ಕಾಬೂಲ್: ಪೂರ್ವ ಅಫ್ಘಾನಿಸ್ತಾನದ ಮಸೀದಿಯಲ್ಲಿ ಶುಕ್ರವಾರ ನಡೆದ ಬಾಂಬ್ ಸ್ಫೋಟದಲ್ಲಿ 62 ಮಂದಿ ಸಾವನ್ನಪ್ಪಿದ್ದು, ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಶುಕ್ರವಾರ ಪ್ರಾರ್ಥನೆ ಸಲ್ಲಿಸಲು ಹೆಚ್ಚಿನ ಸಂಖ್ಯೆಯ ಮುಸಲ್ಮಾನರು ಮಸೀದಿಗೆ ಆಗಮಿಸಿದಾಗ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಹಸ್ಕಾ ಮೈನಾ ಜಿಲ್ಲೆಯ ಜಾವ್ ದಾರಾ ಪ್ರದೇಶದ ಮಸೀದಿಯೊಳಗೆ ಹಲವಾರು ಸ್ಫೋಟಗಳು ಸಂಭವಿಸಿವೆ ಎಂದು ನಂಗರ್ಹಾರ್ ಪ್ರಾಂತ್ಯದ ರಾಜ್ಯಪಾಲರ ವಕ್ತಾರ ಅತುಲ್ಲಾ ಖೋಗ್ಯಾನಿ ಹೇಳಿದ್ದಾರೆ. ಸ್ಫೋಟದಲ್ಲಿ ಮಸೀದಿಯ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿದಿದೆ ಎನ್ನಲಾಗಿದೆ.


ನಂಗರ್‌ಹಾರ್‌ನ ಪ್ರಾಂತೀಯ ಮಂಡಳಿಯ ಸದಸ್ಯ ಸೊಹ್ರಾಬ್ ಖಾದ್ರಿ ಮಾತನಾಡಿ, ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ, ಅವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದರು. ಮಸೀದಿ ಸಂಪೂರ್ಣವಾಗಿ ನಾಶವಾಗಿದೆ ಎಂದು ಪ್ರದೇಶದ ಜನರು ತಿಳಿಸಿದ್ದಾರೆ.


ಸ್ಥಳೀಯ ಪೊಲೀಸ್ ಉದ್ಯೋಗಿ ತೇಜಬ್ ಖಾನ್, ಮೌಲಾನಾ ಧಾರ್ಮಿಕ ಸಂದೇಶಗಳನ್ನು ನೀಡುತ್ತಿರುವಾಗ, ಅದೇ ಸಮಯದಲ್ಲಿ ಅವರ ಧ್ವನಿ ಇದ್ದಕ್ಕಿದ್ದಂತೆ ಜೋರಾಗಿ ಅಬ್ಬರಿಸಿತು. ಅವರು ಸ್ಥಳಕ್ಕೆ ತಲುಪಿದಾಗ, ಜನರು ಮೃತ ದೇಹಗಳನ್ನು ಹೊರತೆಗೆಯುತ್ತಿರುವುದು ಕಂಡು ಬಂದಿತು. ಅವಶೇಷಗಳಡಿ ನೂರಾರು ಮಂದಿ ಸಿಲುಕಿರುವವರನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದರು. 


ಈವರಗೂ ಯಾವುದೇ ಸಂಘಟನೆ ಈ ಘಟನೆಯ ಹೊಣೆ ಹೊತ್ತಿಲ್ಲ. ಸುದ್ದಿ ಸಂಸ್ಥೆ ಟೊಲೊ ಪ್ರಕಾರ, ತಾಲಿಬಾನ್ ಈ ಘೋರ ಘಟನೆಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.