ನವದೆಹಲಿ: ತಾಲಿಬಾನ್ ಸ್ವಾಧೀನದ ನಂತರ ಈಗ ಆಫ್ಘಾನ್ ಪಾಪ್ ತಾರೆ ಆರ್ಯಾನ್ ಸಯೀದ್ ಇತ್ತೀಚಿಗೆ ಆಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಯನ್ನು ಅಮೇರಿಕಾ ಅರ್ಥೈಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ISIS ಮತ್ತು ತಾಲಿಬಾನ್‌ಗಳಿಗೆ ಭಯೋತ್ಪಾದಕರನ್ನು ಉತ್ಪಾದಿಸುತ್ತದೆ ಎಂದು ಆರೋಪಿಸುವ ಪಾಕಿಸ್ತಾನಕ್ಕೆ ಧನಸಹಾಯ ನೀಡುವುದನ್ನು ನಿಲ್ಲಿಸುವಂತೆ ಅವರು ಯುಎಸ್ ಸರ್ಕಾರವನ್ನು ಒತ್ತಾಯಿಸಿದರು.ಆಫ್ಘಾನ್ ನಾಗರಿಕರ ಸರಣಿ ಪೋಟೋಗಳನ್ನು ಹಂಚಿಕೊಂಡಿರುವ ಅವರು ಪಾಕ್ ಗೆ ನೀಡುತ್ತಿರುವ ಧನ ಸಹಾಯವನ್ನು ಅಮೇರಿಕಾ ನಿಲ್ಲಿಸಬೇಕೆಂದು ಅವರು ಕೇಳಿಕೊಂಡರು.


ಇದನ್ನೂ ಓದಿ: "ಆಫ್ಘಾನಿಸ್ತಾನಕ್ಕೆ ನಾವು ಬದ್ಧ, ಸಾಧ್ಯವಾದಲ್ಲಿ ತಾಲಿಬಾನ್ ಜೂತೆಗೂ ಕಾರ್ಯನಿರ್ವಹಿಸುತ್ತೇವೆ"


Afghanistan) ದಿಂದ ಪಲಾಯನ ಮಾಡಿ ಯುಎಸ್ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಆಗಸ್ಟ್ 19 ರಂದು ತನ್ನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಅವರು ವಿಮಾನದಲ್ಲಿನ ತನ್ನ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ಅವರು ಕತಾರ್‌ನ ದೋಹಾ ತಲುಪಿ ಇಸ್ತಾಂಬುಲ್‌ಗೆ ತನ್ನ ವಿಮಾನಕ್ಕಾಗಿ ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದರು.


ಇದನ್ನೂ ಓದಿ: First Taliban Fatwa: Afghanistanನಲ್ಲಿ ಮೊದಲ ತಾಲಿಬಾನಿ ಫತ್ವಾ ಜಾರಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಒಟ್ಟಿಗೆ ಓದುವಂತಿಲ್ಲ!


ಪಾಪ್ ತಾರೆ ಆರ್ಯಾನ ಸಯೀದ್ ಅತ್ಯಂತ ಜನಪ್ರಿಯ ಅಫ್ಘಾನ್ ಗಾಯಕಿ ಮತ್ತು ಟಿವಿ ವ್ಯಕ್ತಿಗಳಲ್ಲಿ ಒಬ್ಬರು. ಅವರು ಪರ್ಷಿಯನ್ ಮತ್ತು ಪಾಷ್ಟೋದಲ್ಲಿ ಹಾಡುತ್ತಾರೆ.ಕುತೂಹಲಕಾರಿ ಸಂಗತಿ ಎಂದರೆ, ಅವರು ಆಫ್ಘನ್ ಆವೃತ್ತಿಯ ದಿ ವಾಯ್ಸ್ಲ್ ನಲ್ಲಿ ಜಡ್ಜ್ ಆಗಿದ್ದರು.ನಂತರ, ಅವರು ಅಫಘಾನ್ ಸ್ಟಾರ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾದರು.ಅವರು ಅಫ್ಘಾನ್ ಐಕಾನ್ ಪ್ರಶಸ್ತಿ ಮತ್ತು 2017 ರ ಅಫ್ಘಾನಿಸ್ತಾನದ ಅತ್ಯುತ್ತಮ ಮಹಿಳಾ ಕಲಾವಿದೆಯಂತಹ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 


ಇದನ್ನೂ ಓದಿ : ತಮಿಳುನಾಡಿನ ನೂತನ ಸಚಿವ ಸಂಪುಟದಲ್ಲಿ ಸ್ಟಾಲಿನ್, ಗಾಂಧಿ, ನೆಹರು...!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.