ಕಾಬೂಲ್: Afghanistan Blast:ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮತ್ತೊಮ್ಮೆ ಬಾಂಬ್ ದಾಳಿಗೆ ನಲುಗಿಹೋಗಿದೆ. ಭಾನುವಾರ ನಗರದ ಐದು ವಿವಿಧ ಕಡೆಗಳಲ್ಲಿ ಸಂಭವಿಸಿರುವ ಸ್ಫೋಟಗಳಲ್ಲಿ 9 ಮಂದಿ ಮೃತಪಟ್ಟಿದ್ದು, 20 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನ್ ನ ಆಂತರಿಕ ಸಚಿವ ಮಸೂದ್ ಅಂದಾರಬಿ ಈ ದಾಳಿಗಳನ್ನು ದೃಢಪಡಿಸಿದ್ದಾರೆ. ಕಾಬೂಲ್ ನಲ್ಲಿ ನಡೆದಿರುವ ಈ ದಾಳಿಗಳಲ್ಲಿ ಒಟ್ಟು 9 ಜನರು ಮೃತಪಟ್ಟಿದ್ದು, 20 ಜನರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- ಕಾಬೂಲ್ ಆತ್ಮಾಹುತಿ ಬಾಂಬ್ ದಾಳಿ: ಸಾವಿನ ಸಂಖ್ಯೆ 30ಕ್ಕೆ ಏರಿಕೆ


ಅಫ್ಘಾನಿಸ್ತಾನದ ಅಮೆರಿಕಾದ ಏರ್ಬೇಸ್ ಮೇಲೆ ರಾಕೆಟ್ ದಾಳಿ
ಇತ್ತೀಚೆಗಷ್ಟೇ ಅಫ್ಘಾನಿಸ್ತಾನದಲ್ಲಿ ಹಲವಾರು ರಾಕೆಟ್ ದಾಳಿಗಳನ್ನು ನಡೆಸಲಾಗಿದೆ. ಒಂದು ದಿನದ ಹಿಂದೆ, ಅಫ್ಘಾನಿಸ್ತಾನದ ಪರ್ವಾನ್ ಪ್ರಾಂತ್ಯದ ಪ್ರಮುಖ ಯುಎಸ್ ವಾಯುನೆಲೆಯ ಬಾಗ್ರಾಮ್ ಏರ್ಫೀಲ್ಡ್ನಲ್ಲಿ ಹಲವಾರು ರಾಕೆಟ್ ಗಳ ಮೂಲಕ ದಾಳಿ ನಡೆಸಲಾಗಿದೆ. ಆದರೆ,  ಯಾವುದೇ ರೀತಿಯ ನಷ್ಟ ಅಥವಾ ಪ್ರಾಣಹಾನಿಯ ಕುರಿತು ವರದಿಯಾಗಿಲ್ಲ.  ಓರ್ವ ಪ್ರಾಂತೀಯ ವಕ್ತಾರರ ಹೆಸರನ್ನು ಉಲ್ಲೇಖಿಸಿ ವರದಿ ಮಾಡಿದ್ದ ಕ್ಸಿನ್ಹುವಾ, "ಕಲಂದರ್ ಖಿಲ್ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಟ್ರಕ್‌ನಿಂದ ಬೆಳಗ್ಗೆ 5.50 ಕ್ಕೆ ಬಾಗ್ರಾಮ್ ವಾಯುನೆಲೆಯಲ್ಲಿ ಐದು ಸುತ್ತು ರಾಕೆಟ್‌ಗಳನ್ನು ಹಾರಿಸಲಾಗಿದೆ. ಏಳು ರಾಕೆಟ್‌ಗಳು ವಿಫಲವಾಗಿದ್ದು, ಆಫ್ಘಾನ್ ಭದ್ರತಾ ಪಡೆಯ ಯೋಧರು ಅವುಗಳನ್ನು ನಿಷ್ಕ್ರೀಯಗೊಳಿಸಿದ್ದಾರೆ ಎಂದು ಹೇಳಿತ್ತು.


ಇದನ್ನು ಓದಿ- ಅಫ್ಘಾನಿಸ್ತಾನ: ಕಾಬೂಲ್‌ನ ಗುರುದ್ವಾರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಓರ್ವ ಭಾರತೀಯ ಮೃತ


ಆಫ್ಘಾನ್ ರಾಜಧಾನಿ ಕಾಬೂಲ್ (Kabul) ‌ನಿಂದ ಉತ್ತರಕ್ಕೆ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಬಾಗ್ರಾಮ್ ಏರ್‌ಫೀಲ್ಡ್ ಕಳೆದ 19 ವರ್ಷಗಳಿಂದ ಅಮೆರಿಕ ಮತ್ತು ನ್ಯಾಟೋ ಮಿಲಿಟರಿ ಪಡೆಗಳ ವಾಯುನೆಲೆಯಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಯಾವುದೇ ಸಂಘಟನೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ.


ಇದನ್ನು ಓದಿ-ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿ 15 ತಾಲಿಬಾನ್ ಉಗ್ರರ ಹತ್ಯೆ


ಇದಕ್ಕೂ ಮುನ್ನ ಡಿಸೆಂಬರ್ 12 ರಂದು ಕಾಬೂಲ್ ನಗರದ ವಿವಿಧ ಭಾಗಗಳಲ್ಲಿ 10 ರಾಕೆಟ್‌ ಗಳಿಂದ ನಡೆಸಲಾಗಿದ್ದ ದಾಳಿಯಲ್ಲಿ ಕನಿಷ್ಠ ಓರ್ವ ವ್ಯಕ್ತಿ ಮೃತಪಟ್ಟಿದ್ದು,  ಇಬ್ಬರು ಗಾಯಗೊಂಡಿದ್ದರು. ಇದೇ ವೇಳೆ, ನವೆಂಬರ್ 21 ರಂದು ನಗರದ ವಿವಿಧ ಭಾಗಗಳಲ್ಲಿ ಕನಿಷ್ಠ 23 ರಾಕೆಟ್‌ಗಳನ್ನು ಎಸೆಯಲಾಗಿತ್ತು, ಇದರಲ್ಲಿ ಎಂಟು ನಾಗರಿಕರು ಸಾವನ್ನಪ್ಪಿದ್ದರು.


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.