ಇಸ್ಲಾಮಾಬಾದ್: 370 ನೇ ವಿಧಿಯನ್ನು ಕಾಶ್ಮೀರದಿಂದ ತೆಗೆದುಹಾಕಿದಾಗಿನಿಂದ ಭಾರತದೊಂದಿಗಿನ ವ್ಯಾಪಾರ ಸಂಬಂಧವನ್ನು ಹಾಳುಗೆಡವಿದ್ದ ಪಾಕಿಸ್ತಾನ, ಜೀವ ಉಳಿಸುವ ಔಷಧಿಗಳ ಕೊರತೆಯಿಂದಾಗಿ ಈಗ ಭಾರತದ ಮುಂದೆ ಮಂಡಿಯೂರಿದೆ. ಇದಕ್ಕಾಗಿ ಉಭಯ ದೇಶಗಳ ಮಧ್ಯೆ ಉದ್ವಿಗ್ನತೆಯ ನಡುವೆಯೂ ರೋಗಗಳ ನಿವಾರಣೆಗಾಗಿ ಭಾರತದಿಂದ ಔಷಧಿಗಳನ್ನು ಆಮದು ಮಾಡಿಕೊಳ್ಳಲು ಪಾಕಿಸ್ತಾನ ನಿರ್ಧರಿಸಿದೆ.


COMMERCIAL BREAK
SCROLL TO CONTINUE READING

ಅಂದರೆ, ಭಾರತದೊಂದಿಗೆ ವ್ಯಾಪಾರ-ವ್ಯವಹಾರ ಸ್ಥಗಿತಗೊಳಿಸಿದ್ದ ಪಾಕಿಸ್ತಾನ ಈಗ ಭಾರತದಿಂದ ಜೀವ ಉಳಿಸುವ ಔಷಧಿಗಳನ್ನು ಬಯಸಿದೆ. ಪಾಕಿಸ್ತಾನದ ಫೆಡರಲ್ ಸರ್ಕಾರ ಸೋಮವಾರ ಈ ನಿರ್ಧಾರವನ್ನು ತೆಗೆದುಕೊಂಡಿತು.


ಪಾಕಿಸ್ತಾನದ ವಾಣಿಜ್ಯ ಸಚಿವಾಲಯವು ಭಾರತದಿಂದ ಔಷಧಿಗಳನ್ನು ಆಮದು ಮಾಡಿಕೊಳ್ಳಲು ಮತ್ತು ರಫ್ತು ಮಾಡಲು ಅನುಮತಿ ನೀಡಿತು. ಕಳೆದ ತಿಂಗಳು ಪಾಕಿಸ್ತಾನವು ನೆರೆಯ ರಾಷ್ಟ್ರವಾದ ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರವನ್ನು ಸ್ಥಗಿತಗೊಳಿಸಿತು. ಭಾರತವು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370ನ್ನು ಸ್ಥಗಿತಗೊಳಿಸಿದ ನಂತರ ಪಾಕಿಸ್ತಾನ ಭಾರತದೊಂದಿಗಿನ ವ್ಯಾಪಾರ-ವಹಿವಾಟನ್ನು ಸ್ಥಗಿತಗೊಳಿಸಿತ್ತು.