Afghanistan Crisis: ಅಮೆರಿಕಾದ NSA ಜೊತೆಗೆ ಚರ್ಚೆ ನಡೆಸಿದ ಭಾರತದ NAS ಅಜೀತ್ ಡೊಭಾಲ್ ಹೇಳಿದ್ದೇನು?
Afghanistan Crisis - ಸತತ ಎರಡು ದಶಕಗಳ ಯುದ್ಧದ ಬಳಿಕ ತಾಲಿಬಾನ್ ಇದೀಗ ಆಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದಿದೆ. ಆದರೆ, ಪ್ರಸ್ತುತ ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಭಾರತ ಹಾಗೂ ಅಮೆರಿಕಾದ NSAಗಳು ಈ ಕುರಿತುಂತೆ ಮಾತುಕತೆ ನಡೆಸಿದ್ದಾರೆ.
ನವದೆಹಲಿ: Afghanistan Crisis - ತಾಲಿಬಾನ್ (Taliban) ವಶಕ್ಕೆ ಬಂದ ನಂತರ ಅಫ್ಘಾನಿಸ್ತಾನದಲ್ಲಿ (Afghanistan) ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಅಫ್ಘಾನಿಸ್ತಾನದಿಂದ ಭಾರತೀಯರನ್ನು ಸುರಕ್ಷಿತ ಸ್ಥಳಾಂತರಿಸುವ ವಿಷಯದ ಕುರಿತು ಭಾರತೀಯ ಎನ್ಎಸ್ಎ ಅಜಿತ್ ಡೊಭಾಲ್ (NSA Ajit Dhobal) ಇಂದು ಬೆಳಗ್ಗೆ ಅಮೆರಿಕನ್ ಎನ್ಎಸ್ಎ (US NAS) ಜೊತೆ ಚರ್ಚೆ ನಡೆಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯ ನಾಗರಿಕರು ಮತ್ತು ಅಧಿಕಾರಿಗಳನ್ನು ಸ್ಥಳಾಂತರಿಸುವ ಕುರಿತು ಎನ್ಎಸ್ಎ ಡೊಭಾಲ್ ಚರ್ಚಿಸಿದ್ದಾರೆ.
ಇದಕ್ಕೂ ಮೊದಲು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಅವರು ವಿದೇಶಾಂಗ ಸಚಿವ ಎಸ್ ಜೈಶಂಕರ್ (Foreign Minister S. Jaishankar) ಜೊತೆ ಅಫ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ್ದಾರೆ. ಅವರು ತಾಲಿಬಾನ್ ಹಿಡಿತದಲ್ಲಿರುವ ದೇಶದಲ್ಲಿ ನೇರ ಆಸಕ್ತಿ ಹೊಂದಿರುವ ವಿದೇಶಾಂಗ ಮಂತ್ರಿಗಳಿಗೆ ದೂರವಾಣಿ ಕರೆ ಮಾಡಿದ್ದಾರೆ. ಈ ದೂರವಾಣಿ ಸಂಭಾಷಣೆಯ ಬಳಿಕ ಟ್ವೀಟ್ ಮಾಡಿರುವ ಜೈಶಂಕರ್, ಅಫ್ಘಾನಿಸ್ತಾನದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚರ್ಚಿಸುತ್ತ, "ಕಾಬೂಲ್‌ನಲ್ಲಿ (Afghanistan Crisis) ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಪುನಃಸ್ಥಾಪಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಯುಎಸ್ ನಡೆಸುತ್ತಿರುವ ಪ್ರಯತ್ನಗಳನ್ನು ಆಳವಾಗಿ ಶ್ಲಾಘಿಸುತ್ತೇನೆ." ಎಂದಿದ್ದರು.
ಕಾಬೂಲ್ ನಿಂದ ತನ್ನ ಅಧಿಕಾರಿಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳುತ್ತಿದೆ ಭಾರತ
ಭಾರತೀಯ ರಾಯಭಾರಿ ಕಚೇರಿ ಮತ್ತು ಇತರೆ ಸಿಬ್ಬಂದಿಯನ್ನು ಹೊತ್ತ ಭಾರತೀಯ ವಾಯುಪಡೆಯ ವಿಮಾನವು ಮಂಗಳವಾರ ಕಾಬೂಲ್ ನಿಂದ ಭಾರತಕ್ಕೆ ಹೊರಟಿದೆ. ಕಾಬೂಲ್‌ನಲ್ಲಿರುವ ಭಾರತದ ರಾಯಭಾರಿ ಕಚೇರಿ ಮತ್ತು ಅದರ ಭಾರತೀಯ ಸಿಬ್ಬಂದಿಯನ್ನು ಪ್ರಸ್ತುತ ದೇಶಕ್ಕೆ ಕರೆತರಲು ನಿರ್ಧರಿಸಲಾಗಿದೆ ಎಂದು ನಿನ್ನೆ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದರು.
ಇದನ್ನೂ ಓದಿ-ಜಾಗತಿಕ ಭಯೋತ್ಪಾದಕ ಬೆದರಿಕೆಯ ನಿಗ್ರಹಕ್ಕೆ ಜಗತ್ತು ಒಂದಾಗಬೇಕಾಗಿದೆ-ವಿಶ್ವಸಂಸ್ಥೆ
ಈ ಕುರಿತು ಟ್ವೀಟ್ ಮಾಡಿದ್ದ ಅರಿಂದಮ್ ಬಾಗ್ಚಿ, 'ಅಫ್ಘಾನಿಸ್ತಾನದಲ್ಲಿರುವ ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆ ಕಾಬೂಲ್ ನಲ್ಲಿರುವ ನಮ್ಮ ರಾಯಭಾರಿ ಹಾಗೂ ಅವರ ಭಾರತೀಯ ಸಿಬ್ಬಂಧಿಯನ್ನು ತಕ್ಷಣಕ್ಕೆ ಭಾರತಕ್ಕೆ ಕರೆತರಲಾಗುವುದು' ಎಂದು ಹೇಳಿದ್ದರು. ವಾಯುಸೇನೆಯ ಸಿ-17 ವಿಮಾನ ಸೋಮವಾರ ಕೆಲ ನೌಕರರನ್ನು ತೆಗೆದುಕೊಂಡು ಭಾರತಕ್ಕೆ ಬಂದಿಳಿದಿದೆ ಹಾಗೂ ಮಂಗಳವಾರ ಎರಡನೇ ವಿಮಾನವೂ ಕೂಡ ಗುಜರಾತ್ ನ ಜಾಮ್ ನಗರ ಏರ್ಪೋರ್ಟ್ ಬಂದು ತಲುಪಿದೆ. ಈ ವಿಮಾನದಲ್ಲಿ ಸುಮಾರು 150 ಭಾರತೀಯ ನಾಗರಿಕರು ಭಾರತಕ್ಕೆ ಮರಳಿದ್ದಾರೆ. ಇಂದು ಮಧ್ಯಾಹ್ನ ಈ ಎಲ್ಲರನ್ನು ಗಾಜಿಯಾಬಾದ್ ನಲ್ಲಿರುವ ಏರ್ಫೋರ್ಸ್ ಬೇಸ್ ಗೆ ರವಾನಿಸಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ