Afghanistan Crisis: ಭಾರತ-ಪಾಕಿಸ್ತಾನ ಗಡಿಯಲ್ಲಿ ಕಿತ್ತಾಡಲಿ, ನಮ್ಮನ್ನು ದೂರವೇ ಇಡಲಿ ಎಂದ ತಾಲಿಬಾನ್
Afghanistan Crisis: ತಾಲಿಬಾನ್ ತನ್ನ ನೆರೆ ರಾಷ್ಟ್ರಗಳ ಜೊತೆಗೆ ಉತ್ತಮ ಬಾಂಧವ್ಯ ಬಯಸುತ್ತದೆ ಎಂದು ಸ್ಟೈನಿಕಜೈ ಹೇಳಿದ್ದಾನೆ. ಖಾಸಗಿ ಚಾನೆಲ್ ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಆತಈ ವಿಷಯವನ್ನು ಹೇಳಿದ್ದಾನೆ.
Afghanistan Crisis: ತಾಲಿಬಾನ್ (Taliban) ನಾಯಕ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟೈನಿಕಜೈ (Taliban Foreign Affair Chief)ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧದ ಬಗ್ಗೆ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ. ಭಾರತ ಮತ್ತು ಪಾಕಿಸ್ತಾನವು ತಮ್ಮ ಆಂತರಿಕ ವ್ಯವಹಾರಗಳಲ್ಲಿ ಅಫ್ಘಾನಿಸ್ತಾನವನ್ನು ಬಳಸಬಾರದು ಎಂದು ಸ್ಟಾನಿಕ್‌ಜಾಯ್ ಹೇಳಿದ್ದಾನೆ. ಸ್ಟಾನಿಕ್‌ಜಾಯ್ ಕಾಬೂಲ್‌ನಲ್ಲಿ (Kabul) ತಾಲಿಬಾನ್ ಸರ್ಕಾರದ ಅಡಿಯಲ್ಲಿ ವಿದೇಶಿ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಖಾಸಗಿ ಚಾನೆಲ್ ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸ್ಟಾನಿಕ್‌ಜಾಯ್, ತಾಲಿಬಾನ್ ತನ್ನ ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತದೆ. ಭಾರತ -ಪಾಕ್ (India-Pakistan) ರಾಷ್ಟ್ರಗಳು ತಮ್ಮ ಗಡಿಯಲ್ಲಿ ಯುದ್ಧವನ್ನೇ ಮಾಡಲಿ, ಆದರೆ ತಾಲಿಬಾನ್ ವನ್ನು ತಮ್ಮ ವ್ಯಾಜ್ಯದಿಂದ ದೂರವಿಟ್ಟರೆ ಒಳಿತು ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ (Afghanistan)ತಾಲಿಬಾನ್ ಗೆಲುವನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಸ್ವಾತಂತ್ರ್ಯಕ್ಕೆ ಹೊಲಿಸುತ್ತಿದ್ದಾರೆ. ಆದರೆ, ಪಾಕಿಸ್ತಾನವು ತಾಲಿಬಾನ್ (Taliban) ವನ್ನು ಗುರುತಿಸುವುದಾಗಿ ಇನ್ನೂ ಘೋಷಣೆ ಮಾಡಿಲ್ಲ ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ-Afghanistan Crisis: ಯುಎಸ್ ಸೇರಿದಂತೆ 100 ದೇಶಗಳೊಂದಿಗೆ ತಾಲಿಬಾನ್ ಮಾಡಿಕೊಂಡಿದೆ ಈ ಒಪ್ಪಂದ
ತಾಲಿಬಾನ್ ಸರ್ಕಾರವು ಭಾರತದ ಬಗ್ಗೆ ಪೂರ್ವಗ್ರಹಪೀಡಿತ ಅಥವಾ ಪಾಕಿಸ್ತಾನದ ಜೊತೆ ಶಾಮೀಲಾಗಿ ಭಾರತವನ್ನು ಗುರಿಯಾಗಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಪ್ರಶ್ನೆಯನ್ನು ಕೇಳಿದಾಗ, ಅದಕ್ಕೆ ಪ್ರತಿಕ್ರಿಯಿಸಿರುವ ಸ್ಟಾನಿಕ್‌ಜಾಯ್ "ಮಾಧ್ಯಮಗಳಲ್ಲಿ ಬರುವ ಕೆಲವು ಸುದ್ದಿಗಳು ತಪ್ಪಾಗಿದೆ." ನಾವು ಅಂತಹ ಹೇಳಿಕೆಯನ್ನು ನೀಡಿಲ್ಲ ಮತ್ತು ನಮ್ಮ ಕಡೆಯಿಂದ ಅಂತಹ ಯಾವುದೇ ಸೂಚನೆ ನೀಡಲಾಗಿಲ್ಲ. ನಾವು ನಮ್ಮ ನೆರೆಯ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತೇವೆ" ಎಂದಿದ್ದಾರೆ.
ಇದನ್ನೂ ಓದಿ-ಅಫ್ಘಾನಿಸ್ತಾನದಲ್ಲಿ ಎರಡೇ ದಿನದಲ್ಲಿ 2 ನೇ ವೈಮಾನಿಕ ದಾಳಿ ನಡೆಸಿದ ಯುಎಸ್
ಭಾರತ ಮತ್ತು ಪಾಕಿಸ್ತಾನದ ನಡುವಿನ ದೀರ್ಘಕಾಲದ ಭೌಗೋಳಿಕ ಮತ್ತು ರಾಜಕೀಯ ವಿವಾದದ ಬಗ್ಗೆ ತಮಗೆ ತಿಳಿದಿರುವುದಾಗಿ ತಾಲಿಬಾನ್ ಮುಖಂಡ ಹೇಳಿದ್ದಾನೆ. ಆದರೆ ಅಫ್ಘಾನಿಸ್ತಾನವನ್ನು ಎರಡು ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಬಳಸಲಾಗುವುದಿಲ್ಲ ಎಂದು ತಾಲಿಬಾನ್ ಬಯಸುತ್ತಿದೆ ಎಂದಿದ್ದಾರೆ. " ಭಾರತ-ಪಾಕ್ ರಾಷ್ಟ್ರಗಳು ತಮ್ಮ ಆಂತರಿಕ ವ್ಯವಹಾರಗಳಿಗಾಗಿ ಅಫ್ಘಾನಿಸ್ತಾನವನ್ನು ಬಳಸುವುದಿಲ್ಲ ಎಂದು ನಾವು ಭಾವಿಸುತ್ತೇವೆ" ಎಂದು ಸ್ಟಾನಿಕ್‌ಜಾಯ್ ಹೇಳಿದ್ದಾರೆ. ಎರಡೂ ದೇಶಗಳ ನಡುವೆ ಉದ್ದವಾದ ಗಡಿ ಇದೆ. ಎರಡೂ ದೇಶಗಳು ತಮ್ಮ ಗಡಿಯಲ್ಲಿ ಹೋರಾಡಬಹುದು. ಆದರೆ, ಅವರು ಇದಕ್ಕಾಗಿ ಅಫ್ಘಾನಿಸ್ತಾನವನ್ನು ಬಳಸಬಾರದು ಮತ್ತು ಇದಕ್ಕಾಗಿ ಯಾವುದೇ ದೇಶವು ನಮ್ಮ ಭೂಮಿಯನ್ನು ಬಳಸಲು ನಾವು ಅನುಮತಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-ಪಂಜಶೀರ್ ಪ್ರಾಂತ್ಯದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದ ತಾಲಿಬಾನ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ