಂಡಿದ್ದಾರೆ.
ಮಾಜಿ ಪಕ್ಷಕ್ಕೆ ಎಚ್ಚರಿಕೆ!
‘ನಾವು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತೇವೆ. ಪಿಟಿಐ ಮತ್ತು ಅದರ ಬಾಡಿಗೆ ಗೂಂಡಾಗಳಿಗೆ ನಾನು ಎಚ್ಚರಿಕೆ ನೀಡಿದ್ದೇನೆ. ನನ್ನ ವಿಷಯದಲ್ಲಿ ಇಲ್ಲಸಲ್ಲದ ಅಪಪ್ರಚಾರ ಮಾಡಲು ಪ್ರಯತ್ನಿಸಬೇಡಿ, ಇಲ್ಲದಿದ್ದರೆ ನಾನೂ ಏನು ಅಂತಾ ತೋರಿಸಬೇಕಾಗುತ್ತದೆ’ ಅಂತಾ ಮಾಜಿ ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ. ಅಮೀರ್ ಮತ್ತು ದಾನಿಯಾ ವಯಸ್ಸಿನಲ್ಲೇ ಬಹಳ ವ್ಯತ್ಯಾಸವಿದೆ. ಈ ಕಾರಣಕ್ಕಾಗಿಯೇ ಅವರ ಮದುವೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ.
ಇದನ್ನೂ ಓದಿ: Blast from the past:ಬಾಲಿವುಡ್ ನಟಿ ರೇಖಾ ಜೊತೆ ಲವ್ವಲ್ಲಿ ಬಿದ್ದಿದ್ರಾ ಪಾಕ್ ಮಾಜಿ ಪಿಎಂ ಇಮ್ರಾನ್ ಖಾನ್?
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.