ಗುಂಡು ಮಾಡುವ ಈ ಗಮ್ಮತ್ತಿಗೆ ಸೈ ಎಂದ ಸಂಶೋಧನೆ
ಒಂದು ಗ್ಲಾಸ್ ಬಿಯರ್ ಹಾಗೂ ವೈನ್ ಕುಡಿದ ಬಳಿಕ ವ್ಯಕ್ತಿ ವಿದೇಶಿ ಭಾಷೆ ಬಳಸುವಲ್ಲಿ ಹೆಚ್ಚು ಕಂಫರ್ಟ್ ಆಗಿರುತ್ತಾರೆ.
ನವದೆಹಲಿ: ಸಾಮಾನ್ಯವಾಗಿ ಗುಂಡು ಹಾಕಿದ ವ್ಯಕ್ತಿ ಇಂಗ್ಲಿಷ್ ನಲ್ಲಿ ಮಾತನಾಡಲು ಪ್ರಾರಂಭಿಸುತ್ತಾನೆ ಎಂದು ಎಲ್ಲರೂ ತಮಾಷೆ ಮಾಡುತ್ತಾರೆ. ಆದರೆ, ಇದೀಗ ಈ ಅಂಶ ನಿಜವೆಂದು ಸಾಬೀತಾಗಿದೆ. ಒಂದು ಗ್ಲಾಸ್ ಬಿಯರ್ ಅಥವಾ ವೈನ್ ಕುಡಿದ ನಂತರ ಜನರು ವಿದೇಶಿ ಭಾಷೆಗಳನ್ನು ಮಾತನಾಡುವುದರಲ್ಲಿ ಹೆಚ್ಚು ಕಂಫರ್ಟ್ ಆಗಿರುತ್ತಾರೆ ಎಂದು ವಿಜ್ಞಾನಿಗಳು ತಮ್ಮ ಸಂಶೋಧನೆಯಲ್ಲಿ ಕಂಡುಹಿಡಿದಿದ್ದಾರೆ. ಒಂದು ಬಾರಿ ವ್ಯಕ್ತಿಯೋಳಗಿನ ಹಿಂಜರಿಕೆ ಮುಗಿದ ನಂತರ, ಜನರು ವಿದೇಶಿ ಭಾಷೆಗಳಲ್ಲಿ ಹೆಚ್ಚು ಸರಿಯಾಗಿ ಮಾತನಾಡಲು ಪ್ರಾರಂಭಿಸುತ್ತಾರೆ ಎಂದು ವಿಜ್ಯಾನಿಗಳು ಒಪ್ಪಿಕೊಂಡಿದ್ದಾರೆ.
ಕೇವಲ ಭಾರತದಲ್ಲಿ ಅಷ್ಟೇ ಅಲ್ಲ ವಿಶ್ವಾದ್ಯಂತ ವಿದೇಶಿ ಭಾಷೆ ಕಲಿಯಲು ಅಲ್ಕೋಹಾಲ್ ಸಹಕರಿಸುತ್ತದೆ
ಸೈಕೋಫಾರ್ಮಾಕಾಲಜಿ ಜರ್ನಲ್ ನಲ್ಲಿ ಪ್ರಕಟವಾದ ಒಂದು ಸಂಶೋಧನೆಯ ಪ್ರಕಾರ, ವಿಶ್ವಾದ್ಯಂತ ಜನರು ಕುಡಿದ ನಂತರ ವಿದೇಶಿ ಭಾಷೆಗಳನ್ನು ಸಲೀಸಾಗಿ ಮಾತನಾಡುತ್ತಾರೆ ಎನ್ನಲಾಗಿದೆ. ಮನಸ್ಸಿನಲ್ಲಿರುವ ಹಿಂಜರಿಕೆಯನ್ನು ಈ ಎರಡೂ ಪಾನೀಯಗಳು ನಿವಾರಿಸುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಬ್ರಿಟಿಷ್ ಮತ್ತು ಡಚ್ ವಿಜ್ಞಾನಿಗಳು ನಡೆಸಿದ ಈ ಅಧ್ಯಯನದಲ್ಲಿ ಕುಡಿದ ಜನರು ತಮ್ಮ ಅಗೌರವದ ಭಯದಿಂದ ಹೊರಬರುತ್ತಾರೆ ಎಂದು ಹೇಳಲಾಗಿದೆ. ವಾಸ್ತವವಾಗಿ, ಜನರು ತಮ್ಮ ಸ್ಥಳೀಯ ಭಾಷೆಯನ್ನು ಹೊರತುಪಡಿಸಿ ಬೇರೆ ಭಾಷೆಯನ್ನು ಮಾತನಾಡಲು ಹಿಂಜರಿಯಲು ಇದು ಒಂದೇ ಕಾರಣವಾಗಿದೆ.
ಸಾರಾಯಿ ಕಾರಣ ಜನರು ವಿದೇಶಿ ಭಾಷೆ ಕಲಿಯುತ್ತಾರಂತೆ
ಈ ಸಂಶೋಧನೆಗಾಗಿ ಮಾಸ್ಟ್ರಿಚ್ ವಿಶ್ವವಿದ್ಯಾಲಯದಲ್ಲಿ ಸುಮಾರು 50 ಜನರು ಭಾಗಿಯಾಗಿದ್ದರು. ಅವರೆಲ್ಲರೂ ಡಚ್ ಕಲಿಯಲು ಬಯಸುವ ಜರ್ಮನ್ ಭಾಷಿಗರಾಗಿದ್ದರು. ಪರೀಕ್ಷೆಯ ಸಮಯದಲ್ಲಿ, ಅರ್ಧದಷ್ಟು ಜನರಿಗೆ ನೀರು ನೀಡಲಾಗಿದ್ದು, ಉಳಿದ ಅರ್ಧದಷ್ಟು ಜನರಿಗೆ ಪ್ರಶ್ನೋತ್ತರದ ಸಮಯದಲ್ಲಿ ಸಾರಾಯಿ ನೀಡಲಾಗಿತ್ತು. ಮದ್ಯಪಾನ ಮಾಡಿ ಡಚ್ ಮಾತನಾಡಲು ಪ್ರಯತ್ನಿಸಿದವರೆಲ್ಲರೂ ಪಾಸ್ ಆಗಿದ್ದಾರೆ. ನೀರು ಕುಡಿದು ಡಚ್ ಮಾತನಾಡಿದ ಜನರಿಗಿಂತ ಸಾರಾಯಿ ಕುಡಿದು ಡಚ್ ಮಾತನಾಡಿದವರು ಹೆಚ್ಚು ಕಾನ್ಫಿಡೆಂಟ್ ಆಗಿರುವುದು ತಿಳಿದುಬಂದಿದೆ.